Previous ದಂಪತಿಗಳ ಮೇಲೆ ಪುಷ್ಪವೃಷ್ಟಿ ಗಣಲಿಂಗ ಗೀತೆ Next

ಗರ್ಭಿಣಿಗೆ ಉಡಿ ತುಂಬುವುದು

*

ಉಡಿಯ ತುಂಬುವ ಬನ್ನಿರಿ

ಸೀಮಂತದ ಸಮಯದಲ್ಲಿ ಲಿಂಗಧಾರಣೆ ಆದ ಮೇಲೆ ಪುಷ್ಪವೃಷ್ಟಿ ಮತ್ತು ಆರತಿಯನ್ನು ಮಾಡಿ ನಂತರ ಗರ್ಭಿಣಿಗೆ ಉಡಿ ತುಂಬಬೇಕು.

ಉಡಿಯ ತುಂಬುವ ಬನ್ನಿರಿ | ಶರಣೆಯರು
ಉಡಿಯ ತುಂಬುವ ಬನ್ನಿರಿ. || ಪಲ್ಲವಿ ||

ಫಲಪುಷ್ಪ ವಸ್ತ್ರಂಗಳ ಬಲು ಮುದದಿ ನೀಡುತ್ತ
ಮಂಗಳ ಮುಂಬೆಳಕು ನೀನಾಗು ಎಂದರಸಿ || ಅ. ಪ||

ಶ್ರೀ ಗುರು ಬಸವಣ್ಣಂಗೆ ಶರಣಾಗುತ್ತ
ಲಿಂಗದೇವನ ಧರಿಸಿ
ಶರಣ ಗಣಕ್ಕೆ ಶರಣಾಗಿ ಕರುಣ ಪ್ರಸಾದ ಪಡೆದು
ಗಣಪದವಿ ಪಡೆದುದಕ್ಕೆ ಹಿಗ್ಗಿ ನಲಿದಾಡುತ್ತ ||1||

ಹಣೆಯಲ್ಲಿ ಮೂರೆಳೆಯ ಭಸ್ತವಿಡುತ |
ಕುಂಕುಮದ ತಿಲಕವ
ಮುಡಿಗೆ ಪುಷವನಿಟ್ಟು ಕೊರಳಿಗೆ ಮಾಲೆ ಹಾಕಿ
ಸಡಗರದಿಂದ ಪರಿಮಳವ ಪೂಸುತ್ತ ||2||

ಮಡಿಲಿಗೆ ವಸವೊಂದ ಇಡುತಲಿ
ತೆಂಗಿನ ಶ್ರೀ ಫಲವ
ವೀಳೆಯ ಅಡಿಕೆಗಳ ವಚನ ಪುಸ್ತಕ ಇಟ್ಟು
ಕದಳಿಯ ಫಲಗಳ ಮುದದಿಂದ ನೀಡುತ್ತ ||3||

ಗರ್ಭದೊಳು ನೆಲೆಸಿರುವ ಮುದ್ದು ಕಂದನು
ಚೆಂದಾಗಿ ಬೆಳೆಯಲೆಂದು
ಮಂಗಲದಾರತಿ ಹಿಂಗದೆ ಬೆಳಗುತ್ತ
ಮನೆಮನ ಬೆಳಗುವ ಜ್ಯೋತಿಯಾಗಲೆಂದು ಹರಸಿ ||4||

ಶ್ರೀ ಗುರು ಬಸವಣ್ಣನ ಶುಭರಕ್ಷೆಯು
ಎಂದೆಂದು ಕಾಯಲೆಂದು
ಮಂಗಲದಾರತಿ ಹಿಂಗದೆ ಬೆಳಗುತ್ತ
ಮನೆಯ ಮಂಗಲಜ್ಯೋತಿ ನೀನಾಗು ಎಂದ್ಹರಸಿ ... ||5||

ವಿಶೇಷ ಸೂಚನೆ : ತೆಂಗಿನ ಕಾಯಿ, ಹಣ್ಣುಗಳನ್ನು ಉಡಿಯಲ್ಲಿಡಬೇಕು. ತೆಂಗಿನಕಾಯಿಗೆ ಪೂಜೆ ಸಲ್ಲಿಸಬಾರದು.

*
ಪರಿವಿಡಿ (index)
Previous ದಂಪತಿಗಳ ಮೇಲೆ ಪುಷ್ಪವೃಷ್ಟಿ ಗಣಲಿಂಗ ಗೀತೆ Next