Previous ಪ್ರಸಾದಿ ಬಿಂದು Next

ಪರಮಾತ್ಮ

ಪರಮಾತ್ಮ

೧. ಜಗತ್ತಿನಲ್ಲಿ ಸರ್ವವ್ಯಾಪಿಯಾಗಿರುವ ಚೈತನ್ಯ ; ಪರಶಿವ; ಶುದ್ಧಾತ್ಮ ಪರಮಾತ್ಮರಿಬ್ಬರೂ ಒಂದು ರತ್ನಕ್ಕೆ ಹೆಣಗಾಟವನಾಡಿಹರು ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದು ಕೊಂಡಡೆ ಕೂಡಲಸಂಗಮದೇವಂಗಾರೋಗಣೆಯಾಯಿತ್ತು (ಬಸವ. ಸಮವ. ೧-೨೩೬-೯೦೬);

೨. ಜೀವಾತ್ಮ, ಅಂತರಾತ್ಮ ಮತ್ತು ಪರಮಾತ್ಮ ಎಂಬ ಆತ್ಮತ್ರೆಯಗಳಲ್ಲಿ ಒಂದು; ಅಂತಾರಾತ್ಮನಿಗಿಂತ ಉಚ್ಛಸ್ಥಾನವನ್ನು ಪಡೆದಿರುವ ಪರಮಾತ್ಮನು ಕಾರಣಶರೀರಿಯಾಗಿ, ಲಿಂಗಸ್ಥಿತಿಯನ್ನು ಪಡೆದನಂತರ ಶರೀರದ ಸರ್ವಾಂಗಗಳಲ್ಲಿಯೂ ಚೈತನ್ಯವನ್ನುಂಟು- ಮಾಡುತ್ತಾನೆ. ಕಾರಣಶರೀರದೊಂದಿಗೆ ಸಂಬಂಧಿಸಿದ ಭಾವಲಿಂಗವು ಪ್ರಕಟಗೊಂಡು ಆತ್ಮನು ಶಿವನಲ್ಲಿ ಸುಷುಪ್ತಿಯನ್ನು ಹೊಂದುತ್ತಾನೆ ; ಜೀವಾತ್ಮ ಅಂತರಾತ್ಮ ಪರಮಾತ್ಮರೆಂದಾತ್ಮತಯಂಗಳವರಲ್ಲಿ ...ಲೋಕವ್ಯವಹಾರಕ್ಕೆ ಸೂರ್ಯನೆಂತಂತೆ ಜೀವಾಂತರಾತ್ಮರ ವ್ಯವಹಾರಸಾಕ್ಷಿಕನೇ ಪರಮಾತ್ಮನಪ್ಪಂ (ವಿವೇಕ. ೨೫);

೩. ಏಕೋತ್ತರ ಜಂಗಮಲಿಂಗಸ್ಥಲದಲ್ಲಿರುವ ಒಲವುಲಿಂಗದ ಮೂರು ಸ್ಥಲಗಳಲ್ಲಿ ಒಂದು; ವಿವೇಕಸ್ವರೂಪಿಯಾದ ಪ್ರಾಣಲಿಂಗಿಯನ್ನು ಪರಮಾತ್ಮನು ಆವರಿಸುವ ಸ್ಥಲ; ಒಲವುಲಿಂಗತ್ರಿವಿಧ ಜೀವಾತ್ಮ ಅಂತರಾತ್ಮ ಪರಮಾತ್ಮ (ಚೆನ್ನಬ. ಸಮವ. ೩-೨೫೫-೮೪೯).

೪. ಆತ್ಮನ ವಿಕಾಸಕ್ಕನುಸಾರವಾಗಿ ಉಂಟಾಗುವ ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಜ್ಞಾನಾತ್ಮ, ಮಹಾತ್ಮ, ದಿವ್ಯಾತ್ಮ ಮತ್ತು ಚಿನ್ಮಯಾತ್ಮ ಎಂಬ ಒಂಬತ್ತು ಅವಸ್ಥೆಗಳಲ್ಲಿ ಒಂದು ; ವಿಕಾಸ ಹೊಂದಿದ ಹಾಗೆ ಆತ್ಮನು ಅನುಕ್ರಮವಾಗಿ ಜೀವಾತ್ಮ, ಅಂತರಾತ್ಮ, ಪರಮಾತ್ಮ ...ದಿವ್ಯಾತ್ಮ ಮತ್ತು ಚಿನ್ಮಯಾತ್ಮ ಎಂದು ಹೇಳಲ್ಪಡುತ್ತವೆ (ಶಿವಾಕೋ. ೩೯-೩೮).

೫. ಮೂವತ್ತಾರು ಬಗೆಯ ತತ್ತ್ವಗಳಲ್ಲಿ ಒಂದು ;

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪ್ರಸಾದಿ ಬಿಂದು Next