Back to Top
Previous ಲಿಂಗದೇವಾಷ್ಟಕ ಬಾ ಬಾ ಬಾರೆಲೆ ದೇವಾ ನೀನು Next

ಬಾರೋ ಬಾರೋ ಬಾರೋ ಲಿಂಗ ಕರದ ಕಮಲಕೆ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಬಾರೋ ಬಾರೋ ಬಾರೋ ಲಿಂಗ ಕರದ ಕಮಲಕೆ

ಬಾರೋ ಬಾರೋ ಬಾರೋ ಲಿಂಗ ಕರದ ಕಮಲಕೆ
ಹೃದಯ ತಣಿಯೆ ಪೂಜಿಸುವೆ ನಿನ್ನಯ ಮೂರುತಿಯ || ಪ ||

ಭಕ್ತಿರಸದ ಉದಕವೆರೆದು | ಮರೆವನುರುಹಿ ಭಸ್ಮಪೂಸಿ
ಶಾಂತಿ ಎಂಬ ಗಂಧವಿಟ್ಟು | ನಾನು ತಣಿವೆನು || ೧ ||

ಸದುಗುಣ ಕುಸುಮಗಳ ಪದತಲದಿ ಅರ್ಪಿಸುತ
ಚಿದ್ಭಾವ ಧೂಪದ್‌ಹೊಗೆಯ | ನಾನು ಎತ್ತುವೆ || ೨ ||

ಅರಿವಿನಾ ಆರತಿಯ ಶಿರದ ತಳಿಗೆಯಲ್ಲಿ ಇರಿಸಿ
ಮರೆವ ಹರಿಪ ಮಹಾದೇವ ನಿನಗೆ ಬೆಳಗುವೆ || ೩ ||

ತನುಮನ ನೈವೇದ್ಯ ಲೋಕದಾತ ನಿನಗೆ ಇತ್ತು
ಎನ್ನ ಶರಣು ಬಿಡದೆ ಸಲಿಸಿ ಧನ್ಯಳಾಗುವೆ || ೪ ||

ಅಂಗೈಯ ತೊಟ್ಟಲಲಿ ಲಿಂಗಯ್ಯ ನಿನ್ನ ಮಲಗಿಸಿ
ಸಂಗೀತ ಹಾಡುವೆ ಲಾಲಿ ಹೇಳಿ ಆಡಿಪೆ || ೫ ||

ಆಡಿಪಾಡಿ ನಲಿದಾಡಿ ಮಿತಿಮೀರಿ ತಣಿದಾಡಿ
ನೋಡಿ ಸವಿವೆ ಕಂಗಳಲ್ಲಿ ಸಚ್ಚಿದಾನಂದನ || ೬ ||

ಪರಿವಿಡಿ (index)
Previous ಲಿಂಗದೇವಾಷ್ಟಕ ಬಾ ಬಾ ಬಾರೆಲೆ ದೇವಾ ನೀನು Next