Previous ಮಲ, ಮಲತ್ರಯ ಮಹಾಲಿಂಗ Next

ಮಹಾಪ್ರಳಯ

ಮಹಾಪ್ರಳಯ

ಸೃಷ್ಟಿಯ ಪೂರ್ವದಲ್ಲಿ ಶಿವನ ಶಕ್ತಿಯು ಅವನಲ್ಲಿ ಅವ್ಯಕ್ತವಾಗಿದ್ದು, ಅದು ಪ್ರಕಟವಾಗುವುದೇ ಸೃಷ್ಟಿ, ಶಕ್ತಿಯ ಐದು ರೂಪಗಳೆಂದರೆ ಐದು ಭೂತಗಳು. ಇವುಗಳ ಸಾಕಾರ ಮೂರ್ತಿಗಳು ಚಿತ್‌ಶಕ್ತಿ, ಆದಿಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಛಾಶಕ್ತಿ. ಪರಶಿವನೇ ಇವುಗಳನ್ನು ನಿಯಂತ್ರಿಸುತ್ತಾನೆ. ಆಗ ಅವನು ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಮತ್ತು ಸದಾಶಿವ ಎಂದು ಕರೆಯಲ್ಪಡುತ್ತಾನೆ. ಸೃಷ್ಟಿಯು ಹಿಮ್ಮುಖವಾಗಿ ನಡೆದರೆ ಅದೇ ಪ್ರಳಯ, ಆಗಲೂ ಘಟನೆಗಳು ಕ್ರಮವಾಗಿಯೇ ಜರುಗುತ್ತವೆ. ಅತ್ಯಂತ ಸ್ಥೂಲವಾದುದು ಕೊನೆಗೆ ಸೃಷ್ಟಿಯಾಗುವಂತೆ, ಅತ್ಯಂತ ಸ್ಥೂಲವಾದುದು ಕೊನೆಗೆ ಅತ್ಯಂತ ಸೂಕ್ಷ್ಮವಾದುದರಲ್ಲಿ ಐಕ್ಯವಾಗುತ್ತದೆ. ಹೀಗೆ ಲಯದಲ್ಲಿ ಭೂಮಿತತ್ವವು ಜಲತತ್ವದಲ್ಲಿ ಅಡಗುತ್ತದೆ. (ಆಗ ಭೂಮಿಯ ಅಧಿದೇವತೆಯಾದ ಬ್ರಹ್ಮನು ಜಲದ ಅಧಿದೇವತೆಯಾದ ವಿಷ್ಣುವಿನಲ್ಲಿ ಅಡಗುತ್ತಾನೆ): ಜಲವು ಅಗ್ನಿಯಲ್ಲಿ ಹಾಗೂ ಆ ಅಗ್ನಿಯು ವಾಯುವಿನಲ್ಲಿಯೂ, ಆ ವಾಯುವು ಆಕಾಶದಲ್ಲಿಯೂ ಅಡಗುತ್ತದೆ ಅದೇ ರೀತಿ ಜಲದ ಅಧಿದೇವತೆಯಾದ ವಿಷ್ಣುವು ರುದ್ರನಲ್ಲಿಯೂ, ರುದ್ರನು ಈಶ್ವರನಲ್ಲಿಯೂ, ಈಶ್ವರ ಸದಾಶಿವನಲ್ಲಿಯೂ ಅಡಗುತ್ತಾನೆ. ಸದಾಶಿವ ನಿಷ್ಕಲಸ್ಥಲದಲ್ಲಿಯೂ, ನಿಷ್ಕಲ ಸ್ಥಲವು ಶೂನ್ಯಸ್ಥಲದಲ್ಲಿಯೂ ಅಡಗುತ್ತದೆ. ಆಗ ಪರಶಿವನೊಬ್ಬನೆ ಇದ್ದನು, ಪೂಜ್ಯಪೂಜಕರೆಂಬ, ಆದಿ ಅನಾದಿ ಎಂಬ ಭೇದಭಾವವಿಲ್ಲದೆ (೧:೧೩೨೦).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಮಲ, ಮಲತ್ರಯ ಮಹಾಲಿಂಗ Next