ಇನ್ನೂರ ಹದಿನಾರು ಸಕೀಲಗಳು | ಪಾರಿಭಾಷಿಕ ಪದಕೋಶ |
ನೂರೊಂದು ಸ್ಥಲಗಳು (ಏಕೋತ್ತರ ಶತಸ್ಥಲ) |
ವಚನಗಳಲ್ಲಿ ಅಲ್ಲಲ್ಲಿ ನೂರೊಂದು ಸ್ಥಲ ಅಥವಾ ಏಕೋತ್ತರ ಶತಸ್ಥಲ ಎಂಬ ಪದ ಪ್ರಯೋಗವಾಗಿದ್ದರೂ, ಆ ನೂರೊಂದು ಸ್ಥಲಗಳಾವವು, ಅವುಗಳ ವಿಶಿಷ್ಟ ಲಕ್ಷಣಗಳಾವವು ಎಂಬುದರ ವಿವರ ಸಿಕ್ಕುವುದಿಲ್ಲ. ಈ ವಿವರಗಳಿಗೆ ನಾವು, ಇದನ್ನು ವಿವರವಾಗಿ ತಿಳಿಸಿರುವ ಸಿದ್ಧಾಂತಶಿಖಾಮಣಿಯನ್ನು ಅವಲಂಬಿಸಬೇಕಾಗುತ್ತದೆ. ಜಕ್ಕಣಾರ್ಯರು ರಚಿಸಿದ "ಏಕೋತ್ತರ ಶತಸ್ಥಲವೂ ಇಲ್ಲಿ ಉಪಯೋಗಕರವಾಗಿದ್ದರೂ, ಅವರು ಯಾವೊಬ್ಬ ಶರಣರ ನೂರೊಂದು ಸ್ಥಲ ಪರಿಕಲ್ಪನೆಯನ್ನೂ ಕುರಿತು ಹೇಳುವುದಿಲ್ಲ. ಸಿದ್ಧಾಂತ ಶಿಖಾಮಣಿಯ ಸಿದ್ಧಾಂತಕ್ಕೆ ಹೋಲುವಂಥ ವಚನಗಳನ್ನು ಆಯ್ದು ಅವುಗಳನ್ನು ನೂರೊಂದು ಸ್ಥಲಗಳಡಿಯಲ್ಲಿ ತಂದಿದ್ದಾರೆ.
ನೂರೊಂದು ಸ್ಥಲಗಳನ್ನು ಮುಖ್ಯವಾಗಿ, ಅಂಗ ಷಟ್‌ಸ್ಥಲ ಮತ್ತು ಲಿಂಗಷಟ್ ಸ್ಥಲ ಎಂದು ಎರಡು ಭಾಗ ಮಾಡಲಾಗಿದೆ. ಮೊದಲನೆಯದು ನಲವತ್ನಾಲ್ಕು ಸ್ಥಲಗಳನ್ನು ಒಳಗೊಂಡರೆ, ಎರಡನೆಯದು ಐವತ್ತೇಳು ಸ್ಥಲಗಳನ್ನೊಳಗೊಳ್ಳುತ್ತದೆ. ವಚನಕಾರರೆಲ್ಲರೂ ಷಟ್‌ಸ್ಥಲ ಸಿದ್ಧಾಂತದ ಪ್ರತಿಪಾದಕರಾಗಿದ್ದರೂ, ಆ ಸಿದ್ಧಾಂತಕ್ಕೂ ನೂರೊಂದು ಸ್ಥಲ ಸಿದ್ಧಾಂತಕ್ಕೂ ವಿರೋಧ ಅಥವಾ ವ್ಯತ್ಯಾಸಬರದಂತೆ, ಅವೆರಡನ್ನೂ ಸಮನ್ವಯಗೊಳಿಸಿದ್ದಾರೆ. ಅಂದರೆ, ನೂರೊಂದು ಸ್ಥಲಗಳನ್ನು ಈ ಕೆಳಗಿನಂತೆ ಹಂಚಿದ್ದಾರೆ:
(ಅ) ಅಂಗ ಷಟ್‌ಸ್ಥಲಗಳಡಿಯಲ್ಲಿ ಈ ಕೆಳಗಿನ ೪೪ ಸ್ಥಲಗಳು ಬರುತ್ತವೆ :
೧. ಭಕ್ತಸ್ಥಲದಡಿಯಲ್ಲಿ ೧೫ ಸ್ಥಲಗಳು (ಅವು ಯಾವುವೆಂದರೆ : ಪಿಂಡಸ್ಥಲ, ಪಿಂಡಜ್ಞಾನಸ್ಥಲ ಸಂಸಾರ ಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿ ಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, (ಅಥವಾ ಭಕ್ತಿಮಾರ್ಗಕ್ರಿಯಾಸ್ಟಲ), ಉಭಯಸ್ಥಲ, ತ್ರಿವಿಧ ಸಪಂತ್ತಿನ ಸ್ಥಲ, ಚತುರ್ವಿಧ ಸಾರಾಯಸ್ಥಲ, ಉಪಾಧಿ ಮಾಟಸ್ಥಲ, ನಿರುಪಾಧಿ ಮಾಟಸ್ಥಲ ಮತ್ತು ಸಹಜ ಮಾಟಸ್ಥಲ). ೨. ಮಹೇಶ್ವರಸ್ಥಲದಡಿಯಲ್ಲಿ ಒಂಬತ್ತು ಸ್ಥಲಗಳು (ಅವು ಯಾವುದೆಂದರೆ : ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗಿ ತನಿರಸನಸ್ಥಲ, ಆಹ್ವಾನ ನಿರಸನಸ್ಥಲ, ಅಷ್ಟತನು ಮೂರ್ತಿನಿರಸನಸ್ಥಲ, ಸರ್ವಗತ ನಿರಸನಸ್ಥಲ, ಶಿವಜಗನ್ಮಯಸ್ಸಲ, ಭಕ್ತದೇಹಿಕ ಲಿಂಗಸ್ಥಲ).
೩. ಪ್ರಸಾದಿಸ್ಥಲದಡಿಯಲ್ಲಿ ಏಳು ಸ್ಥಲಗಳು (ಅವೆಂದರೆ : ಪ್ರಸಾದಿಸ್ಥಲ, ಗುರುಮಹಾತ್ಮಸ್ಥಲ, ಲಿಂಗಮಹಾತ್ಮಸ್ಥಲ, ಶರಣಮಹಾತ್ಮಸ್ಥಲ, ಜಂಗಮ ಮಹಾತ್ಮಸ್ಥಲ, ಭಕ್ತಮಹಾತ್ಮಸ್ಥಲ, ಪ್ರಸಾದ ಮಹಾತ್ಮಸ್ಥಲ).
೪. ಪ್ರಾಣಲಿಂಗಿಸ್ಥಲವು ಐದು ಸ್ಥಲಗಳನ್ನೊಳಗೊಳ್ಳುತ್ತದೆ. (ಅವೆಂದರೆ : ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನ ಸ್ಥಲ, ಶಿವಯೋಗ ಸಮಾಧಿ ಸ್ಥಲ, ಲಿಂಗಲೀಜಸ್ಥಲ, ಅಂಗನಿಂಗಸ್ಥಲ).
೫. ಶರಣಸ್ಥಲವು ನಾಲ್ಕು ಸ್ಥಲಗಳನ್ನೊಳಗೊಳ್ಳುತ್ತದೆ. (ಅವೆಂದರೆ : ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶಸ್ಥಲ, ಶೀಲಸಂಪಾದನಾ ಸ್ಥಲ).
೬. ಐಕ್ಯಸ್ಥಲವು ನಾಲ್ಕು ಸ್ಥಲಗಳನ್ನೊಳಗೊಳ್ಳುತ್ತದೆ. (ಅವೆಂದರೆ : ಐಕ್ಯಸ್ಥಲ, ಸರ್ವಾಚಾರ ಸಂಪತ್ತಿನ ಸ್ಥಲ, ಏಕಭಾಜನಸ್ಥಲ, ಸಹಭಾಜನ ಸ್ಥಲ).
(ಅ) ಲಿಂಗಷಟ್‌ಸ್ಥಲದಡಿಯಲ್ಲಿ ಉಳಿದ ೫೭ ಸ್ಥಲಗಳು ಬರುತ್ತವೆ. ಅವುಗಳ ವಿವರ: (೧) ಆಚಾರಲಿಂಗಸ್ಥನದಡಿಯಲ್ಲಿ ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ ಮತ್ತು ಪರಸ್ಪಲ ಎಂಬ ಒಂಬತ್ತು ಸ್ಥಲಗಳು ಬರುತ್ತವೆ.
(೨) ಗುರುಲಿಂಗಸ್ಥಲವು ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ ಎಂಬ ಒಂಬತ್ತು ಸ್ಥಲಗಳನ್ನು ಒಳಗೊಳ್ಳುತ್ತದೆ.
(೩) ಶಿವಲಿಂಗಸ್ಥಲವೂ ಒಂಬತ್ತು ಸ್ಥಲಗಳನ್ನು ಒಳಗೊಳ್ಳುತ್ತದೆ. ಅವೆಂದರೆ : ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶೂಷಾಸ್ಥಲ, ಸೇವ್ಯಸ್ಥಲ.
(೪) ಜಂಗಮಲಿಂಗದಡಿಯಲ್ಲಿ ಜೀವಾತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೆಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ ಎಂಬ ಹನ್ನೆರೆಡು ಸ್ಥಲಗಳು ಸೇರುತ್ತವೆ.
(೫) ಪ್ರಸಾದಲಿಂಗಸ್ಥಲವು ಕ್ರಿಯಾನಿಷ್ಪತ್ತಿ ಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ ಎಂಬ ಒಂಬತ್ತು ಸ್ಥಲಗಳನ್ನೊಳಗೊಳ್ಳುತ್ತದೆ.
(೬) ಮಹಾಲಿಂಗಸ್ಥಲವು ಸ್ವೀಕೃತಪ್ರಸಾದಿಸ್ಥಲ, ಶಿಷ್ಟದನಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪಸ್ಥಲ, ಸ್ವಪರಾಜ್ಞಾಸ್ಥಲ, ಭಾವಾಭಾವಲಯಸ್ಥಲ, ಜ್ಞಾನಶೂನ್ಯಸ್ಥಲ ಎಂಬ ಒಂಬತ್ತು ಸ್ಥಲಗಳನ್ನು ಒಳಗೊಂಡಿದೆ.
ಅಂಗ ಷಟ್‌ಸ್ಥಲಕ್ಕೂ ಲಿಂಗ ಷಟ್‌ಸ್ಥಲಕ್ಕೂ ಇರುವ ಮುಖ್ಯವ್ಯತ್ಯಾಸವನ್ನು ನಾವು ಹೀಗೆ ಸಂಕ್ಷಿಪ್ತವಾಗಿ ಹೇಳಬಹುದು : ಅಂಗನು (ಸಾಧಕನು) ಮಾಡುವ ಸಾಧನೆಯಲ್ಲಿ ಹೆಚ್ಚಾಗಿ ಸಾಧಾರಣ ಆಧ್ಯಾತ್ಮಿಕತೆ ಇದ್ದು, ಲಿಂಗಷಟ್‌ಸ್ಥಲದ ಸಾಧನೆಯು ಉನ್ನತ ಮಟ್ಟದ್ದು ಇದೆ. ಅಥವಾ ಮೊದಲನೆಯದು ಹೆಚ್ಚಾಗಿ ಕ್ರಿಯೆಗಳನ್ನು ಒಳಗೊಂಡಿದ್ದು, ಎರಡನೆಯದು ಹೆಚ್ಚಾಗಿ ಜ್ಞಾನ ಮತ್ತು ಭಕ್ತಿಯನ್ನೊಳಗೊಂಡಿದೆ.
ಅಂಗಸ್ಥಲಗಳು- ೪೪
ತ್ರಿವಿಧ ಸಂಪತ್ತು ಸ್ಥಲ, ಚತುರ್ವಿಧ ಸಾರಾಯಸ್ಥಲ
ಭಕ್ತಸ್ಥಲ-೧೫ : ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಸ್ಥಲ, ಉಭಯಸ್ಥಲ
ಮಹೇಶಸ್ಥಲ-೯: ಮಹೇಶ ಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತ ನಿರಸನಸ್ಥಲ, ಆಹ್ವಾನ ನಿರಸನಸ್ಥಲ, ಅಷ್ಟತನುಮೂರ್ತಿ ನಿರಸನಸ್ಥಲ, ಸರ್ವಗತ ನಿರಸನ ಸ್ಥಲ, ಶಿವಜಗನ್ಮಯ ಸ್ಥಲ, ಭಕ್ತದೇಹಿಕ ಲಿಂಗಸ್ಥಲ
ಪ್ರಸಾದಿಸ್ಥಲ-೭: ಪ್ರಸಾದಿಸ್ಥಲ, ಗುರುಮಹಾತ್ಮಯಸ್ಥಲ, ಲಿಂಗಮಹಾತ್ಮಯಸ್ಥಲ, ಜಂಗಮಮಹಾತ್ಮಯಸ್ಥಲ, ಭಕ್ತ ಮಹಾತ್ಮಯ ಸ್ಥಲ, ಶರಣ ಮಹಾತ್ರೆಯ ಸ್ಥಲ, ಪ್ರಸಾದ ಮಹಾತ್ರೆಯ ಸ್ಥಲ
ಪ್ರಾಣಲಿಂಗಿಸ್ಥಲ-೫ : ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನೆಯ ಸ್ಥಲ, ಶಿವಯೋಗ ಸಮಾಧಿಸ್ಥಲ, ಲಿಂಗನಿಜಸ್ಥಲ, ಅಂಗಲಿಂಗಸ್ಥಲ
ಶರಣಸ್ಥಲ-೪ : ಶರಣಸ್ಥಲ, ತಾಮಸನಿರಸನ ಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನೆಯಸ್ಥಲ
ಐಕ್ಯಸ್ಥಲ-4: ಐಕ್ಯಸ್ಥಲ, ಸರ್ವಾಚಾರಿಸಂಪತ್ತುಸ್ಥಲ, ಏಕಭಾಜನ ಸ್ಥಲ, ಸಹಭೋಜನ ಸ್ಥಲ
ಲಿಂಗಸ್ಥಲ- ೫೭
ಆಚಾರಲಿಂಗಸ್ಥಲ- ೯ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರು, ಕ್ರಿಯಾಲಿಂಗ, ಭಾವಲಿಂಗ, ಜ್ಞಾನಲಿಂಗ ಸ್ವಯಲಿಂಗ, ಚರಲಿಂಗ, ಪರಲಿಂಗ,
ಗುರುಲಿಂಗಸ್ಥಲ - ೯ ಕ್ರಿಯಾಗಮ, ಭಾವಾಗಮ, ಜ್ಞಾನಾಗಮ, ಸಕಾಯ, ಅಕಾಯ, ಪರಕಾಯ ಧರ್ಮಾಚಾರ, ಭಾವಾಚಾರ, ಜ್ಞಾನಾಚಾರ
ಶಿವಲಿಂಗಸ್ಥಲ- ೯ ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹ ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತ ಶಿಷ್ಯಸ್ಥಲ, ಶುಶೂಷಾಸ್ಥಲ, ಸೇವ್ಯಸ್ಥಲ
ಜಂಗಮಲಿಂಗಸ್ಥಲ -೧೨ : ಜೀವಾತ್ಮ, ಅಂತರಾತ್ಮ, ಪರಮಾತ್ಮ; ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮ; ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯಪ್ರಸಾದಿ, ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕ
ಪ್ರಸಾದಲಿಂಗಸ್ಥಲ -೯: ಕ್ರಿಯಾನಿಷ್ಪತ್ತಿಲಿಂಗ, ಭಾವನಿಷ್ಪತ್ತಿಲಿಂಗ, ಜ್ಞಾನನಿಷ್ಪತ್ತಿಲಿಂಗ ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶ ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶ
ಮಹಾಲಿಂಗಸ್ಥಲ- ೯ ಸ್ವೀಕೃತಪ್ರಸಾದಿ, (ಕೊಂಡುದು ಪ್ರಸಾದ), ಶಿಷ್ಟೋದನ ಪ್ರಸಾದಿ (ನಿಂದುದೋಗರ), ಚರಚರನಾಸ್ತಿಪ್ರಸಾದಿ, ಭಾಂಡ ಭಾಜನ, ಅಂಗಲೇಪನ ಸ್ವಪರಾಜ್ಞಾ, ಭಾವಾಭಾವನಪ್ಪ, ಜ್ಞಾನಶೂನ್ಯಸ್ಥಲ
ಭಕ್ತನ ಸಾಧನೆಯ ನೂರೊಂದು ಹಂತಗಳು, -ಮಜಲುಗಳು; ಮನುಷ್ಯನಲ್ಲಿರುವ ಗುಣಗಳು, ಶಕ್ತಿಗಳು ಮುಂತಾದುವುಗಳಿಗನು- ಗುಣವಾಗಿ ಈ ನೂರೊಂದು ಸ್ಥಲಗಳಿವೆ. ಷಟ್‌ಸ್ಥಲಗಳ ಒಂದೊಂದು ಸ್ಥಲದಲ್ಲಿಯೂ ಉಪವಿಭಾಗಗಳಿವೆ. ಇದರಲ್ಲಿ ನಲವತ್ತುನಾಲ್ಕು ಅಂಗಸ್ಥಲಗಳಿದ್ದು, ಅವು ಯಾವುವೆಂದರೆ
೧. ಭಕ್ತಸ್ಥಲ-ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ದೀಕ್ಷಾಲಕ್ಷಣ ಗುರುಕಾರುಣ್ಯಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಧಾರಣಸ್ಥಲ, ಪಂಚಾಕ್ಷರೀಜಪಸ್ಥಲ, ಭಕ್ತಮಾರ್ಗಸ್ಥಲ, ಗುರುಲಿಂಗಾರ್ಚನ ಸರೂಪೋಭಯಸ್ಥಲ, ಜಂಗಮಾರ್ಚನ ಲಕ್ಷಣ ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ ಎಂಬ ಹದಿನೈದು ಸ್ಥಲಗಳು ;
೨. ಮಾಹೇಶ್ವರಸ್ಥಲ-ಮಾಹೇಶ್ವರಪ್ರಶಂಸಾಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ಅದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟಮೂರ್ತಿನಿರಸನಸ್ಥಲ, ಸರ್ವಗತ್ವನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತ ದೇಹಿಕಲಿಂಗಸ್ಥಲ ಎಂಬ ಒಂಬತ್ತು ಸ್ಥಲಗಳು ;
೩. ಪ್ರಸಾದಿಸ್ಥಲ-ಪ್ರಾಸಾದಿಸ್ಥಲ, ಗುರುಮಾಹಾತ್ಮ ಸ್ಥಲ, ಲಿಂಗಮಾಹಾತ್ಮಸ್ಥಲ, ಜಂಗಮ- ಮಾಹಾತ್ಮಸ್ಥಲ, ಭಕ್ತಮಾಹಾತ್ಮಸ್ಥಲ, ಶರಣಮಾಹಾತ್ಮಸ್ಥಲ, ಪ್ರಸಾದಮಾಹಾತ್ಮಸ್ಥಲ -ಎಂಬ ಏಳು ಸ್ಥಲಗಳು;
೪. ಪ್ರಾಣಲಿಂಗಿಸ್ಥಲ-ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಸ್ಥಲ, ಶಿವಯೋಗಸಮಾಧಿಸ್ಥಲ, ಲಿಂಗನಿಜಸ್ಥಲ, ಅಂಗಲಿಂಗಸ್ಥಲ ಎಂಬ ಐದು ಸ್ಥಲಗಳು;
೫. ಶರಣಸ್ಥಲ-ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನಸ್ಥಲ ಎಂಬ ನಾಲ್ಕು ಸ್ಥಲಗಳು;
೬. ಐಕ್ಯಸ್ಥಲ-ಐಕ್ಯಸ್ಥಲ, ಆಚಾರಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ ಎಂಬ ನಾಲ್ಕು ಸ್ಥಲಗಳು ಮತ್ತು ಇದರಲ್ಲಿ ಐವತ್ತೇಳು ಲಿಂಗಸ್ಥಲಗಳಿದ್ದು, ಅವು ಯಾವುವೆಂದರೆ
೧. ಭಕ್ತಸ್ಥಲ- ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ ಎಂಬ ಒಂಬತ್ತು ಸ್ಥಲಗಳು;
೨. ಮಾಹೇಶ್ವರಸ್ಥಲ ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ ಎಂಬ ಒಂಬತ್ತು ಸ್ಥಲಗಳು;
೩. ಪ್ರಸಾದಿಸ್ಥಲ- ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶೂಷಸ್ಥಲ, ಸೇವ್ಯಸ್ಥಲ, ಎಂಬ ಒಂಬತ್ತು ಸ್ಥಲಗಳು;
೪. ಪ್ರಾಣಲಿಂಗಿಸ್ಥಲ-ಆತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೆಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಸ್ಥಲ, ಅಂತ್ಯಪ್ರಸಾದಸ್ಥಲ, ಸೇವ್ಯಪ್ರಸಾದಸ್ಥಲ ಎಂಬ ಒಂಬತ್ತು ಸ್ಥಲಗಳು;
೫. ಶರಣಸ್ಥಲ- ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನವಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹಾಕಾಶಸ್ಥಲ, ಕ್ರಿಯಾಪ್ರಕಾಶನಸ್ಥಲ, ಭಾವಪ್ರಕಾಶನಸ್ಥಲ, ಜ್ಞಾನಪ್ರಕಾಶನಸ್ಥಲ ಎಂಬ ಹನ್ನೆರಡು ಸ್ಥಲಗಳು;
೬. ಐಕ್ಯಸ್ಥಲ- ಸ್ವೀಕೃತಪ್ರಸಾದೈಕಸ್ಥಲ, ಶಿಷ್ಟೋದನಸ್ಥಲ, ಚರಾಚರಲಯಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪಸ್ಥಲ, ಸ್ವಪರಾಜ್ಞಾಸ್ಥಲ, ಭಾವಾಭಾವಲಯಸ್ಥಲ, ಜ್ಞಾನಶೂನ್ಯಸ್ಥಲ ಎಂಬ ಒಂಬತ್ತು ಸ್ಥಲಗಳು, ಈ ರೀತಿ ಅಂಗಸ್ಥಲ ಮತ್ತು ಲಿಂಗಸ್ಥಲಗಳಲ್ಲಿರುವ ಷಟ್‌ಸ್ಥಲಗಳು ಒಟ್ಟು ನೂರೆಂಟು ಸ್ಥಲಗಳಾಗಿ ವಿಭಜಿಸಲ್ಪಟ್ಟಿವೆ : ಷಟ್‌ಸ್ಥಲಭೇದೋಪ ಭೇದಂಗಳನಾರೈದು ವರ್ತಿಸುವಲ್ಲಿ ಪಿಂಡಾದಿ ಜ್ಞಾನಶೂನ್ಯಾಂತಮಾದ ...ನೂರೊಂದು ಸ್ಥಲಗಳೊಳಗೆ ಮೊದಲಂಗಸ್ಥಲ ನಾಲ್ವತ್ತುನಾಲ್ಕೆನಿಸಿ ಮೇಲೆ ಲಿಂಗಸ್ಥಲವೈವತ್ತೇಳೆನಿಸಿಕೊಂಬುವು;
ಷಟ್‌ಸ್ಥಲಗಳಲ್ಲಿ ಉಪಭಾಗಗಳಾಗಿರುವ ನೂರೊಂದು ಸ್ಥಲಗಳು ; ಇದರಲ್ಲಿ ಭಕ್ತನ ಆಚರಣೆಗಳಿಗೆ ಸಂಬಂಧಿಸಿದಂತೆ ನಲವತ್ತುನಾಲ್ಕು ಅಂಗಸ್ಥಲಗಳು ಮತ್ತು ಅಂಥ ಆಚರಣೆಗಳಿಂದುಂಟಾಗುವ ಪರಿಣಾಮಗಳನ್ನು ತಿಳಿಸುವ ಐವತ್ತೇಳು ಲಿಂಗಸ್ಥಲಗಳು ಇವೆ. ಅಂಗಸ್ಥಲಗಳಲ್ಲಿ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಆರು ಮುಖ್ಯ ವಿಭಾಗಗಳೂ ಲಿಂಗಸ್ಥಲಗಳಲ್ಲಿ ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂಬ ಆರು ಮುಖ್ಯ ವಿಭಾಗಗಳೂ ಇವೆ. ಅವುಗಳ ವಿವರ ಈ ರೀತಿ ಇದೆ ;
ಅಂಗಸ್ಥಲಗಳು ೪೪ - ೧. ಭಕ್ತಸ್ಥಲ – ಇದರಲ್ಲಿ ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಗುರುಕಾರುಣ್ಯಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ಸಂಸಾರಹೇಯಸ್ಥಲ, ರುದ್ರಾಕ್ಷಧಾರಣಸ್ಥಲ, ಪಂಚಾಕ್ಷರೀಜಪಸ್ಥಲ, ಭಕ್ತಸ್ಥಲ, ಗುರುಲಿಂಗಾರ್ಚನ ಸರೂಪೋಭಯಸ್ಥಲ, ಗುರುಲಿಂಗಜಂಗಮ ತ್ರಿವಿಧಸಂಪತ್ತುಸ್ಥಲ, ಚತುರ್ವಿಧಸಾರಾಯ ಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ ಎಂಬ ಹದಿನೈದು ಸ್ಥಲಗಳು ;
೨. ಮಹೇಶ್ವರ ಸ್ಥಲ ;- ಇದರಲ್ಲಿ ಮಾಹೇಶ್ವರಪ್ರಶಂಸಾಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ – ಎಂಬ ಒಂಬತ್ತು ಸ್ಥಲಗಳು ;
೩. ಪ್ರಸಾದಿಸ್ಥಲ ;- ಪ್ರಸಾದಿಸ್ಥಲ, ಗುರುಮಾಹಾತ್ಮಸ್ಥಲ, ಲಿಂಗಮಾಹಾತ್ಮಸ್ಥಲ, ಜಂಗಮಮಾಹಾತ್ಮಸ್ಥಲ, ಭಕ್ತಮಾಹಾತ್ಮಸ್ಥಲ, ಶರಣಮಾಹಾತ್ಮಸ್ಥಲ, ಪ್ರಸಾದಮಾಹಾತ್ಮಸ್ಥಲ -ಎಂಬ ಏಳು ಸ್ಥಲಗಳು;
೪, ಪ್ರಾಣಲಿಂಗಿಸ್ಥಲ ;- ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ, ಶಿವಯೋಗ ಸಮಾಧಿಸ್ಥಲ, ಲಿಂಗನಿಜಸ್ಥಲ, ಅಂಗಲಿಂಗಸ್ಥಲ -ಎಂಬ ಐದು ಸ್ಥಲಗಳು;
೫. ಶರಣಸ್ಥಲ ;- ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನಸ್ಥಲ -ಎಂಬ ನಾಲ್ಕು ಸ್ಥಲಗಳು ;
೬. ಐಕ್ಯಸ್ಥಲ ;- ಇದರಲ್ಲಿ ಐಕ್ಯಸ್ಥಲ, ಸರ್ವಾಚಾರ- ಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ -ಎಂಬ ನಾಲ್ಕು ಸ್ಥಲಗಳು ಇವೆ.
ಲಿಂಗಸ್ಥಲಗಳು ೫೭ – ೧. ಭಕ್ತಸ್ಥಲ ;- ಇದರಲ್ಲಿ ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ -ಎಂಬ ಒಂಬತ್ತು ಸ್ಥಲಗಳು ;
೨. ಮಾಹೇಶ್ವರಸ್ಥಲ - ಇದರಲ್ಲಿ ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ -ಎಂಬ ಒಂಬತ್ತು ಸ್ಥಲಗಳು ;
೩. ಪ್ರಸಾದಿಸ್ಥಲ - ಇದರಲ್ಲಿ ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶೂಷಾಸ್ಥಲ, ಸೇವ್ಯಸ್ಥಲ ಎಂಬ ಒಂಬತ್ತು ಸ್ಥಲಗಳು;
೪. ಪ್ರಾಣಲಿಂಗಿಸ್ಥಲ ;- ಆತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೆಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಿಷ್ಟಾಗಮಸ್ಥಲ, ಆದಿಪ್ರಸಾದಸ್ಥಲ, ಅಂತ್ಯಪ್ರಸಾದಸ್ಥಲ, ಸೇವ್ಯಪ್ರಸಾದಸ್ಥಲ - ಎಂಬ ಒಂಬತ್ತು ಸ್ಥಲಗಳು;
೫. ಶರಣಸ್ಥಲ;- ದೀಕ್ಷಾಪಾದೋದಕ ಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಪ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶನಸ್ಥಲ, ಜ್ಞಾನಪ್ರಕಾಶಸ್ಥಲ -ಎಂಬ ಹನ್ನೆರಡು ಸ್ಥಲಗಳು ;
೬. ಐಕ್ಯಸ್ಥಲ;- ಸ್ವೀಕೃತ ಪ್ರಸಾದೈಕ್ಯಸ್ಥಲ, ಶಿಷ್ಟೋದನಸ್ಥಲ, ಚರಾಚರಲಯಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ, ಸ್ವಪರಾಜ್ಞಾಸ್ಥಲ, ಭಾವಾಭಾವಲಯಸ್ಥಲ, ಜ್ಞಾನಶೂನ್ಯಸ್ಥಲ-ಎಂಬ ಒಂಬತ್ತು ಸ್ಥಲಗಳು ಇದ್ದು ಒಟ್ಟು ನೂರೊಂದು ಸ್ಥಲಗಳಾಗಿವೆ ;
ಇಂತಿವರೊಳಗಾದ ಏಕೋತ್ತರಶತಸ್ಥಲ ಮೊದಲಾದ ಭಾವವೂ ನಿಮ್ಮಲ್ಲಿಯೆಂದು ಅಳೆದು ಮತ್ತೆ ಅದನೇನೆಂದುಪಮಿಸುವೆ (ಮೋಳಿಗೆ, ಸಮವ. ೮-೬೮೧-೨೦೩೨) ;
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಇನ್ನೂರ ಹದಿನಾರು ಸಕೀಲಗಳು | ಪಾರಿಭಾಷಿಕ ಪದಕೋಶ |