Previous ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ ಬಸವೇಶನ ಧ್ಯಾನವನ್ನು ಮಾಡಬೇಕವ್ವ Next

ಶರಣರಿಗೆ ಶರಣು

*

ಮಾಡುವೆ ಶರಣು ಮಾಡುವೆ | ನಮ್ಮ ಕೂಡಲ ಸಂಗನ ಶರಣರ ಪಾದಕ್ಕೆ

ಮಾಡುವೆ ಶರಣು ಮಾಡುವೆ | ನಮ್ಮ ಕೂಡಲ ಸಂಗನ ಶರಣರ ಪಾದಕ್ಕೆ
ಮಾಡುವೆ ಶರಣು ಮಾಡುವೆ |ಪ|

ಮೇದಾರ ಕೇತಯ್ಯ | ಹಡಪದ ಅಪ್ಪಣ್ಣ | ಆಯ್ದಕ್ಕಿ ಮಾರಯ್ಯ ಅಜಗಣ್ಣಂಗೆ (ಅಜಗಣ್ಣನಿಗೆ) |
ಮೈದುನ ರಾಮಯ್ಯ | ಮನೋಹರ ಮಡಿವಾಳ | ಮರುಳ ಶಂಕರ ಸಿದ್ಧ ರಾಮಯ್ಯಗೆ | ಮಾಡುವೆ..... |1|

ನನ್ನಯ್ಯ ನಾದಯ್ಯ | ಬೆಂಬಿಡದ ಚಾಮರ | ಕಂಬಳಿ ಮರುಳ ಕಕ್ಕಯ್ಯಗೆ |
ಅಕ್ಕನಾಗಮ್ಮನ ಕರುಣೆಯ ಕಂದಗೆ | ಅಂಬಿಗರ ಚೌಡಯ್ಯ | ಘಟ್ಟಿವಾಳಯ್ಯಗೆ | ಮಾಡುವೆ..... |2|

ಮಲ್ಲಿಗೆ ಬ್ರಹ್ಮಯ್ಯ | ಮಧುವರಸ ಚಾಮರಸ | ಬಿಲ್ಲಾಳ ಬಂಕಾದ ಮಾರಯ್ಯಗೆ |
ಬಿಲ್ಲಾಳ ಗೊಲ್ಲಾಳ | ಕನ್ನಪ್ಪ ಕರಿಕಾಮ | ನುಲಿಯ ಚಂದಯ್ಯ | ಮೋಳಿಗೆ ಮಾರಯ್ಯಗೆ | ಮಾಡುವೆ..... |3|

ಸತ್ಯಕ್ಕ ದೊಡ್ಡವ್ವ | ಶ್ರೀ ನೀಲಲೋಚನೆ | ಮುಕ್ತಾಯಿ ಚಾಂಗೋಳ್ಳಿ ಗೊಗ್ಗವೆಗೆ |
ಸತ್ತ ಗಂಡನ ಪಡೆದ | ಹೆತ್ತ ಮಗನ ಕೊಂದ | ಬತ್ತಲೆ ಕದಳಿಯ ಹೊಕ್ಕ ಮಹಾದೇವಿಗೆ | ಮಾಡುವೆ..... |4|

ಧರೆಯೊಳು ಏಳುನೂರ ಎಪ್ಪತ್ತು ಅಮರಗಣಂಗಳು |
ಅರವತ್ತುಮೂರು ಪುರಾತನಗಳು | ಪುಷ್ಪ ದೀಪ ಧೋಪಾ ಪರಿಪೂರ್ಣದಿಂದಲಿ ಪ್ರಭುವಿನ ಪಾದಕ್ಕೆ | ಮಾಡುವೆ..... |5|

ಪರಿವಿಡಿ (index)
*
Previous ಮನೆಗೆ ಬಾರಮ್ಮ ಶರಣಿ ಮನೆಗೆ ಬಾರಮ್ಮ ಬಸವೇಶನ ಧ್ಯಾನವನ್ನು ಮಾಡಬೇಕವ್ವ Next