ಚಿತ್ತು (ಚಿತ್) | ಜಂಗಮ |
ಚಿದಂಗ |
ಅಂಗವೆಂದರೆ ಪ್ರಕೃತಿಯನೊಡಗೂಡಿದ ಆತ್ಮ ಎಂದಾದುದರಿಂದ, ಅಥವಾ ಮಾನವ ಎಂದಾಗುವುದರಿಂದ, ಅದು ಚಿದಂಗವು ಹೇಗಾಗಲು ಸಾಧ್ಯ, ಎಂಬ ಪ್ರಶ್ನೆ ಏಳುತ್ತದೆ. ಆತ್ಮನನ್ನುಳಿದು ಉಳಿದೆಲ್ಲವೂ ಶಕ್ತಿಯ ವಿವಿಧ ರೂಪಗಳಾದುದರಿಂದ, ಅವೆಲ್ಲವೂ ಕಲಾಶಕ್ತಿಗಳೆನಿಸಿಕೊಳ್ಳುತ್ತವೆ. ಆಧ್ಯಾತ್ಮಿಕ ಸಾಧನೆಯಿಂದಾಗಿ ಅವುಗಳ ಅವಗುಣಗಳೆಲ್ಲ ಹೋದಾಗ, ಅವೇ ಭಕ್ತಿ ಶಕ್ತಿಗಳೆನಿಸಿಕೊಳ್ಳುತ್ತವೆ. ಹೀಗೆ ಸಾಧಾರಣ ಮನುಷ್ಯ ಅಂಗನೆನಿಸಿಕೊಂಡರೆ, ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಿದವನು ಚಿದಂಗನೆನಿಸಿಕೊಳ್ಳುತ್ತಾನೆ.
ಈ ಚಿದಂಗದಲ್ಲಿ ಗುರುಸಿದ್ಧದೇವರೆಂಬ ವಚನಕಾರರ ಪ್ರಕಾರ ೪೪ ತತ್ವಗಳಿವೆ. ಅವು ಯಾವುವೆಂದರೆ,
೧. ಐದು ಭಕ್ತಿಗಳು : ಸಭೆಯ, ಸಮ್ಯಜ್ಞಾನ, ಸತ್ಕಾಯಕ, ಸತ್ಪಾತ್ರ ಭಿಕ್ಷ, ಮಹಾಜ್ಞಾನ.
೨. ಕರ್ಮೇಂದ್ರಿಯಗಳು : ಪಾದ, ಪಾಣಿ, ವಾಕ್ಕು, ವಾಯು, ಮತ್ತು ಗುಹ್ಯ.
೩. ಐದು ಜ್ಞಾನೇಂದ್ರಿಯಗಳು : ಕಣ್ಣು, ಕಿವಿ, ನಾಲಗೆ, ತ್ವಕ್ಕು, ಮೂಗು.
೪. ಐದು ವಿಷಯಗಳು : ರೂಪ, ರಸ, ಗಂಧ, ಸ್ಪರ್ಶ, ಶಬ್ದ,
೫. ಐದು ವಾಯುಗಳು : ಉದಾನ, ಅಪಾನ, ವ್ಯಾನ, ಸಮಾನ, ಪ್ರಾಣ.
೬. ನಾಲ್ಕು ಕರಣಗಳು : ಚಿತ್ರ, ಮನಸ್ಸು, ಬುದ್ಧಿ, ಅಹಂ.
೭. ಉದರ.
೮. ಐದು ವರ್ಣಗಳು.
೯. ಐದು ನಾದಗಳು.
೧೦. ಚತುರ್ವಿಧ ಫಲ : ಗುರು, ಲಿಂಗ, ಜಂಗಮ ಮತ್ತು ಪ್ರಸಾದ (೧೦:೬೯೫).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಚಿತ್ತು (ಚಿತ್) | ಜಂಗಮ |