Previous ಇಷ್ಟಲಿಂಗಾರ್ಚನೆ ಮಂತ್ರ/ಗೀತೆಗಳು ಅನುಭವದಡಿಗೆ Next

ಇಷ್ಟಲಿಂಗಾರ್ಚನೆ ಮಂಗಲ ಗೀತೆ

*

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಜಯ ಜಯ ಘನಲಿಂಗ

ಜಯ ಜಯ ಘನಲಿಂಗ ಹೇ ಸಚ್ಚಿದಾನಂದ
ಗಣಲಿಂಗವಾಗಿಹ ಜಯ ಲಿಂಗದೇವ ಜೈ ಜೈ || ಪಲ್ಲವಿ||

ಹುಟ್ಟು ಸಾವುಗಳಿಲ್ಲ ಮುಟ್ಟು ಮೈಲಿಗೆಯಿಲ್ಲ
ಮಾತಾಪಿತೃಗಳಿಲ್ಲ ಬಂಧು ಬಾಂಧವರಿಲ್ಲ
ಜಾತಿ ಗೋತ್ರಗಳಿಲ್ಲಿ ಮೇಲು ಕೀಳುಗಳಿಲ್ಲ
ಹೆಣ್ಣಲ್ಲ ಗಂಡಲ್ಲ ಪಶು ಪಕ್ಷಿಯಲ್ಲ ಜೈ ಜೈ || 1 ||

ಆದಿ ಅಂತ್ಯಗಳಿಲ್ಲಿ ನಾಮ ಸೀಮೆಗಳಿಲ್ಲ
ಎಡೆಯಿಲ್ಲ ಕಡೆಯಿಲ್ಲ ಜಗದೊಡೆಯ ನೀನು
ಕುಲವಿಲ್ಲ ಛಲವಿಲ್ಲ ಪತ್ನಿ - ಪುತ್ರರು ಇಲ್ಲ
ನಾಮ ರೂಪುಗಳಿರದ ಬಯಲ ಬ್ರಹ್ಮ ಜೈ ಜೈ ||2||

ಸೃಷ್ಟಿ ಸ್ಥಿತಿ ಲಯಗಳ ಕಾರಣ ಕರ್ತೃವೆ
ನಿತ್ಯ ನಿರ್ಮಲನೆ ಸತ್ಯ ಶಾಶ್ವತನೆ
ಕರುಣೆಯಿಂ ಇಳೆಗಿಳಿದ ಆನಂದ ರೂಪನೆ
ಸಾಕ್ಷಿಚೇತನವಾದ ಜಯ ಗಣಲಿಂಗ ಜೈ ಜೈ || 3 ||

ಅಮೂಲ್ಯ ಅಗಮ್ಯ ಅಪ್ರಮಾಣನೆ ದೇವಾ
ನಿನ್ನ ಸ್ತುತಿಸಲು ನಾನು ಎಷ್ಟರವಳಯ್ಯಾ
ಮಂಗಳಾರತಿ ಬೆಳಗಿ ಜಯ ಘೋಷಗೈವೆ
ಸಚ್ಚಿದಾನಂದ ನೀ ಘನ ಲಿಂಗದೇವಾ ಜೈ ಜೈ || 4 ||

*
ಪರಿವಿಡಿ (index)
Previous ಇಷ್ಟಲಿಂಗಾರ್ಚನೆ ಮಂತ್ರ/ಗೀತೆಗಳು ಅನುಭವದಡಿಗೆ Next