Previous ಪ್ರಮಥ ಗಣರು ಪರ Next

ಶೀಲ

ಶೀಲ

ಲಿಂಗಾಯತ ದೀಕ್ಷೆಯನ್ನು ಸ್ವೀಕರಿಸಿದವನು ಪಾಲಿಸಬೇಕಾದ ಸದಾಚಾರ; ಶೀಲಗಳು ಅಪಾರಸಂಖ್ಯೆಯಲ್ಲಿವೆ. ಅವುಗಳಲ್ಲಿ ಪ್ರಧಾನವಾಗಿ ಅರುವತ್ತುನಾಲ್ಕು ಶೀಲಗಳು ಹಾಗೂ ಇಪ್ಪತ್ತುನಾಲ್ಕು ಶೀಲಗಳನ್ನು ಹೇಳುತ್ತಾರೆ. ಕೇಶಿರಾಜ ದಣಾಯಕರು ನಿರೂಪಿಸಿದ (೬೪ ಶೀಲಗಳನ್ನು ಕುರಿತಾದ ಶೀಲಮಹತ್ವದ ಕಂದ"ವು ಪ್ರಸಿದ್ಧವಿದೆ. ೬೪ ಶೀಲಗಳನ್ನು ಪಾಲ್ಕುರಿಕೆ ಸೋಮನಾಥನು ಹೇಳಿರುವನು, ೬೪ ಶೀಲಗಳು ಇಂತಿವೆ.

೧. ಗುರುಕಾರುಣ್ಯವನ್ನು ಪಡೆದು ಶಿವಲಿಂಗ ಸಂಬಂಧಿಯಾಗಿ ಗುರು-ಲಿಂಗ- ಜಂಗಮದಲ್ಲಿ ವಿಶ್ವಾಸ ಪ್ರಾಣನಾಗಿ ಲಿಂಗಾರ್ಚನೆಯಲ್ಲಿ ಧೀರನಾಗಿರುವುದು.

೨. ತಾನಂ ಹಿಡಿದ ಕ್ರಿಯೆ ಬಿಡದೆ ಲೌಕಿಕ ಮಾರ್ಗಗಳನ್ನು ಬಿಟ್ಟು ಆಚರಿಸುವುದು.

೩. ಶ್ವಾನ, ಸೂಕರ, ಕುಕ್ಕುಟ, ಮಾರ್ಜಾಲಗಳನ್ನು ತಮ್ಮ ಸೀಮೆಗೆ ಪ್ರವೇಶ ಗೊಡದಿರುವುದು.

೪. ಪಂಚಸೂತಕದ ದಿನಕರ್ಮಗಳನ್ನು ಮಾಡದಿರುವುದು.

೫. ಸೋಮವಾರ ಮೊದಲಾದ ತಿಥಿಗಳಲ್ಲಿ ಏಕಭೂಕ್ತೋಪವಾಸಗಳನ್ನು ಈ ಮಾಡದಿರುವುದು.

೬. ಸ್ಥಾವರಲಿಂಗಗಳ ಭಜನೆ ಬಿಡುವುದು.

೭.ಭವಿಪಾಕವನ್ನು ಬಿಡುವುದು, ಭಾಂಡಕ್ಕೆ ಸರ್ವಾಂಗ ಪಾವಡದ ಕಟ್ಟುವುದು, ಭವಿಗೆ ಪಾಕವಾದ ಪದಾರ್ಥವ ಭಕ್ತರಿಗೆ ನೀಡದಿರುವುದು.

೮. ಪಂಚಾಕ್ಷರಿ ಮಂತ್ರದಿಂದ ಜಲವನ್ನು ಶುದ್ದೀಕರಿಸುವುದು.

೯. ತನ್ನ ಸತಿಗೆ ಸಮಶೀಲವ ಮಾಡುವುದು.

೧೦. ಭವಿ ಸ್ನೇಹಮೋಹವ ಬಿಡುವುದು, ದಶವಾಯುಗಳಿಚ್ಛೆಗೆ ಹರಿಯದಿರುವುದು, ಭವಿ ಸ್ತ್ರೀಯ ಸಂಗವ ಬಿಡುವುದು.

೧೧. ಗುರುಚರಗಳಲ್ಲಿ ಗುಣಸಂಪಾದನೆ ಮಾಡುವುದು.

೧೨. ಜಂಗಮದ ಧೂಳಪಾದೋದಕದಿಂದ ಲಿಂಗಕ್ಕೆ ಮಜ್ಜನವನ್ನು ಮಾಡುವುದು, ಜಂಗಮದ ಪ್ರಸಾದಕಡ್ಡಿಯಿಂದ ದಂತಕಾಷ್ಟವ ಮಾಡುವುದು, ಜಂಗಮದ ಪ್ರಸಾದಪತ್ರೆಯ ಧರಿಸುವುದು, ಜಂಗಮದ ತೀರ್ಥ ಪ್ರಸಾದವ ಲಿಂಗಕ್ಕೆ ಅರ್ಪಿಸುವುದು.

೧೩. ತಮ್ಮ ಸತಿ ಗರ್ಭಿಣಿಯಾದರೆ ಅಷ್ಟಮಮಾಸಕ್ಕೆ ಚರಲಿಂಗದ ಕೈಯಿಂದ ಹೊಟ್ಟೆಗೆ ವಿಭೂತಿಯ ಪಟ್ಟವನ್ನು ಕಟ್ಟಿಸುವುದು.

೧೪. ಶಿವಭಕ್ತರಲ್ಲಿ ಜಾತಿಸೂತಕ, ಪಾದೋದಕ ಪ್ರಸಾದದಲ್ಲಿ ಸಂಶಯ ಮಾಡದಿರುವುದು.

೧೫. ಶಿವಲಾಂಛನದಲ್ಲಿ ರೂಪ ನಿರೂಪ, ಬಲ್ಲವರರಿಯದ ಜಾತಿಸೂತಕಗಳನ್ನು ಹುಡುಕದಿರುವುದು, ರೂಪಕ್ಕೆ ನಮಸ್ಕಾರ ಕ್ಷುಧಿಗೆ ಭಿಕ್ಷ ಆಚರಣೆಯಿದ್ದಲ್ಲಿ ತೀರ್ಥಪ್ರಸಾದ ಸ್ವೀಕರಿಸುವುದು.

೧೬. ಕರ್ಪೂರ, ಕಸ್ತೂರಿ - ಸ್ವಾದು, ಜವಾದಿ, ಪುನುಗು ಮೊದಲಾದ ಅನುಲೇಪನಾದಿಗಳನ್ನು ಬಿಡುವುದು.

೧೭. ಎಮ್ಮೆಯ ಹಾಲು, ಅಂಗಡಿಯ ತುಪ್ಪ, ಗಾಣಿಗರಮನೆ ಎಣ್ಣೆ, ಭವಿಗಳ ಮನೆಯ ಹಾಲು ಮೊಸರು ಬೆಣ್ಣೆ ಬಿಡುವುದು.

೧೮. ಭವಿ ಕೆಲಸಮಾಡದ ಲಿಂಗವಂತನ ಕೈಯಲ್ಲಿ ಗಡ್ಡ, ಮಂಡೆಯ ಕೂದಲು, ಕೈ ಉಗುರು, ಕಾಲುಗುರು ತೆಗೆಸಿಕೊಳ್ಳುವುದು.

೧೯. ಲವಣವ ಬಿಡುವುದು, ಲವಣ ಬೇಕಾದರೆ ತಮ್ಮ ಕೈಯಿಂದ ಶಿವಭಕ್ತರಿಂದ ಮಾಡಿಸಿಕೊಳ್ಳುವುದು.

೨೦. ತೊಗಲ ಕಿವಿ ಬೀವನ್ನು ತೆಗೆದು ನೂತ ನೂಲಿನಲ್ಲಿ ಲಿಂಗವಂತರ ಕೈಯಿಂದ ಕೊಂಬಿನ ಧಾಳಿಯನ್ನು ಮುಟ್ಟಿಸದೆ ಅಂಗದ ಧೋತ್ರ ಲಿಂಗದವಸ್ತ್ರಗಳನ್ನು ನೆಯ್ದಿಕೊಳ್ಳುವುದು.

೨೧. ಚರ್ಮದ ಪಾದುಕೆಯ ಬಿಟ್ಟು ಹಾವುಗೆಯ ಮೆಟ್ಟುವುದು, ರೋಮ ಚಮ್ಮಟಿಕೆಯನ್ನು ಬಿಡುವುದು.

೨೨. ತಮ್ಮ ಲಿಂಗಪೂಜೆಯ ಮಾಡುವುದಕ್ಕಿಂತ ಹೆಚ್ಚಾಗಿ ಜಂಗಮದ ಪಾದ ಪೂಜೆಯನ್ನು ಮಾಡಿ ಆ ಪಾದದ ಬಳಿಯಲ್ಲಿ ಹಸ್ತಜಪ ಮಾಡುವುದು.

೨೩. ತಾವು ಹೊದೆಯುವ ಧೋತ್ರ ಪಾವಾಡಗಳನ್ನು ಚಿಲುಮೆ ಅಗ್ಗವಣಿಯಲ್ಲಿ ತೊಳೆಯಬೇಕು ಇಲ್ಲದಿದ್ದರೆ ತಮ್ಮ ಕಾರ್ಯಕ್ಕೆ ಬೇಕಾದರೆ ಭವಿಗಳು ಬಳಸದ ಸೇದುವ ಬಾವಿಯೊಳಗೆ ತೊಳೆಯುವುದು, ತಮ್ಮ ಕಾರ್ಯಕ್ಕೆ ಬೇಕಾದರೆ ಚಿಲುಮೆ ಅಗ್ಗವಣಿಯನ್ನು ತೆಗೆದುಕೊಳ್ಳುವುದು.

೨೪. ನದಿಸ್ನಾನ, ಹಳ್ಳಸ್ನಾನ, ಹೊಳೆ ಕುಂಟೆ ಬಾವಿ, ಭವಿಗಳು ಬಳಸುವ ಸೇದುವ ಬಾವಿ, ಕೆರೆಸ್ನಾನ, ಅನ್ಯರ ಬಳಕೆಯ ಉದಕಸ್ನಾನವ ಬಿಡುವುದು.

೨೫. ಗುರು ಲಿಂಗ ಜಂಗಮದಲ್ಲಿ ಹುಸಿಯಾಡದಿರುವುದು.

೨೬. ಗುರುಲಿಂಗ ಜಂಗಮಕ್ಕೆ ವಂಚನೆಯಿಲ್ಲದೆ ತನು ಮನ ಧನಗಳನ್ನು ವ್ಯಯಿಸುವುದು.

೨೭. ಶಿವಭಕ್ತನೇ ಕುಲಜ, ಪಂಚಾಕ್ಷರಿಯೇ ಮಂತ್ರವೆಂದು ನಂಬುವುದು.

೨೮. ತಾನಿದ್ದ ಗೃಹಕ್ಕೆ ಲಿಂಗಮುದ್ರೆಯ ಮಾಡುವುದು, ಭವಿಗೆ ಶರಣೆಂದು ಕೈಮುಗಿಯದಿರುವುದು.

೨೯. ಲಿಂಗವಂತ ಕುಂಬಾರನ ಕೈಯಿಂದ ಭಾಂಡವ ಮಾಡಿಸುವುದು. ಆ ಭಾಂಡ ಭಿನ್ನವಾದರೆ ಭೂಮಿಯಲ್ಲಿ ನಿಕ್ಷೇಪವ ಮಾಡುವುದು. ಗೃಹ ಕಾರ್ಯಗಳಿಗೆ ಓ ಬಳಸುವ ಪುಟ್ಟಿ, ಮೊರ, ಬೀಸುವಕಲ್ಲು, ಒರಳು ಮೊದಲಾದ ಸಕಲಕ್ಕೆ ಲಿಂಗಮುದ್ರೆಯ ಮಾಡುವುದು.

೩೦ ಅಗ್ನಿಯಿಂದ ಸೋಕಿದ ಪದಾರ್ಥವನ್ನು ಬಿಟ್ಟು ಶಿವಭಕ್ತರ ಮೂಲಕ ಹಣ್ಣು ಕಾಯಿ ಫಲಗಳನ್ನು, ಯಾವುದಾದರೂ ಧಾನ್ಯಗಳನ್ನು ತರಿಸಿಕೊಂಡು ಚಿಲುಮೆ ಅಗ್ಗವಣಿಯಿಂದ ತೊಳೆದು ಜಂಗಮಕ್ಕೆಡೆಮಾಡಿ ಅದಕ್ಕೆ ಹಸ್ತಪರುಷವ ಮಾಡಿ ಜಂಗಮಕ್ಕೆ ನಮಸ್ಕರಿಸಿ ಆ ಜಂಗಮ ಪ್ರಸಾದ ಮುಗಿದ ಬಳಿಕ ಶರಣೆಂದು ಅಡ್ಡಬಿದ್ದು ಪ್ರಸಾದಕ್ಕೆ ನಿರೂಪವ ತೆಗೆದುಕೊಂಡು ತಾನು ಕೈ ಮುಗಿದ ಬಳಿಕ ಆ ಪ್ರಸಾದವ ತೃಪ್ತಿ ಮಾಡಿ ಸ್ವೀಕರಿಸುವುದು, ಕ್ಷಣಕ್ಷಣವೂ ಕೈಮುಗಿಯುವುದು.

೩೧. ಸೂಕ್ಷ್ಮ ಗೋವುಗಳಿಗೆ ಲಿಂಗಮುದ್ರೆಯನ್ನು ಮಾಡುವುದು, ಆ ಗೋವಿನ ಗೋಮಯ ಗೋಮೂತ್ರದಿಂದ ಷಡುಸಮ್ಮಾರ್ಜನೆಯನ್ನು ಮಾಡುವುದು, ಬಸವನಿಗೆ ಲಿಂಗಮುದ್ರೆಯನ್ನು ಮಾಡುವುದು, ಶಿವಭಕ್ತರ ಸಂಗಾತ ಮೇವು ( ತರಿಸಿ ಹಾಕುವುದು, ಚಿಲುಮೆ ಅಗ್ನವಣಿ ತರಿಸುವುದು, ಲಿಂಗಮುದ್ರೆಯ ಮಾಡಿದ ಬಸವನನ್ನು ಗೋವುಗಳಿಗೆ ಏರಿಸುವುದು...

೩೨. ಲಿಂಗಮುದ್ರೆಯ ಬಸವನ ಮೇಲೆ ಪಾದರಕ್ಷೆಯ ಮೆಟ್ಟಿಕೊಂಡು ಏರಲಾಗದು. ಪಾದರಕ್ಷೆಯ ಮೆಟ್ಟಿಕೊಂಡು ಅಗ್ನವಣಿಯ ತರಲಾಗದು. ಹಾದಿಯಲ್ಲಿ ಹೋಗುವಾಗ ಕೆಳಗೆ ಬಿದ್ದ ಪದಾರ್ಥಂಗಳ ತರಲಾಗದು. ಕಂಚಿನ ಗಂಗಾಳವ ಪಾದರಕ್ಷೆಯ ಮೆಟ್ಟಿಕೊಂಡು ತರಲಾಗದು. ಲಿಂಗಪೂಜೆ ಮಾಡಬೇಕಾದರೂ ಪುಷ್ಪ ತರಲು ಹೋಗಬೇಕಾದರೂ ಪಾದರಕ್ಷೆಯ ಮೆಟ್ಟಿಕೊಂಡು ಹೋಗಲಾಗದು. ಜಂಗಮನಿಗೆ ಪಾದರಕ್ಷೆಯ ಮೆಟ್ಟಿಕೊಂಡು ನಮಸ್ಕಾರ ಮಾಡದಿರುವುದು.

೩೩. ಶಿವಭಕ್ತನು ಅರಸನ ಕೈಯಿಂದ ಭೂಮಿಯನ್ನು ದಾನವಾಗಿ ತೆಗೆದುಕೊಂಡು ೧. ಅದನ್ನು ಶುದ್ಧವಮಾಡಿ ಲಿಂಗಮುದ್ರೆಯ ಕಲ್ಲ ನೆಡಿಸಿ ಅಲ್ಲಿ ಪುಷ್ಪದ ಗಿಡಗಳನ್ನು ಬಿತ್ತಿ ಬೆಳೆವುದು. ಆ ಪುಷ್ಪದ ತೋಟಕ್ಕೆ ಭವಿದೃಷ್ಟಿ ಬೀಳದಂತೆ ಪಾಗಾರವನ್ನು ಕಟ್ಟಿಸುವುದು.

೩೪. ಆರಂಭಮಾಡುವ ಎತ್ತುಗಳಿಗೆ ಲಿಂಗಮುದ್ರೆಯ ಮಾಡುವುದು. ತೊಗಲು ಮಿಣಿಯನ್ನು ಕಳೆದು ಶಿವಭಕ್ತರ ಕೈಯಲ್ಲಿ ಧಾನ್ಯಗಳನ್ನು ಬೆಳೆವುದು. ಆ ತೋಟಕ್ಕೆ ಊಟೆ ಬಾವಿನೀರು ಕೆರೆ ಅಗ್ನವಣಿಯನ್ನು ಬಿಡಲಾಗದು. ಸೇದುವ ಭಾವಿಯಿಂದ ಧಾನ್ಯಗಳನ್ನು ಬೆಳೆಯುವುದು. ಸೂರ್ಯ ಚಂದ್ರರ ಕಿರಣಗಳು ಬೀಳದೆ ಧಾನ್ಯಗಳನ್ನು ಬೆಳೆದು ತಮ್ಮ ಕೀಯಕ್ಕೆ ತೆಗೆದುಕೊಳ್ಳುವುದು.

೩೫. ಭವಿ ಶಬ್ದ ಕಿವಿಯಲ್ಲಿ ಕೇಳದೆ, ದೃಷ್ಟಿಯಲ್ಲಿ ಭವಿಯನ್ನು ನೋಡದೆ, ಲಿಂಗಪೂಜೆಯ ಮಾಡಿದ ಬಳಿಕ ಭವಿಯ ಜೊತೆ ನುಡಿದರೆ, ದೃಷ್ಟಿಯಿಂದ ನೋಡಿದರೆ, ಕೈಕಾಲು ತೊಳೆದು ಮುಖಮಜ್ಜನವ ಮಾಡಿ ಸಲಿಸುವುದು.

೩೬. ಗುರುಕಾರುಣ್ಯದಿಂದ ದೀಕ್ಷೆ ಲಿಂಗಧಾರಣವಾದ ಬಳಿಕ ಆ ಲಿಂಗವು ಹೋದರೆ ಅವರ ನೆರೆಬೇಡ, ಸಹಪಂಕ್ತಿ ಬೇಡ, ಅವರೊಡನೆ ಮಾತನಾಡುವುದು ಬೇಡ. 220, ಭವಿಯ ನೆರೆಯನ್ನು ಬಿಡುವುದು. ಇದ

೩೭. ಅಷ್ಟೋತ್ತರ ಶತವ್ಯಾಧಿಗಳಾದರೂ ನಾರು ಬೇರು ಮಂ

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪ್ರಮಥ ಗಣರು ಪರ Next