Previous ಬಸವೇಶ್ವರರ ಜೋಗುಳ ಪದ- 2 ಅಕ್ಕನಾಗಮ್ಮನ ಜೋಗುಳ ಪದ Next

ಬಸವ ಧರಗೆ ಬಂದ ಜೋ ಜೋSSS...

*

ಬಸವ ಧರಗೆ ಬಂದ ಜೋ ಜೋSS...

ಬಸವ ಧರಗೆ ಬಂದ ಜೋ ಜೋ
ಬಸವ ಧರಗೆ ಬಂದ ಜೋ ಜೋ
ಕರ್ತನ ಕರುಣೆಯ ಬಾಳಲಿ ಹೊತ್ತು
ಮರ್ತ್ಯವ ಬೆಳೆಗಲು ಇಳೆಗೈ ತಂದ |೧|

ಅಕ್ಷಯ ತೃತೀಯ ವೈಶಾಖದಂದು ಅಕ್ಷಯ
ಮಾರ್ಗವ ತೋರಲಿಕ್ಕೆಂದು ನೊಂದ ಹೃದಯಗಳ
ಸಂತೈಸಲೆಂದು ಮಂದ ಮಾರತದೋಳ ಲೋಕಕ್ಕೆ ತಂದ
ಬಸವ ಧರಗೆ ಬಂದ ಜೋ ಜೋ |೨|

ಮಾದಲಾಂಬಿಕೆಯ ಮಮತೆಯ ಕಂದಾ
ಮಾದೇವರಸರಸ ವಂಶದ ಚಂದಾ
ಭಾರತ ಭೂಮಿಯ ಭಾಗ್ಯದ ಕಂದಾ
ಮನುಕುಲಕ್ಕೆ ಪರಮಾನಂದಾ ಜೋ ಜೋ |೩|

ಸಮತೆಯ ಕಹಳೆಯ ಮೊಳಗಲು ಬಂದ
ಕಾಯಕವೆ ಕೈಲಾಸ ಎನ್ನುತ ನಿಂದ
ಕರ್ತನ ಮಹಿಮೆ ಸಾರಲು ಬಂದ
ಮರ್ತ್ಯದ .... ಬಂದ |೪|

ಧರ್ಮದ ದಿನಮಣಿ ಶರಣರ ಕಣ್ಮಣಿ
ಧರೆಗೊತ್ತಮ ಶ್ರೀಗುರು ಚೂಡಾಮಣಿ
ದಿನದಲಿತರ ಬಾಳಿನ ಶುಭಖಣಿ
ಆಶ್ರೀತ ರಕ್ಷಕ ಚೆನ್ನಪರುಷ ಮಣಿ |೫|

ಜಯ ಜಯವೆನ್ನುತ ಹಾಡಿ ಹರಸಿರಿ
ಜೋ ಜೋ ಎನ್ನುತ ತೊಟ್ಟಿಲ ತೂಗಿರಿ
ಮಂಗಲದಾರತಿ ಪ್ರೇಮದಿ ಬೆಳಗಿರಿ
ಭವನದ ಭಾಗ್ಯ ಬಸವಗೆ ನಮಿಸಿರಿ |೬|

ಜೋ ಜೋ ಶರಣ ಬಸವ ಜೋ ಜೋ

ತಾಯಿ ಮಡಿಲ ತುಂಬಿ ಬಂದ ಈ ಧರೆಗೆ ಹರುಷ ತಂದ
ಶರಣ ಬಸವ ಜೋ ಜೋ

ಇರುಳ ಸಂ.... ಕೀರ್ತಿ ನೀನಾಗು ಮಗುವೇ
ಗುರು ಚರಣ ಸುಪ್ರಿತಿ ನೀ ಗಳಿಸು ಮಗುವೇ
ಪ್ರೀತಿಯ ಕಿವಣಗಳ ಈ ಜಗಕೆ ನೀಡಿ
ಕರುಣಾ ಮೂರ್ತಿ ಶುಭನಾಮ ಪಾಡಿ ಜೋ ಜೋ |೧|

ಹಡೆದ ಕರುಳಿಂದ ದಾಸೋಹ ಭಾವ ಪಡೆದ
ಕರಳಿಂದ ಕಾಯಕನೀವ ಕಾಯಕ ದಾಸೋಹ
ನೀ ಕಲೆತು ಧರೆಯ ಜೀವನಕೆ ಬೆಳಕನ್ನು|೨|
ನೀ ತೋರು ಮಗುವೇ ಜೋ ಜೋ ಜೋ ಜೋ

ಕಲ್ಯಾಣ ನಾಡಿಗೆ ನೀ ಕಳಸವಾದೆ ಎಲ್ಲೆಲ್ಲೂ
(ಶಿವ) ದೇವಪ್ರೇಮ ಹರಡಿಸಿ ನುಡಿದೆ ಶರಣರ ಸಂದೇಶ
ಸಾರುತಲಿ ಜಗದಿ ಸರ್ವದಲ್ಲಿ ದಾಸೋಹ
ನೀ ಕಾಣೋ ಮಗುವೇ ಜೋ ಜೋ ಜೋ ಜೋ |೩|

*
ಪರಿವಿಡಿ (index)
Previous ಬಸವೇಶ್ವರರ ಜೋಗುಳ ಪದ- 2 ಅಕ್ಕನಾಗಮ್ಮನ ಜೋಗುಳ ಪದ Next