Previous ಷಡಂಗ ಷಡ್ರಸಾಮೃತ Next

ಷಡ್ಭಾವ ವಿಕಾರಗಳು

ಷಡ್ಭಾವ ವಿಕಾರಗಳು

೬ ರೀತಿಯ ವಿಕಾರಗಳು

೧. ಅಸ್ತಿತೆ ; ಮಗುವು ತಾಯಿಯ ಗರ್ಭದಲ್ಲಿರುವಾಗ, ಅದಕ್ಕೆ ಬೇಕಿರಲಿ, ಬೇಡದಿರಲಿ ತಾಯಿಯು ತಿಂದ ಆಹಾರವನ್ನು ತಾನೂ ತಿನ್ನಬೇಕಾಗುತ್ತದೆ, ಅದರಿಂದ ಬೇನೆ ಕೆಲವು ಸಲ ಉಂಟಾಗಬಹುದು.ಅದೇ ರೀತಿ ಅದರ ಅಕ್ಕಪಕ್ಕದಲ್ಲಿ ಅನೇಕ ರೀತಿಯ ಅಸಹ್ಯ ಪದಾರ್ಥಗಳಿರುತ್ತವೆ. ಇದೂ ಒಂದು ರೀತಿಯ ಅನಿಷ್ಟ, ಅಸ್ತಿತ್ವವನ್ನು ಈ ಅನಿಷ್ಟಗಳು ಹಿಂಬಾಲಿಸುತ್ತವೆಯಾದ್ದರಿಂದ, ಇದಕ್ಕೆ ಅಸ್ತಿತೆ ವಿಕಾರಗಳೆನ್ನುತ್ತಾರೆ.

೨. ಜಾಯತೆ : ಹುಟ್ಟಿದಾಗ ಪಡುವ ಯಾತನೆಗೆ ಜಾಯತೆ ಎಂದು ಹೆಸರು.

೩. ವಿಪರಿಣಮತೆ, ಶಿಶುವಿನಲ್ಲಿ ಅಜ್ಞಾನವೇ ಹೆಚ್ಚಾಗಿರುವಾಗ, ತನಗೇನು ಬಾಧೆಯಾಗುತ್ತಿದೆಯೆಂದು ತಿಳಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಮಗು ಪಡುತ್ತಿರುವ ಬಾಧೆಯೊಂದಾಗಿದ್ದರೆ, ತಾಯಿ, ಉಪಮಿಸುವ ರೀತಿ ಬೇರೊಂದಾಗಿರುತ್ತದೆ. (೧: ೪೪)

೪. ವಿವರ್ಧತೆ : ತಾರುಣ್ಯದಲ್ಲಿ ಯಾವಕಡೆ ಬೆಳೆಯಬೇಕು ಎಂಬ ತಾಕಲಾಟವಿರುತ್ತದೆ. ಲೌಕಿಕತೆಯಲ್ಲಿ ಬೆಳೆಯಬೇಕೋ, ಪಾರಮಾರ್ಥಿಕತೆಯಲ್ಲಿ ಬೆಳೆಯಬೇಕೋ ಎಂಬುದೆ ಆ ತಾಕಲಾಟ.

೫. ಅಪಕ್ಷೀಯತೆ : ಮನುಷ್ಯನ ಕ್ರಿಯಾಶಕ್ತಿ ಕುಂಠಿತವಾಗಿ, ಅವನು ಪರಾವಲಂಬಿಯಾಗುತ್ತಾನೆ.

೬. ವಿನಶ್ಯತೆ : ಸಾವಿನ ದವಡೆಯಲ್ಲಿ ಸಂಕಟ ಪಡುವುದೇ ವಿನಶ್ಯತೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಷಡಂಗ ಷಡ್ರಸಾಮೃತ Next