Previous ಪ್ರಾಣಲಿಂಗ ಲಿಂಗಪ್ರಸಾದ Next

ಪಂಚಬ್ರಹ್ಮ

ಪಂಚಬ್ರಹ್ಮ

೧, ಸದಾಶಿವ, ಶಿವ, ರುದ್ರ ವಿಷ್ಣು ಮತ್ತು ಬ್ರಹ್ಮ -ಎಂಬ ಪರಮೇಶ್ವರನ ಐದು ರೂಪಗಳು ; ಪಂಚಭೂತಂಗಳಲಿ ಪಂಚಬ್ರಹ್ಮನನಿರಿಸಿದಿರಾಗಿ ಭೂತಶುದ್ಧಿಯಾಯಿತ್ತೆನಗೆ (ಚೆನ್ನಬ. ಸಮವ. ೩-೩೨೯-೯೯೭); ಪಂಚಬ್ರಹ್ಮ ರಸಮಯಂ ನೀನಾಗಿ ವಿಶ್ವದೊಳ ಹೊಜಿಗೆ ತೆಲಿಹಿಲ್ಲದೆಯಖಂಡ (ಶಿವಚಿಂ. ೫-೩೦).

೨. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ -ಎಂಬ ಪರಮೇಶ್ವರನ ಐದು ಮುಖಗಳು;

೩. ಸದಾಶಿವ, ಶಿವ, ರುದ್ರ, ವಿಷ್ಣು ಮತ್ತು ಬ್ರಹ್ಮ ಎಂಬ ಐದು ರೂಪಗಳಿಂದೊಡ- ಗೂಡಿರುವ ಪರತತ್ತ್ವ ; ಪರಶಿವ ; ಪಂಚಬ್ರಹ್ಮವ ಕೆಡಿಸಿತ್ತು ಪ್ರಣವಮಂತ್ರವನೀಡಾಡಿತ್ತಲ್ಲಾ ...ಕೂಡಲಸಂಗಯ್ಯನ ಭಕ್ತಿಗಜ (ಬಸವ. ಸಮವ. ೧-೧೮೭-೭೪೯); ಸಂಚಲಂಗಳನಳಿದು ಪಂಚಬ್ರಹ್ಮವ ಕೂಡಿ ನಿಶ್ಚಿಂತ ನಿರಾಕುಳಲಿಂಗವನಾಚರಿಸಬಲ್ಲಾತನೆ ಸ್ವಯಜ್ಞಾನಿ ನೋಡಾ (ಜಕ್ಕಣ. ಸಮವ. ೧೦-೫೭೧-೧೧೩೫).

೪. ಮಹಾಲಿಂಗದಿಂದ ಉತ್ಪತ್ತಿಯಾದ ಶಿವ, ಅಮೂರ್ತಿ, ಮೂರ್ತಿ, ಕರ್ತೃ ಮತ್ತು ಕರ್ಮ ಎಂಬ ಐದು ಬಗೆಯ ಸಾದಾಖ್ಯಗಳು ;; ಆ ಮಹಾಬೆಳಗು ತನ್ನೊಳೆದುರೂಪಾಯಿತ್ತು ಅದೆಂತೆಂದಡೆ ಶಿವ ಅಮೂರ್ತಿ ಮೂರ್ತಿ ಕರ್ತೃ ಕರ್ಮರೆಂಬ ಪಂಚಬ್ರಹ್ಮ ಹುಟ್ಟಿದವು (ಚೆನ್ನಬ. ಸಮವ. ೩-೩೮೦-೧೧೧೧).

೫. ಬಿಂದುವಿನಿಂದ ಹುಟ್ಟಿದ ಐದು ಬಗೆಯ ತತ್ತ್ವಗಳು ; ಎಸೆವ ಲಕ್ಷಣವೈದಯಸಗೊಂಡು ಬಿಂದು ರಾಜಿಸಿತ ವಳುದಯ ಪಂಚಬ್ರಹ್ಮವು (ಮನೋವಿ. ೨-೩೯);

ಆ ಅದ್ವಿತೀಯ ಶಿವತತ್ವಬ್ರಹ್ಮವೆ ಪಂಚಪ್ರಕಾರವಾದವಾ ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತೈದಾದುದೆಂತೆನೆ ಮೂರ್ತಿಬ್ರಹ್ಮ ತತ್ಥಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳ್ (ಶೂನ್ಯಮ ಸಮವ. ೧೧-೬೧೨-೧೩೪೪).

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪ್ರಾಣಲಿಂಗ ಲಿಂಗಪ್ರಸಾದ Next