ಶೀಲ | ನಿವೃತ್ತಿ |
ಪರ |
೧. ಪರವಸ್ತು; ಪರತತ್ತ್ವ ; ಪರವನಡೆದ ಸತ್ಪುರುಷರ ಸಂಗದಿಂದ ಶಿವಯೋಗದ ವಚನಾಮೃತವನು ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಸ್ತೋತ್ರಮುಖದಲ್ಲಿ ಕೇಳಿ ...ಸಂತೋಷವನೆಯಬಲ್ಲಡೆ ಆ ಸುಖವು ಪರಿಣಾಮವನೊಡಗೂಡುವುದು (ಅಲ್ಲಮ. ಸಮವ. ೨-೩೯೯-೧೩೪೯); ಪರವಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವ ನರರೆತ್ತ ಬಲ್ಲರೈ (ಜೇಡದಾ. ಸಮವ. ೭-೨೪೭-೭೫೨).
೨. ಮುಕ್ತಿ ; ಕೈವಲ್ಯ ; ಪರವು ಸಾಧ್ಯವಾಯಿತ್ತೆಂದು ಕ್ರೀಯೆಲ್ಲವ ಮೂಜೆ ನಡೆವೆನು (ಬಸವ. ಸಮವ. ೧-೨೩೨-೮೮೯); ಇಹದ ಸುಖ ಪರದ ಗತಿ ನಡೆದು ಬಂದಂತಾಯಿತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ (ಅಕ್ಕಮ. ಸಮವ. ೫-೧೪-೩೨); ತನ್ನಿಂದ ಬಿಟ್ಟು ಪ್ರಸಾದವಿಲ್ಲ ತನ್ನಿಂದ ಬಿಟ್ಟು ಪಾದೋದಕವಿಲ್ಲ ತನ್ನಿಂದ ಬಿಟ್ಟು ಪರವಿಲ್ಲ ತನ್ನಿಂದ ಬಿಟ್ಟು ಇನ್ನೇನೂ ಇಲ್ಲ (ಘಟ್ಟಿವಾ. ಸಮವ. ೭-೧೬೪-೪೭೩).
೩. ಪರಶಿವನ ಪರ, ಗೂಢ, ಶರೀರಸ್ಯ ಲಿಂಗಕ್ಷೇತ್ರ ಮತ್ತು ಅನಾದಿ ಎಂಬ ಐದು ಸಂಜ್ಞೆಗಳಲ್ಲಿ ಒಂದು; ಸೃಷ್ಟಿಯ ಸಕಲವಸ್ತುಗಳಿಗೂ ಮೀರಿದ ಒಂದು ಸ್ಥಿತಿ ; ಸಮಸ್ತತತ್ತ್ವಂಗಳಿಂದಲೂ ಮೇಲಣ ತತ್ವವಪ್ಪುದೇ ಕಾರಣವಾಗಿ ಪರವೆಂಬ ಸಂಜ್ಞೆಯದುಳ್ಳು- ದಾಗಿಹುದು (ಉರಿಪೆ. ಸಮವ. ೬-೬೦೭-೧೫೯೨); ಆ ಘನಲಿಂಗವೇ ಪರವೆಂದು ಗೂಢವೆಂದುಂ ಶರೀರಸ್ಥಮೆಂದುರು ಲಿಂಗಸುಕ್ಷೇತ್ರವೆಂದನಾದಿಯುಮೆಂದು ಪರಿಕಿಸಲ್ ಪಂಚಸಂಜ್ಞೆಗಳಾದುವು ...ಪರವೆಂದು ಸಕಲತತ್ತ್ವಂಗಳೆ ತಾನೆ ತತ್ಪರತತ್ತ್ವವಾದ ಕಾರಣದಿಂದ ಪರವಾದುದು (ಚೆಬಪು. ೬೦-೩೬),
೪, ಜಂಗಮಲಿಂಗಸ್ಥಲದ ಸ್ವಯ, ಚರ ಮತ್ತು ಪರ ಎಂಬ ಮೂರು ಹಂತಗಳಲ್ಲಿ ಒಂದು; ತಾನು ಮಾಡುವ ಆಚರಣೆಗಳಿಂದಾಗಿ ಪರಶಿವನಲ್ಲಿ ಬೆರೆಯುವ ಒಂದು ಅತ್ಯುಚ್ಚಪದವಿ ; ಜಂಗಮಲಿಂಗಸ್ಥಲ ತ್ರಿವಿಧ ಸ್ವಯ ಚರ ಪರ ...ಪರವೆಂದಡೆ ಅಜೆವು ಮುಂತಾಗಿ ಚರಿಸುವುದು (ಚೆನ್ನಬ. ಸಮವ. ೩-೩೨೧-೯೮೭); ಕ್ರಿಯೆಗಳ ಪರಿಣಾಮಗಳು ...ಚಿದಾತ್ಮನಲ್ಲಿ ಬೆರೆದಲ್ಲಿ ಅದು ಪರವು (ಶಿವಾಕೋ, ೮೭-೧೦೩).
೫. ಷಡ್ವಿಧಜಂಗಮ- ಲಿಂಗಸ್ಥಲಗಳಲ್ಲಿ ಒಂದು ; ಷಡ್ವಿಧಜಂಗಮಲಿಂಗ -ಇವು ಸ್ವಯ, ಚರ, ಪರ, ಪರಿಣಾಮಿ, ನಿರುಪಾಧಿಕ, ಪರಿಪೂರ್ಣ ಎಂದಿರುತ್ತವೆ. ಜಂಗಮ ಲಿಂಗವು ಇಲ್ಲಿ ಪ್ರಾಣಲಿಂಗಿಸ್ಥಲಕ್ಕೆ ಸಂಬಂಧಿಸಿದುದು (ಶಿವಾಕೋ, ೬೫-೭೩),
೬. = ಪರಜ್ಞಾನ ;
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಶೀಲ | ನಿವೃತ್ತಿ |