ಕನ್ನಡ ನೆಲದಲಿ ಹುಟ್ಟಿದ ನಾನು
|
|
*
ಕನ್ನಡ ನೆಲದಲಿ ಹುಟ್ಟಿದ ನಾನು
ಕನ್ನಡ ನೆಲದಲಿ ಹುಟ್ಟಿಹ ನಾನು
ಕನ್ನಡ ತಾಯಿಗೆ ನಮಿಸುವೆನು || ಪ ||
ಕನ್ನಡ ವಾಣಿಯ ಡಿಂಡಿಮ ಬಾರಿಸಿ
ಕನ್ನಡ ಧ್ವಜವನ್ನು ಹಾರಿಪೆನು ||ಅ. ಪಲ್ಲವಿ ||
ವಾಣಿಯ ವೀಣೆಯ ಮಿದು ಝಂಕಾರವೋ ?
ಕೋಕಿಲೆ ಕಂಠದ ಗಾನದ ಹೊನಲೊ ?
ಕಂಚಿನ ಗಂಟೆಯ ಇಂಪಿನ ನಾದವೊ ?
ಕನ್ನಡದಿಂಚರ ಇಂತಿಹುದಲ್ವೇ ? || 1 ||
ಬಸವಾಲ್ಲಮರು ಉದಿಸಿದ ನಾಡು
ಪಂಪರನ್ನರ ನೆಚ್ಚಿನ ಬೀಡು
ಸಾಹಿತ್ಯ ಸೌರಭ ಚಂದನ ಕಾಡು
ಕನ್ನಡ ವಾಣಿಯ ಜೇಂಗೂಡು || 2 ||
ಸಂಸ್ಕೃತಿ-ಸೌರಭ ಮೆರೆಯುವ ನೆಲವು
ಸರ್ವಧರ್ಮಕೆ ನಂದನವನವು
ಶಾಂತಿಪ್ರೀತಿಯ ಸುಂದರ ಸಂಗಮ
ಸಮರಸ ಸಾರುವ ಕೂಡಲ ಸಂಗಮ || 3 ||
ಕನ್ನಡ ನೆಲವೇ ತಾಯಿಯ ಮಡಿಲು
ಕನ್ನಡ ನುಡಿಯೇ ಪೋಷಿಪ ಹಾಲು
ಕನ್ನಡದೇಳೆಗೆ ಎನ್ನಯ ಹರಣ
ಹಿಡಿದು ನುಡಿಯುವೆ ದೇವನ ಚರಣ ||4||
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
*