ಪ್ರತಿಷ್ಠೆ | ಮಹಾಶೂನ್ಯ |
ನಾದ |
೧. ಧ್ವನಿ; ಶಬ್ದ : ಭ್ರಮರ, ವೇಣು, ಘಂಟಾ, ಭೇರೀ, ಮೇಘ, ಪ್ರಣಮ್, ದಿವ್ಯ, ಸಿಂಹ, ಮಹತ್ ಇವು ನಾದಗಳು, ಯೌಗಿಕಚಿಹ್ನೆಗಳು (ಶಿವಾಕೋ. ೧೯೨-೩೪೨).
೨ ಬ್ರಹ್ಮಸ್ವರೂಪವಾದ ಧ್ವನಿವಿಶೇಷ : ಮೂರುತೆರನಾಗಿ ಕಳೆ ನಾದ ವರಬಿಂದುವೆಂದು ಭೇದಿಸಿದಾದಿದೇಶಿಕನ ಚರಣಾಂಬುಜಕ್ಕೆ ಶರಣು (ಶಿವಚಂ. ೫೦-೧೯).
೩. ಪ್ರಪಂಚ ಸೃಷ್ಟಿಗೆ ಕಾರಣವಾದ ನಾದ, ಬಿಂದು ಮತ್ತು ಕಳೆ ಎಂಬ ಮೂರು ಪ್ರಕಾರದ ಅವಸ್ಥೆಗಳಲ್ಲಿ ಒಂದು; ಶೂನ್ಯದಿಂದ ನಾದದ ಉತ್ಪತ್ತಿಯಾಗುತ್ತದೆ. ಇಲ್ಲಿ ನಾದವೆಂದರೆ ಒಂದು ಬಗೆಯ ಚಲನೆ. ಈ ಚಲನೆಯಿಂದಾಗಿ ಬಿಂದುವಿನ ಉದಯವಾಗುತ್ತದೆ. ಇವೆರಡೂ ಪರಸ್ಪರ ಪೂರಕವಾಗಿರುವಂಥವು. ಇವೆರಡೂ ಒಮ್ಮೆಗೇ ಪ್ರಕಟಗೊಂಡಾಗ ಕಲೆಯು ಉತ್ಪತ್ತಿಯಾಗುತ್ತದೆ. ಈ ಮೂರರಿಂದ ಜಗತ್ತಿನ ಸಕಲ ವ್ಯಾಪಾರಗಳೂ ಜರಗುತ್ತವೆ: ನಾದ ಮುನ್ನವೊ ಬಿಂದು ಮುನ್ನವೊ ಕಾಯ ಮುನ್ನವೊ ಜೀವ ಮುನ್ನವೊ (ಅಲ್ಲಮ, ಸಮವ. ೨-೧೭೮-೬೫೯); ಹದಿನಾಲಕಳೆಯ ಪ್ರಭೆಯ ಮುಸುಕಿದ ನಾದವನ್ನು ನಾದದಿ ಬಿಂದು ಕಳೆಯನೊಂದು ಮಾಡಿ ನಿನಾದಬಾಷ್ಯವಿಡಿದುದಪ್ರಶಿಖಾ ಎಂದೆನೆ (ಹಿರಿಮಂ. ೬೮೭-೧೭); ನಾದದೊಳಗಣ ಚಿನ್ನಾದವ ತೋರಿಸಯ್ಯ ಬಿಂದುವೊಳಗಣ ಚಿಪ್ಪಿಂದುವ ತೋಣಿಸಯ್ಯ ಕಲೆಯೊಳಗಣ ಚಿತ್ಕಲೆಯ ತೋರಿಸಯ್ಯ (ಜಕ್ಕಣ. ಸಮವ. ೧೦-೬೬೩-೧೫೧೭).
೪. "ನಮಃಶಿವಾಯ" ಎಂಬ ಪವಿತ್ರಮಂತ್ರದ ಪಠಣ; ಶಿವಮಂತ್ರದ ಜಪ : ಆದಿಅಕ್ಷರವನ್ನು ಆರೈದು ತೋಜೆದಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದಕಳೆಗಳನನ್ನ ಆದಿಕರದೊಳಗಿಟ್ಟು (ಸಿದ್ಧರಾ, ಸಮವ. ೪-೩೮-೧೩೪).
೫. ಪರಶಿವ : ನಾದವೇ ಲಿಂಗ ಬಿಂದುವೇ ಪೀಠನಾಗಿ ಶಿವಶಕ್ತಿ ಸಂಪುಟವಾದ ಪಂಚಮದ ಕರ್ಮೇಶ ಲಿಂಗನಿರ್ವಯಲ ಪಿಂಡ ಅಂಗವೆಂಬ ಪಿಂಡ ತದ್ರೂಪವನೆಯ್ದೆ ಪರಿಪೂರ್ಣಪಿಂಡಾಕಾಶರೂಪ ತಾನಾಗಿ (ಮೋಳಿಗೆ, ಸಮವ. ೮-೩೦೭-೯೮೭);
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪ್ರತಿಷ್ಠೆ | ಮಹಾಶೂನ್ಯ |