Previous ಇಪ್ಪತ್ತುನಾಲ್ಕು ಶೀಲ ಅನಾದಿ Next

ಅಂಗಸ್ಥಲ

ಅಂಗಸ್ಥಲ

೧. ಏಕೋತ್ತರ ಶತಸ್ಥಲಗಳಲ್ಲಿ ಶಿವತತ್ವವು ಪ್ರಕಟಗೊಂಡು ತಾಳಿದ ಅಂಗ ಮತ್ತು ಲಿಂಗ ಎಂಬ ಒಂದು ಕ್ರಮ ; ಭಕ್ತನ ಆಚರಣೆಗಳನ್ನು ತಿಳಿಸುವ ಸ್ಥಲ
ಇದರಲ್ಲಿ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಮುಖ್ಯ ವಿಭಾಗಗಳಿದ್ದು ಇವುಗಳಲ್ಲಿ ಪುನಃ ಒಳ ವಿಭಾಗಗಳಿದ್ದು ಒಟ್ಟು ೪೪ ಸ್ಥಲಗಳಿರುತ್ತವೆ. ಅವು ಯಾವುವೆಂದರೆ-

೧. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕಾರುಣ್ಯಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಧಾರಣಸ್ಥಲ, ಪಂಚಾಕ್ಷರೀಜಪಸ್ಥಲ, ಭಕ್ತಿಸ್ಥಲ, ಸುರೂಪೋಭಯಸ್ಥಲ, ತ್ರಿವಿಧಿ ಸಂಪತ್ತುಸ್ಥಲ, ಚತುರ್ವಿಧ, ಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿ ಮಾಟಸ್ಥಲ ಮತ್ತು ಸಹಜ ಮಾಟಸ್ಥಲ ಎಂಬ ೧೫ ವಿಭಾಗಗಳು ಭಕ್ತಸ್ಥಲದಲ್ಲಿವೆ.
೨. ಮಾಹೇಶ್ವರಪ್ರಶಂಸಾಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯ ನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ ಮತ್ತು ದೇಹಿಕಲಿಂಗಸ್ಥಲ ಎಂಬ ೯ ವಿಭಾಗಗಳು ಮಾಹೇಶ್ವರಸ್ಥಲದಲ್ಲಿವೆ.
೩. ಪ್ರಸಾದಿಸ್ಥಲ, ಗುರುಮಾಹಾತ್ಮ ಸ್ಥಲ, ಲಿಂಗಮಾಹಾತ್ಮ ಸ್ಥಲ, ಜಂಗಮಮಾಹಾತ್ಮ ಸ್ಥಲ, ಭಕ್ತಮಾಹಾತ್ಮ ಸ್ಥಲ, ಶರಣಮಾಹಾತ್ಮ ಸ್ಥಲ ಮತ್ತು ಪ್ರಸಾದಮಾಹಾತ್ಮ ಸ್ಥಲ ಎಂಬ ೭ ವಿಭಾಗಗಳು ಪ್ರಸಾದಿಸ್ಥಲದಲ್ಲಿವೆ.
೪. ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಸ್ಥಲ, ಶಿವಯೋಗಸಮಾಧಿಸ್ಥಲ, ಲಿಂಗನಿಜಸ್ಥಲ ಮತ್ತು ಅಂಗಲಿಂಗಸ್ಥಲ ಎಂಬ ೫ ವಿಭಾಗಗಳು ಪ್ರಾಣಲಿಂಗಿಸ್ಥಲದಲ್ಲಿವೆ.
೫. ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶಸ್ಥಲ ಮತ್ತು ಶೀಲಸಂಪಾದನಸ್ಥಲ ಎಂಬ ೪ ವಿಭಾಗಗಳು ಶರಣಸ್ಥಲದಲ್ಲಿವೆ.
೬. ಐಕ್ಯಸ್ಥಲ, ಆಚಾರಸಂಪತ್ತಿಸ್ಥಲ, ಏಕಭಾಜನಸ್ಥಲ ಮತ್ತು ಸಹಭೋಜನಸ್ಥಲ ಎಂಬ ೪ ವಿಭಾಗಗಳು ಐಕ್ಯಸ್ಥಲದಲ್ಲಿವೆ.

ಇವುಗಳ ವಿವರಣೆಯನ್ನು ಆಯಾಯಾ ಜಾಗಗಳಲ್ಲಿ ಸೂಚಿಸಲಾಗಿದೆ; ಅಖಂಡಪರಿಪೂರ್ಣ ಗೋಳಕಾಕಾರ ಮಹಾಲಿಂಗವು ತನ್ನ ಸ್ವಲೀಲೆಯಿಂದ ಲಿಂಗಸ್ಥಲ ಅಂಗಸ್ಥಲವೆಂದು ಎರಡು ಪ್ರಕಾರವಾಯಿತ್ತು (ಸಿದ್ದೇವ. ೧೧-೩೮).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಇಪ್ಪತ್ತುನಾಲ್ಕು ಶೀಲ ಅನಾದಿ Next