Previous ಲಿಂಗ ಲಿಂಗಾಂಗ ಸಾಮರಸ್ಯ Next

ಲಿಂಗತ್ರಯ

ಲಿಂಗತ್ರಯ

ವಚನಕಾರರು ಈ ಪದಕ್ಕೆ ಎರಡು ಅರ್ಥಗಳಲ್ಲಿ ಬಳಸಿದ್ದಾರೆ. ಆಯತಲಿಂಗ, ಸ್ವಾಯತಲಿಂಗ, ಸನ್ನಹಿತಲಿಂಗ, ಎಂಬುದು ಒಂದು ಅರ್ಥ. ಆಯತಲಿಂಗವೆಂದರೆ “ಬಂದಲಿಂಗ". ಗುರುವಿನ ಹಸ್ತಮಸ್ತಕ ಸಂಯೋಗವೆಂಬ ಕ್ರಿಯೆಯ ಮೂಲಕ ಶಿಷ್ಯನಿಗೆ ಬಂದ ಇಷ್ಟಲಿಂಗವೇ ಆಯತಲಿಂಗ, ಇದು ಭೌತವಸ್ತುವಾದರೂ ಚಿನ್ಮಯನಾದ ಪರಶಿವನ ಕುರುಹು. ಚಿನ್ಮಯಲಿಂಗವು (ಪರಶಿವ) ತನ್ನಲ್ಲಿಯೇ ಇದೆ ಎಂದು ತಿಳಿದುಕೊಂಡರೆ ಹಾಗೂ ಆ ಲಿಂಗದಿಂದ ಹಸ್ತಮಸ್ತಕ ಸಂಯೋಗದಿಂದ ಹೊರತೆಗೆಯಲ್ಪಟ್ಟು ಇಷ್ಟಲಿಂಗದಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟಿದ್ದು ಎಂದು ಶಿಷ್ಯ ತಿಳಿದುಕೊಂಡರೆ ಅದು ಸ್ವಾಯತ ಲಿಂಗ, ಹಾಗೆ ತಿಳಿದುಕೊಂಡಲಿಂಗವನ್ನು ಎಲ್ಲಾ ಅಂಗಗಳಲ್ಲಿ ಪ್ರತಿಷ್ಠಾಪಿಸಿಕೊಂಡರೆ (ಅನುಭಾವದ ಮೂಲಕ ಸಾಕ್ಷಾತ್ಕರಿಸಿಕೊಂಡರೆ), ಹಾಗೆ ಅಂತಸ್ಥವಾಗಿರುವ ಲಿಂಗವು ಸನ್ನಹಿತ ಲಿಂಗವೆನಿಸಿಕೊಳ್ಳುತ್ತದೆ.

ಮತ್ತೆ ಕೆಲವು ವಚನಕಾರರು ಲಿಂಗತ್ರಯ" ಎಂಬ ಶಬ್ದಕ್ಕೆ ಸಗುಣಲಿಂಗ, ನಿರ್ಗುಣಲಿಂಗ, ನಿರ್ಭೇದಲಿಂಗ, ಎಂದು ಅರ್ಥೈಸುತ್ತಾರೆ. ಸಗುಣಲಿಂಗವೆಂದರೆ ಸೃಷ್ಟಿಸ್ಥಿತಿ, ಇತ್ಯಾದಿಗಳನ್ನು ಮಾಡುವ ಲಿಂಗ ನಿರ್ಗುಣಲಿಂಗವೆಂದರೆ ಶಕ್ತಿಯಿಂದ ಪ್ರತ್ಯೇಕಿಸಲ್ಪಟ್ಟ ಚಿನ್ಮಯ ಲಿಂಗ ಸಗುಣ ಮತ್ತು ನಿರ್ಗುಣಗಳ ವ್ಯತ್ಯಾಸವಿಲ್ಲದ ಶೂನ್ಯಲಿಂಗವೆ (ಶೂನ್ಯವೇ ಅಥವಾ ಮಹಾಶೂನ್ಯವೇ) ನಿರ್ಭೇದಲಿಂಗ (೧೨:೧೧೯೬)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಲಿಂಗ ಲಿಂಗಾಂಗ ಸಾಮರಸ್ಯ Next