Previous ಅಷ್ಟವಿಧ ಸಕೀಲ ಅವಸ್ಥೆ Next

ಅರವತ್ತುನಾಲ್ಕು ವಿದ್ಯೆ

ಅರವತ್ತುನಾಲ್ಕು ವಿದ್ಯೆ

ಹಳೆಗನ್ನಡ ಪಠ್ಯಗಳಲ್ಲಿ ಅರವತ್ತ ನಾಲ್ಕು ವಿದ್ಯೆಗಳನ್ನು ಪ್ರಮುಖವೆಂದು ಭಾವಿಸಲಾಗಿದೆ. ಮೊಟ್ಟ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ.

1) ಇತಿಹಾಸ
2) ಆಗಮ
3) ಕಾವ್ಯಾಲಂಕಾರ
4) ನಾಟಕ
5) ಗಾಯಕತ್ವ
6) ಕವಿತ್ವ
7) ಕಾಮಶಾಸ್ತ್ರ
8) ದುರೋದರ (ದೂತ ಪಗಡೆ)
9) ದೇವಭಾಷಾಲಿಪಿಜ್ಞಾನ
10) ಲಿಪಿಕರ್ಮ
11) ವಾಚನ
12) ಗಣಕ
13) ವ್ಯವಹಾರ
14) ಸ್ವರಶಾಸ್ತ್ರ
15) ಶಾಕುನ
16) ಸಾಮುದ್ರಿಕ
17) ರತ್ನಶಾಸ್ತ್ರ
18) ಗಜಾಶ್ವರಥಕೌಶಲ
19) ಮಲ್ಲಶಾಸ್ತ್ರ
20) ಸೂಪಕರ್ಮ
21) ಭೂರುಹದೋಹದ
22) ಗಂಧವಾದ
23) ಧಾತುವಾದ
24) ಖನಿವಾದ
25) ರಸವಾದ
26) ಬಿಲವಾದ
27) ಅಗ್ನಿಸಂಸ್ತಂಭ
28) ಖಡ್ಗಸ್ತಂಭ
29) ಜಲಸ್ತಂಭ
30) ವಾಚಸ್ತಂಭ
31) ವಯಸ್ತಂಭ
32) ವಶೀಕರಣ
33) ಆಕರ್ಷಣ
34) ಮೋಹನ
35) ವಿದ್ವೇಷಣ
36) ಉಚ್ಚಾಟನ
37) ಮಾರಣ
38) ಕಾಲವಂಚನ
39) ಪರಕಾಯಪ್ರವೇಶ
40) ಪಾದುಕಾಸಿದ್ದಿ
41) ವಾಕ್ಸಿದ್ಧಿ
42) ಘಟಿಕಾಸಿದ್ಧಿ
43) ಐಂದ್ರಜಾಲಿಕ
44) ಅಂಜನ
45) ಪರದೃಷ್ಟಿವಂಚನ
46) ಸ್ವರವಂಚನ
47) ಮಣಿಮಂತ್ರಷಧ ಸಿದ್ದಿ
48) ಚೋರಕರ್ಮ
49) ಚಿತ್ರಕ್ರಿಯಾ
50) ಲೋಹಕ್ರಿಯಾ
51) ಆತ್ಮಕ್ರಿಯಾ
52) ಮೃತ್‌ಕ್ರಿಯಾ
53) ದಾರುಕ್ರಿಯಾ
54) ವೇಣುಕ್ರಿಯಾ
55) ಚರ್ಮಕ್ರಿಯಾ
56) ಅಂಬರಕ್ರಿಯಾ
57) ಅದೃಶ್ಯಕರಣ
58) ದಂತಿಕರಣ
59) ಮೃಗಯಾವಿಧಿ
60) ವಾಣಿಜ್ಯ
61) ಪಾಶುಪಾಲ್ಯ
62) ಕೃಷಿ
63) ಆಸವಕರ್ಮ
64) ಲಾವಕುಕ್ಕುಟ ಮೇಷಾದಿ ಯುದ್ಧ ಕಾರಕ ಕೌಶಲ(ಶಿವತತ್ವ ರತ್ನಾಕರ)

ಪ್ರಪಂಚದಲ್ಲಿ ಬಾಳಿಬದುಕಿ ಯಶಸ್ಸುಗಳಿಸಬೇಕಾದರೆ ಈ ವಿದ್ಯೆಗಳ ಜ್ಞಾನ ಅತ್ಯಾವಶ್ಯಕವೆಂಬ ದೃಷ್ಟಿಯಿಂದ ಹಿಂದೆ ಪ್ರಚಲಿತವಿದ್ದ ವಿದ್ಯೆಗಳನ್ನೆಲ್ಲ ಒಂದೆಡೆ ಕಲೆ ಹಾಕಲಾಗಿದೆ. ಇವನ್ನು ಅಭ್ಯಸಿಸಿ ತಿಳಿದವನೇ ಪಂಡಿತ. ಅಂತಹವನನ್ನು ಪೂರ್ವದಲ್ಲಿ ಜ್ಞಾನಿ ಎನ್ನುತ್ತಿದ್ದರು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅಷ್ಟವಿಧ ಸಕೀಲ ಅವಸ್ಥೆ Next