Previous ಭಾವಲಿಂಗ ಪರಮಾತ್ಮ Next

ಪ್ರಸಾದಿ

ಪ್ರಸಾದಿ

೧. ಪ್ರತಿಯೊಂದು ವಸ್ತುವನ್ನೂ ಲಿಂಗಕ್ಕೆ ಅರ್ಪಿಸಿದನಂತರ, ಉಳಿದುದನ್ನು ಭಕ್ತಿಯಿಂದ ಪ್ರಸಾದರೂಪದಲ್ಲಿ ಸೇವಿಸುವವನು ; ಮಾಹೇಶ್ವರನೆಂ- ತೆಂಬೆನಯ್ಯಾ ಪರಸ್ತ್ರೀ ಪರಧಾನದಾಸೆ ಬಿಡದನ್ನಕ್ಕ ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾಧಿ ನಷ್ಟವಾಗದನ್ನಕ್ಕ (ಬಸವ. ಸಮವ. ೧-೧೨೩-೫೧೦); ದೇವರ ಪರಿಯಾಣದಲು ಮಹಾರಸದ್ರವ್ಯ ಪದಾರ್ಥಂಗಳನಿಟ್ಟು ಶ್ರೀಗುರುಸಹಿತ ಜಂಗಮ ಸಹಿತ ಲಿಂಗಾರ್ಪಿತ ಮಾಡುವುದು ...ಲಿಂಗಾರ್ಚನೆಯಂ ಮಾಡಿ ಪ್ರಸಾದವ ಹಡದು ಆ ಮಹಾಪ್ರಸಾದದಿಂ ಪ್ರಸಾದಿಯಪ್ಪುದು (ಚೆನ್ನಬ. ಸಮವ. ೩-೭೭-೨೨೮); ಪರಶಿವತತ್ತ್ವ ಸ್ವರೂಪಮಪ್ಪ ಪ್ರಸಾದಮಂ ಸೇವಿಸುವ ಪ್ರಸಾದಿಯು ಮುನ್ನವೆ ಪರಶಿವನೆಂದು ತನ್ನ ನಿಜವನಡೆದು ಸಾವಧಾನಭಕ್ತಿಯಿಂದ ಲಿಂಗಾರ್ಪಿತವ ಮಾಡಿ ಪ್ರಸಾದಮಂ ಭೋಗಿಸುತ್ತಿರ್ಪಾತನೇ ಪ್ರಸಾದಿ (ಲಿಂಗಲೀ, ೧೯೫-೮).

೨. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಷಟ್‌ಸ್ಥಲಗಳಲ್ಲಿ ಒಂದು; ಅವಧಾನಭಕ್ತಿಯೇ ಪ್ರಧಾನವಾಗಿರುವ ಮೂರನೆಯ ಸ್ಥಲ ; ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣಐಕ್ಯ ಎಂದಿಂತು ಷಟ್‌ಸ್ಥಲವಾಲ (ಚೆನ್ನಬ, ಸಮವ. ೩-೫೩೦-೧೪೭೦);

ಅದರಪಾಸಕದೊಳಂದಿರವೆ ಸತ್ಪಾಣಲಿಂಗಿಸ್ಥಲವದಾಯ್ತು ಚರಲಿಂಗದಿಂದುದಿಸಿ ಬಳಿಕೆ ನಿರುತದಿಚ್ಛಾಶಕ್ತಿಯಾಗೆ ತತ್ಸಂಗದಿಂ ಪರಿಕಿಸಲ್ ಶಿವಲಿಂಗವಾಯ್ತದಲ್ಲಿ ಸೇವಕದಿ ಪರಮಪ್ರಸಾದಿಯ ಸ್ಥಲವಾಯ್ತು (ಚೆಬಪು. ೬೧-೨೬); ಈ ಭಕ್ತಿಮಾರ್ಗವನ್ನು ಅನುಸರಿಸುತ್ತಾ ಹೋದರೆ ಕ್ರಮವಾಗಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಆರು ಆಧ್ಯಾತ್ಮಿಕ ಸ್ಥಾನಗಳನ್ನು ಹೊಂದುತ್ತಾನೆ (ಭಾರದ, ೨೧೭).

೩. ದೇವನಿಗರ್ಪಿಸಿದಲ್ಲದೆ ಏನನ್ನೂ ಕೊಳ್ಳೆನೆನ್ನುವವನು ಪ್ರಸಾದಿ. ಇದು ಆಹಾರ ಪಾನೀಯಗಳ ಅರ್ಪಣೆಯಿಂದ ಪ್ರಾರಂಭವಾಗಿ ದೇಹೇಂದ್ರಿಯಾದಿಗಳ ಅರ್ಪಣೆಯಲ್ಲಿ ಮುಗಿಯುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭಾವಲಿಂಗ ಪರಮಾತ್ಮ Next