ದಶವಿಧಪಾದೋದಕ | ನಿತ್ಯ |
ದೀಕ್ಷಾವಿಧಿ |
ಗುರುವು ಶಿಷ್ಯನಿಗೆ ದೀಕ್ಷೆಯನ್ನು ನೀಡುವಾಗ ಪಾಲಿಸಬೇಕಾದ ಮೂಪತೈದು ಬಗೆಯ ನಿಯಮಗಳು : ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂಬುವವನಿಗೆ ಮಾಡತಕ್ಕ ದೀಕ್ಷಾವಿಧಿಗಳ ಅಂಗಗಳು -
೧. ಕಾಯಶುದ್ಧಿ, ಜೀವಶುದ್ಧಿ, ಆತ್ಮಶುದ್ಧಿ ಮಾಡುವುದು.
೨. ವಾಕ್ಕು, ಪಾಣಿ, ಪಾದ, ಗುಹ್ಯ, ಪಾಯುವೆಂಬ ಕರ್ಮೇಂದ್ರಿಯಗಳ ಮೇಲಣ ಇಂದ್ರಿಯಲಿಖಿತವನ್ನು ತೊಡೆದು ಲಿಂಗಲಿಖಿತ ಮಾಡುವುದು.
೩. ಅಂತಃಕರಣ ಚತುಷ್ಟಯಗಳ ನಿವರ್ತನೆ.
೪. ಪಂಚಭೂತಸ್ಥಾನದ ಅಧಿದೇವತೆಗಳನ್ನು ತೋರುವುದು.
೫. ಹೀಗೆ ಶುದ್ಧಾತ್ಮನ ಮಾಡಿದ ಬಳಿಕ ಗಣತಿಂಥಿಣಿಯ ಮುಂದೆ ನಿಲ್ಲಿಸಿ ದಂಡಪ್ರಣಾಮವನ್ನು ಮಾಡಿಸುವುದು ಮತ್ತು ಕೈವಿಡಿದೆತ್ತುವುದು.
೬. ಭೂತಶುದ್ದಿಯನ್ನು ಮಾಡುವುದು, ಆಮೇಲೆ ಚೌಕಮಧ್ಯದಲ್ಲಿ ಕುಳ್ಳಿರಿಸುವುದು, ಗುರುಕಲಶ ಸ್ಥಾಪನೆ ಮಾಡುವುದು.
೭. ಜಲಶುದ್ಧಿಯನ್ನು ಮಾಡುವುದು.
೮. ಜಂಗಮಕ್ಕೆ ಪಾದಾರ್ಚನೆಯನ್ನು ಮಾಡುವುದು.
೯. ಕುಮಾರರಾವನ್ನು ಜಲಾಧಿವಾಸ ಮಾಡುವುದು.
೧೦. ಶಿಷ್ಯನ ಹಸ್ತವನ್ನು ಶೋಧಿಸುವುದು.
೧೧. ವಿಭೂತಿಯನ್ನು ಧರಿಸುವುದು.
೧೨. ರುದ್ರಾಕ್ಷಿಧಾರಣ.
೧೩. ಜಲಾಧಿವಾಸದೊಳಗಣ ಕುಮಾರಠಾವನ್ನು ತೆಗೆಯುವುದು, ಸಿಲೆಯ ಪೂರ್ವಾಶ್ರಯವನ್ನು ಕಳೆಯುವುದು.
೧೪. ಶಿಲೆಗೆ ಪ್ರಾಣಪ್ರತಿಷ್ಠೆ ಮಾಡುವುದು.
೧೫. ದೇವರಿಗೆ ಸ್ನಪನ.
೧೬. ದೇವರಿಗೆ ವಸ್ತ್ರ ಸಮರ್ಪಣ.
೧೭. ಗಂಧಸಮರ್ಪಣ.
೧೮. ಅಕ್ಷತಸಮರ್ಪಣ.
೧೯. ಪುಷ್ಪ ಸಮರ್ಪಣ.
೨೦. ಧೂಪವನ್ನರ್ಪಿಸುವುದು.
೨೧. ದೀಪಸಮರ್ಪಣ.
೨೨. ನೈವೇದ್ಯ ಸಮರ್ಪಣ.
೨೩. ತಾಂಬೂಲ ಸಮರ್ಪಣ.
೨೪. ಮಂತ್ರಪುಷ್ಪ ಸಮರ್ಪಣ.
೨೫. ನಮಸ್ಕಾರ.
೨೬. ಅನುಷ್ಠಾನ.
೨೭, ಉರಸ್ಥಲದ ಸೆಜ್ಜೆಯಲ್ಲಿ ಲಿಂಗವನ್ನು ಧರಿಸುವುದು.
೨೮. ಶಿಷ್ಯನ ವಾಯುಪ್ರಾಣಿತ್ವವ ಕಳೆದು, ಲಿಂಗಪ್ರಾಣಿಯ ಮಾಡುವುದು.
೨೯. ಅಗೋದಕವನ್ನು ಸರ್ವಾಂಗದ ಮೇಲೆ ತಳಿವುದು.
೩೦. ವಿಭೂತಿಯ ಪಟ್ಟವನ್ನು ಕಟ್ಟುವುದು.
೩೧. ಶಿಷ್ಯನ ದುರಕ್ಷರವ ತೊಡೆವುದು.
೩೨. ಲಲಾಟದಲ್ಲಿ ಲಿಂಗಲಿಖಿತವನ್ನು ಬರೆವುದು.
೩೩. ಶಿಷ್ಯನ ಮಸ್ತಕದಲ್ಲಿ ಹಸ್ತವನಿರಿಸುವುದು.
೩೪. ಶಿಷ್ಯನ ಕರ್ಣದಲ್ಲಿ ಶಿವಮಂತ್ರವನ್ನು ನಿರೂಪಿಸುವುದು.
೩೫. ಶತಪತ್ರದೊಳಗಣ ಕಳೆಯನ್ನು ಪ್ರಜ್ವಲಿಸಿ ಪ್ರಾಣದಲ್ಲಿ ಪ್ರಾಣಲಿಂಗವನ್ನು ನೆಲೆಗೊಳಿಸಿ ಇಷ್ಟಲಿಂಗಸ್ಥಲವನ್ನು ತೋರಿಸಿ ಶಿಷ್ಯನನ್ನು ಕೃತಕೃತ್ಯನನ್ನು ಮಾಡುವುದು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ದಶವಿಧಪಾದೋದಕ | ನಿತ್ಯ |