Previous ಹಸ್ತಗಳು (ಸುಹಸ್ತಗಳು) ಸ್ವಸ್ತಿಕಾರೋಹಣ ದೀಕ್ಷೆ Next

ಹದಿನಾಲ್ಕು ತೆರನ ಭಕ್ತಿ

ಹದಿನಾಲ್ಕು ತೆರನ ಭಕ್ತಿ

ಸಾಧಕನು ತನ್ನ ಆಧ್ಯಾತ್ಮಿಕ ಪಥದ ಪ್ರಾರಂಭಿಕ ಹಂತದಲ್ಲಿ ಜಂಗಮ ಲಿಂಗಕ್ಕೆ ಹದಿನಾಲ್ಕು ರೀತಿಯ ಭಕ್ತಿಯನ್ನು ತೋರಿಸಬೇಕು. ರಾಜನೊಬ್ಬನಿಗೆ ಪ್ರಜೆಯು ತೊರುವ ಗೌರವವನ್ನೇ, ಆ ಭಕ್ತನು ಜಂಗಮನಿಗೆ ತೋರಿಸುತ್ತಾನೆ. ಈ ಭಕ್ತಿಯಲ್ಲಿ ಹದಿನಾಲ್ಕು ಅಂಶಗಳಿವೆ. ಅವುಗಳ ವಿವರ ಹೀಗಿದೆ :

೧. ಲಿಂಗಕ್ಕೆ ಮಜ್ಜನಮಾಡಿಸಬೇಕು,
೨. ವಸ್ತ್ರದಿಂದ ಅದನ್ನು ಒರೆಸಬೇಕು.
೩. ಲಿಂಗಕ್ಕೆ ಗಂಧವನ್ನೂ,
೪. ಅಕ್ಷತೆಯನ್ನೂ ಲೇಪಿಸಬೇಕು:
೫. ಪತ್ರೆ ಪುಷ್ಪಗಳನ್ನು ಅರ್ಪಿಸಬೇಕು
೬. ಧೂಪಾರತಿಯನ್ನೂ,
೭. ದೀಪಾರತಿಯನ್ನೂ ಬೆಳಗಬೇಕು:
೮. ನೈವೇದ್ಯ ಮಾಡಬೇಕು
೯. ನೀರನ್ನು ಅರ್ಪಿಸಬೇಕು,
೧೦. ತಾಂಬೂಲವನ್ನು ಅರ್ಪಿಸಬೇಕು,
೧೧. ಊಟದ ನಂತರ ರಾಜನಿಗೆ ಸುಖಾಸನ ನೀಡುವಂತೆ ಜಂಗಮ ಲಿಂಗಕ್ಕೂ ಸುಖಾಸನ ನೀಡಬೇಕು;
೧೨. ರಾಜನ ಸಂತೋಷಕ್ಕಾಗಿ ಅವನನ್ನು ಹೊಗಳಿ, ಅವನಿಗೆ ನರ್ತನವನ್ನು ತೋರಿಸುವಂತೆ, ಜಂಗಮ ಲಿಂಗಕ್ಕೂ ಮಂತ್ರ ಸ್ತೋತ್ರ ಗೀತ ನರ್ತನಗಳು ಆಗಬೇಕು;
೧೩ ಮಲಗಿ ಎದ್ದನಂತರ ರಾಜನಿಗೆ ವಸ್ತ್ರಾಲಂಕಾರ, ಆಭರಣಗಳ ಧಾರಣೆಯಾಗುವಂತೆ ಜಂಗಮ ಲಿಂಗಕ್ಕೂ ಆಗಬೇಕು.
೧೪. ರಾಜನಿಗೆ ಹಿಂತಿರುಗಲು ವಾಹನದ ಏರ್ಪಾಡು ಮಾಡುವಂತೆ ಜಂಗಮ ಲಿಂಗಕ್ಕೂ ವಾಹನದ ಏರ್ಪಾಟು ಮಾಡಬೇಕು.

ಆದರೆ ಈ ವಚನದಲ್ಲಿ (೩:೧೫೨೮) ಇದಾವುದನ್ನು ಮಾಡಬಾರದು, ಇದೇನನ್ನೂ ಮಾಡದೆಯೇ ಪ್ರಸಾದವನ್ನು ಪಡೆದುಕೊಳ್ಳುವವನಿಗೆ ಗುರುಲಿಂಗ ಜಂಗಮ ಉಂಟು, ಉಳಿದವರಿಗೆ ಇಲ್ಲ ಎಂದು ಹೇಳಲಾಗಿದೆ. ಇದರ ಅರ್ಥ, ಲಿಂಗವನ್ನಾಗಲಿ ಜಂಗಮವನ್ನಾಗಿ ಒಬ್ಬ ಸಧಾರಣ ರಾಜನಂತೆ ಕಾಣಬಾರದು ಎಂಬುದಾಗಿದೆ .

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಹಸ್ತಗಳು (ಸುಹಸ್ತಗಳು) ಸ್ವಸ್ತಿಕಾರೋಹಣ ದೀಕ್ಷೆ Next