ಜ್ಞಾನಪಾದೋದಕ | ಗಣಾಚಾರ |
ಏಕಾದಶ ಪ್ರಸಾದ |
೧. ಗುರುಪ್ರಸಾದ - ಗುರುಮುಖದಿಂದ ಬಂದ ಪ್ರಸಾದ.
೨. ಲಿಂಗ ಪ್ರಸಾದ - ಗುರುಪ್ರಸಾದವನ್ನು ಲಿಂಗಕ್ಕೆ ಅರ್ಪಿಸುವುದು.
೩. ಜಂಗಮ ಪ್ರಸಾದ - ಗುರುಪ್ರಸಾದವನ್ನು ಜಂಗಮಕ್ಕೆ ಅರ್ಪಿಸುವುದು.
೪. ಪ್ರಸಾದಿಯ ಪ್ರಸಾದ - ಆ ಪ್ರಸಾದವನ್ನು ಭಕ್ತ ಸ್ವೀಕರಿಸುವುದು.
೫. ಸಮಯ ಪ್ರಸಾದ - ಗುರುಲಿಂಗ ಜಂಗಮವನ್ನು ಕಂಡು, ಆ ಸಮಯದಲ್ಲಿ ಸ್ವೀಕರಿಸುವುದು.
೬. ಪಂಚೇಂದ್ರಿಯ ವಿರಹಿತ ಪ್ರಸಾದ - ಪಂಚೇಂದ್ರಿಯಗಳಲ್ಲಿ ಪಂಚಲಿಂಗಗಳನ್ನು ಸ್ಥಾಪಿಸಿ, ಪಂಚೇಂದ್ರಿಯ ವಿಷಯಗಳನ್ನು (ರೂಪ, ರಸ ಇತ್ಯಾದಿಗಳನ್ನು) ಅವುಗಳಿಗೆ ಅರ್ಪಿಸುವುದು.
೭. ಅಂತಃಕರಣ ವಿರಹಿತ ಪ್ರಸಾದಿ - ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ, ಮನಸ್ಸನ್ನೇ ಲಿಂಗವನ್ನಾಗಿ ಮಾಡಿಕೊಂಡು, ಚಿತ್ತದಿಂದ ದಾಸೋಹಮಾಡುವುದು.
೮. ಸದ್ಭಾವ ಪ್ರಸಾದ - ತ್ರಿವಿಧ ಅಂಗಗಳಲ್ಲಿ ತ್ರಿವಿಧ ಲಿಂಗವನ್ನು ಪ್ರತಿಷ್ಠಾಪಿಸಿ, ತಾನೇ ಚಿದ್ಘನನೆಂದು ಭಾವಿಸಿ ಅರ್ಪಿಸುವುದು.
೯. ಸಮತಾಪ್ರಸಾದ - ಲೌಕಿಕವನ್ನು ತ್ಯಜಿಸಿ, ಸುಖದುಃಖಗಳನ್ನು ಸಮಾನವೆಂದು ಪರಿಗಣಿಸಿ ಅದನ್ನು ಅರ್ಪಿಸುವುದು.
೧೦. ಜ್ಞಾನಪ್ರಸಾದ. - ಗುರುವಿನ ಪ್ರಸನ್ನತೆಯೇ ಜ್ಞಾನಪ್ರಸಾದ.
೧೧. ಆಪ್ಯಾಯನ ಪ್ರಸಾದ. - ಅಪೇಕ್ಷೆಯಿಂದ ಸಲಿಸುವುದು ಆಪ್ಯಾಯನ ಪ್ರಸಾದ.
1) ಶುದ್ಧಪ್ರಸಾದ, ಸಿದ್ಧಪ್ರಸಾದ, ಪ್ರಸಿದ್ಧಪ್ರಸಾದ, ಅಪ್ಯಾಯನಪ್ರಸಾದ, ಸಮಯಪ್ರಸಾದ, ಪಂಚೇಂದ್ರಿಯ ವಿರಹಿತ ಪ್ರಸಾದ, ಅಂತಃಕರಣ ಚತುಷ್ಟಯ ವಿರಹಿತ ಪ್ರಸಾದ, ಪ್ರಸಾದಿಯ ಪ್ರಸಾದ, ಸದ್ಭಾವಪ್ರಸಾದ, ಸಮತಾ ಪ್ರಸಾದ, ಜ್ಞಾನಪ್ರಸಾದ
2) ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಪ್ರಸಾದಿಯಪ್ರಸಾದ, ಸಮಯಪ್ರಸಾದ, ಭೋಜ್ಯಪ್ರಸಾದ, ಆಪ್ಯಾಯನಪ್ರಸಾದ, ಭಕ್ಷಪ್ರಸಾದ, ಚೋಹ್ಯಪ್ರಸಾದ, ಲೇಹ್ಯಪ್ರಸಾದ, ತೃಪ್ತಿಪ್ರಸಾದ
೧. ಲಿಂಗಾಯತನ ಏಳಿಗೆಗೆ ಸಂಬಂಧಿಸಿದ ಎಲ್ಲ ಬಗೆಯ ಆಚರಣೆಗಳನ್ನೊಳಗೊಂಡ ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಪ್ರಸಾದಿಪ್ರಸಾದ, ಆಪ್ಯಾಯನಪ್ರಸಾದ, ಸಮಯಪ್ರಸಾದ, ಪಂಚೇಂದ್ರಿಯವಿರಹಿತ ಪ್ರಸಾದ, ಅಂತಃಕರಣಚತುಷ್ಟಯವಿರಹಿತ ಪ್ರಸಾದ, ಸದ್ಭಾವಪ್ರಸಾದ, ಸಮತಾಪ್ರಸಾದ ಮತ್ತು ಜ್ಞಾನಪ್ರಸಾದ ಎಂಬ ಹನ್ನೊಂದು ಬಗೆಯ ಪ್ರಸಾದಗಳು : ದಶವಿಧ ಉದಕ ಏಕಾದಶಪ್ರಸಾದ ಎಲ್ಲಾ ಎಡೆಯಲ್ಲಿ ಉಂಟು ಮತ್ತೊಂದ ಬಲ್ಲವರ ತೋಜಾ ಎನಗೆ (ಚೆನ್ನಬ. ಸಮವ. ೩-೧೯೪-೬೨೬) ; [ಅ]ನಾದಿಕುಳ ಸನ್ಮತವಾದ ಏಕಾದಶಪ್ರಸಾದದ ಕುಳವ ತಿಳಿವಡೆ ಪ್ರಥಮದಲ್ಲಿ ಗುರುಪ್ರಸಾದ ದ್ವಿತೀಯದಲ್ಲಿ ಲಿಂಗಪ್ರಸಾದ ತೃತೀಯದಲ್ಲಿ ಜಂಗಮಪ್ರಸಾದ ಚತುರ್ಥದಲ್ಲಿ ಪ್ರಸಾದಿಪ್ರಸಾದ ಪಂಚಮದಲ್ಲಿ ಆಪ್ಯಾಯನಪ್ರಸಾದ ಷಷ್ಠಮದಲ್ಲಿ ಸಮಯಪ್ರಸಾದ ಸಪ್ತಮದಲ್ಲಿ ಪಂಚೇಂದ್ರಿಯವಿರಹಿತಪ್ರಸಾದ ಅಷ್ಟಮದಲ್ಲಿ ಅಂತಃಕರಣ ಚತುಷ್ಟಯ ವಿರಹಿತಪ್ರಸಾದ ನವಮದಲ್ಲಿ ಸದ್ಭಾವಪ್ರಸಾದ ದಶಮದಲ್ಲಿ ಸಮತಾಪ್ರಸಾದ ಏಕಾದಶದಲ್ಲಿ ಜ್ಞಾನಪ್ರಸಾದ ಇಂತೀ ಏಕಾದಶಪ್ರಸಾದಸ್ಥಲವನತಿಗಳೆದ ಕೂಡಲ ಚೆನ್ನಸಂಗಯ್ಯನಲ್ಲಿ ಐಕ್ಯಪ್ರಸಾದಿಗೆ ನಮೋನಮೋ ಎಂದೆನು (ಚೆನ್ನಬ, ಸಮವ. ೩-೨೮೮-೯೨೧).
೨. ಹನ್ನೊಂದು ಬಗೆಯ ಅರ್ಪಿತಗಳು : ಇನ್ನು ಏಕಾದಶಪ್ರಸಾದ ಪ್ರಥಮದಲ್ಲಿ ಮಹಾದೇವಂಗೆ ಮನವರ್ಪಿತ ದ್ವಿತೀಯದಲ್ಲಿ ಮಹೇಶ್ವರಂಗೆ ವೀರಾರ್ಪಿತ ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ ಚತುರ್ಥದಲ್ಲಿ ನಿರ್ವಿಷಯಾರ್ಪಿತ ಪಂಚಮದಲ್ಲಿ ಪಂಚವಸ್ತಾರ್ಪಿತ ಷಷ್ಠಮದಲ್ಲಿ ನಷ್ಟರೂಪನಿರೂಪಾರ್ಪಿತ ಸಪ್ತಮದಲ್ಲಿ ಆತ್ಮಾರ್ಪಿತ ಅಷ್ಟಮದಲ್ಲಿ ತನ್ನ ಮದ ಮಜಹಾರ್ಪಿತ ನವಮದಲ್ಲಿ ಅಸಮಸಹಸ್ರನಾಳದಿಂದ ತೃಪ್ತಾರ್ಪಿತ ದಶಮದಲ್ಲಿ ಚಿತ್ತಸುಯಿಧಾನಿಯಾಗಿ ಸುಷುಮ್ನಾನಾಳದಿಂದ ಅಮೃತಾರ್ಪಿತ ಏಕಾದಶದಲ್ಲಿ ಏಕಪ್ರಸಾದ ನೋಡ ಹೋದರೆ ತನ್ನ ನುಂಗಿತ್ತಯ್ಯಾ (ಚೆನ್ನಬ, ಸಮವ. ೩-೫೦೮-೧೪೧೬).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜ್ಞಾನಪಾದೋದಕ | ಗಣಾಚಾರ |