ಭುವಿಯ ಬೆಳಕು ಗುರು ಬಸವ | ಗುರು ಬಸವಣ್ಣನ ನೆನೆಯೋಣ |
ಬಸವ ಧ್ಯಾನ ಮಾಡಿರಣ್ಣಾ |
ಬಸವ ಬಸವ ಬಸವಾ ಎಂದು | ಬಸವ ಧ್ಯಾನ ಮಾಡಿರಣ್ಣಾ |
ಬಸವ ಧ್ಯಾನ ಮಾಡಿದರೆ | ದುರಿತವೆಲ್ಲ ದೂರವಣ್ಣ |ಪ|
ಉದಯದಲೆದ್ದು ಸ್ನಾನವ ಮಾಡಿ | ಬಸವ ಬಸವಾ ಎಂದು ಜಪಿಸಿ |
ಇಷ್ಟಲಿಂಗ ಪೂಜೆಯ ಮಾಡಿ | ದುರಿತ ಕರ್ಮವ ಕಳೆಯಿರಣ್ಣಾ |1|
ಕಾಯಕವೇ ಕೈಲಾಸವೆಂಬ | ಬಸವ ನುಡಿಯ ಸಾಧಿಸಿರಣ್ಣಾ |
ದಯವೇ ಧರ್ಮದ ಮೂಲವೆಂದು | ಮರ್ಮ ತಿಳಿದು ನಡೆಯಿರಣ್ಣಾ |2|
ನಡೆಯುವಾಗ ನುಡಿಯುವಾಗ | ಕಷ್ಟದಲ್ಲಿ ಬಳಲುವಾಗ |
ದುಷ್ಟ ಜನರ ಕೈಗೆ ಸಿಲುಕಿ | ನಷ್ಟ ಪಡುವ ಸಮಯದಲ್ಲಿ |3|
ಎತ್ತ ನೋಡಿದಡತ್ತ ದೇವನ | ತೋರಿಸಿಕೊಟ್ಟಂಥ ಬಸವಾ |
ದೇಹವೆ ದೇಗುಲವನೆ ಮಾಡಿ | ದೇವರ ತೋರಿಸಿದ ಬಸವಾ |4|
ಭುವಿಯ ಬೆಳಕು ಗುರು ಬಸವ | ಗುರು ಬಸವಣ್ಣನ ನೆನೆಯೋಣ |