ಬಸವ ಜ್ಯೋತಿ

*

ಜ್ಯೋತಿ ಜಗವ ಬೆಳಗೆ
ಬಸವನ ಜ್ಯೋತಿ ಜಗವ ಬೆಳಗೆ |ಪ|

ಬಾಗೆವಾಡಿಯೊಳು ಜನಿಸಿದ ಜ್ಯೋತಿ
ಮಾತಾಪಿತರನು ತ್ಯಜಿಸಿದ ಜ್ಯೋತಿ
ಜಾತವೇದ ಮುನಿ ಗುರುಕುಲ ಜ್ಯೋತಿ
ಕೂಡಲ ಸಂಗನ ಕರುಣೆಯ ಜ್ಯೋತಿ |1|

ನಾಗಲಾಂಬಿಕೆಯ ಮಮತೆ ಜ್ಯೋತಿ
ಮಹಾದೇವಿ ಅಕ್ಕನ ಅರುವಿನ ಜ್ಯೋತಿ
ಚೆನ್ನಬಸವನ ಚಿನ್ಮಯ ಜ್ಯೋತಿ
ಸಿದ್ಧರಾಮರ ಶ್ರದ್ಧೆಯ ಜ್ಯೋತಿ |2|

ನಿಲಾಂಬಿಕೆಯ ನಿರ್ಮಲ ಜ್ಯೋತಿ
ಬಲದೇವರಸರ ಒಲವಿನ ಜ್ಯೋತಿ
ಬಿಜ್ಜಳ ರಾಜನ ಬಲಗೈ ಜ್ಯೋತಿ |3|

ಅಲ್ಲಮದೇವರ ಪ್ರೀತಿಯ ಜ್ಯೋತಿ
ಶರಣ ಶರಣೆಯರ ಮಂಗಲ ಜ್ಯೋತಿ
ಕಲ್ಯಾಣಪುರದ ಕ್ರಾಂತಿಯ ಜ್ಯೋತಿ
ಸಮತೆಯ ಸಾರಿದ ಶಾಂತಿಯ ಜ್ಯೋತಿ |4|

ಪರಿವಿಡಿ (index)
Previousಕಲ್ಯಾಣ ನಾಮಮೋಳಗಿಯ ಮಾರಯ್ಯಾ ಭಕ್ತಾNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.