*
ಯಾವಾಗ ನೋಡಲು ಲಿಂಗಪೂಜೊಂದಾಗುತೈತಣ್ಣ
ಲಿಂಗಪೂಜೊಂದಾಗುತೈತೆ
ಲಿಂಗಪೂಜೊಂದಾಗುತೈತೆ
ಅಂಗಯೆಂಬ ಗುಡಿಯ ಒಳಗೆ
ಕಂಗಳೆಂಬ ಅರಿವು ತಾನು
ಲಿಂಗನಿಗೆ ತೋರುತಿದೆ ||ಪ||
ಆರುಮೂರು ಕಟ್ಟಬೇಕಣ್ಣ ಆ ಲಿಂಗಪೂಜೆಗೆ
ಆರುಮೂರನೆ ಮರೆಯಬೇಕಣ್ಣ
ಆರುಮನೆಯ ದಾಂಟಿ ಬಂದು
ಮೂರುಮ್ಮನಿಯ ನಟ್ಟ ನಡುವೆ
ಏರಿ ಶಿರದಲಿ ನೋಡುತ
ಭೋರುಗುಟ್ಟು ಕೂಗುತೈತೆ ||೧||
ನಾಕು ಹಾದಿ ನಡುವೆ ಐತಣ್ಣ ಆ ಲಿಂಗಪೂಜೆಗೆ
ಮೇಲಕೆರಿಸಿ ನಿಲ್ಲಬೇಕಣ್ಣ
ಕಾಕುಬುದ್ಧಿ ಕಳಿಯಬೇಕು
ನೂಕಬೇಕು ಮದಗಳೆಂಟ
ಜೋಕೆಯಿಂದ ನೋಡಿದರೆ
ಅನೇಕ ಬೆಳಕು ಕಾಣುತೈತೆ ||೨||
ಯೋಗಿ ಉನ್ಮನಿವಾಸಕಾಣಣ್ಣ ನಿಜ ನಂಬಿದವರಿಗೆ
ಆಗ ಚಿನ್ಮಯರೂಪು ಕಾಣಣ್ಣ
ಆಗ ಈಗಯೆನ್ನದೆ ಲಿಂಗಪೂಜೆಯಾಗುತ್ತಿರಲು
ಹೋಗುವಾಗ ಗಂಗಾದರನ
ಭಾಗ್ಯದಿಂದಲೆ ಪಾಲಿಸಯ್ಯ. || ೩||
*