Previous ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಪ್ರಾಣಿಗಳು ಕರ್ಮತ್ರಯ Next

ಕರ್ಮ

ಕರ್ಮ

ವಚನಕಾರರು ಇದನ್ನು ಆರು ಅರ್ಥಗಳಲ್ಲಿ ಬಳಸಿದ್ದಾರೆ.

(೧) ಉದ್ದೇಶಪೂರ್ವಕವಾದ ಅಥವಾ ಉದ್ದೇಶರಹಿತವಾದ ಯಾವುದೇ ರೀತಿಯ ಕ್ರಿಯೆಯಾಗಿರಬಹುದು. ನಿದ್ದೆಯಲ್ಲಿ ಕೈಕಾಲುಗಳನ್ನಾಡಿಸುವುದೂ ಈ ಅರ್ಥದಲ್ಲಿ ಕರ್ಮವೇ.

(೨) ವೈದಿಕ ಕರ್ಮ ವೇದದ ಕರ್ಮಕಾಂಡವು ಬೋಧಿಸುವ ಯಜ್ಞಯಾಗಾದಿಗಳು, ನಿತ್ಯ ನೈಮಿತ್ತಿಕ ಕರ್ಮಗಳು ಕರ್ಮಗಳೆನಿಸಿಕೊಳ್ಳುತ್ತದೆ.

(೩) ಉದ್ದೇಶ ಪೂರ್ವಕವಾಗಿ ಮಾಡುವ ಕ್ರಿಯೆ. ಇವು ಸತ್ಕರ್ಮಗಳಾಗಿರಬಹುದು ದುಷ್ಕರ್ಮಗಳಾಗಿರಬಹುದು.

(೪) ಕರ್ತವ್ಯ. ಸಮಾಜವೊಂದರ ಸದಸ್ಯನಾಗಿ ವ್ಯಕ್ತಿಯು ಕೆಲವು ಕರ್ತವ್ಯಗಳನ್ನು ಮಾಡಬೇಕಾಗುತ್ತದೆ. ಅವನಿಗೆ ಕೆಲವು ವೇಳೆ ಇಷ್ಟವಿಲ್ಲದಿದ್ದರೂ ಈ ಕರ್ತವ್ಯ (ಕರ್ಮ)ವನ್ನು ಮಾಡಲೇಬೇಕು. ಉದಾಹರಣೆಗೆ, ದೇಶರಕ್ಷಣೆ ಕ್ಷತ್ರಿಯನ ಕರ್ತವ್ಯ.

(೫) ಬಹಳ ಸಂಕುಚಿತವಾದ ಅರ್ಥದಲ್ಲಿ "ಕರ್ಮ"ವೆಂಬ ಪದವು ನಿಷ್ಕಾಮ ಕರ್ಮಕ್ಕೆ ಮಾತ್ರ ಅನ್ವಯಿಸುತ್ತದೆ. ಉದಾಹರಣೆಗೆ, "ಕರ್ಮಯೋಗ" ಎಂಬ ಪದ ಪ್ರಯೋಗದಲ್ಲಿ ಸಾಧಕನು ನಿಷ್ಕಾಮ ಕರ್ಮವನ್ನು ಮಾಡುವ ಮೂಲಕ ಆತ್ಮಶುದ್ಧಿಯನ್ನು ಮಾಡಿಕೊಂಡು ಪರಮಾತ್ಮನ ಅನುಗ್ರಹಕ್ಕೆ ಪಾತ್ರನಾಗಬೇಕು ಎಂಬ ಅಭಿಪ್ರಾಯ ಅಡಗಿದೆ.

(೬) ಕರ್ಮಫಲ, ಎಂಬುದು ಮತ್ತೊಂದು ಅರ್ಥ. ಒಬ್ಬ ವ್ಯಕ್ತಿ ತನ್ನ ಪ್ರಯತ್ನಕ್ಕೆ ತಕ್ಕ ಜಯ ಸಿಕ್ಕದಿದ್ದಾಗ ನಾವು "ಅದು ಅವನ ಕರ್ಮ" ಎಂದು ಹೇಳುತ್ತೇವೆ. ಇಲ್ಲಿ ಕರ್ಮ "ಎಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಫಲ" ಎಂದಾಗುತ್ತದೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಪ್ರಾಣಿಗಳು ಕರ್ಮತ್ರಯ Next