ಹೂವ ಸೂರ‍್ಯಾಡೋಣ ಶ್ರೀ ಶರಣರ ಮೇಲೆ
|
|
*
ಹೂವ ಸೂರ‍್ಯಾಡೋಣ ಶ್ರೀ ಶರಣರ ಮೇಲೆ
ಯೌವನಾವಸ್ಥೆ ದಾಟಿದ ಹಿರಿಯರಿಗೆ ಹುಟ್ಟುಹಬ್ಬ ಮಾಡುವಾಗ ಹಾಡಬೇಕಾದ ಪುಷ್ಪವೃಷ್ಟಿ ಗೀತೆ ಮತ್ತು ಆರತಿ ಹಾಡುಗಳು.
ಹೂವ ಸೂರ‍್ಯಾಡೋಣ ಶ್ರೀ ಶರಣರ ಮೇಲೆ
ಶುಭ ಹರಸುತ ನಾವು, ಹೂವ ಸೂರ‍್ಯಾಡೋಣ ||ಪ||
ಗುರು ಬಸವಣ್ಣನ ಶ್ರೀ ರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು ||1||
ಗುರುಲಿಂಗಜಂಗಮದ ಕಾರುಣ್ಯವಿರಲೆಂದು
ಶರಣ ಬಂಧುಗಳೆಲ್ಲ ಒಂದಾಗಿ ಹರಸಿ ||2||
ಆಯುಷ್ಯ ಆರೋಗ್ಯ ಐಶ್ವರ್ಯ ಸಂತೋಷ
ಸಂವೃದ್ದಿ ಸಂತೃಪ್ತಿ ಹರಿದು ತಾ ಬರಲೆಂದು ||3||
ಸತ್ಕೀರ್ತಿ ಸಂಪದ ನಿಮ್ಮದಾಗಲೆಂದು
ಸಚ್ಚಿದಾನಂದನ ಕರುಣೆಯ ಹರಸಿ || 4 ||
* ಶ್ರೀ ಶರಣರ ಮೇಲೆ ಎನ್ನುವಾಗ ವ್ಯಕ್ತಿಯ ಹೆಸರು ಸಹ ಹೇಳಬಹುದು.
*