ಜಂಗಮಪಾದೋದಕ | ನಾದ |
ಪ್ರತಿಷ್ಠೆ |
೧. ಮೂಲಪ್ರಣವದಿಂದ ಹೊರಹೊಮ್ಮಿದ ಶಾಂತ್ಯಾತೀತ, ಶಾಂತಿ, ವಿದ್ಯಾ, ಪ್ರತಿಷ್ಠೆ ಮತ್ತು ನಿವೃತ್ತಿ ಎಂಬ ಪಂಚಕಲೆಗಳಲ್ಲಿ ಒಂದು; ನಾದ ಬಿಂದು ಕಲೆಗಳು ಮೂಲಚಿತ್ತಿನೊಂದಿಗೆ ಬೆರೆತಾಗ ಪ್ರಣವವು ಪ್ರಕಟಗೊಳ್ಳುತ್ತದೆ. ಈ ಪ್ರಣವದಲ್ಲಿನ, ಮ, ಶಿ, ವ, ಯ ಎಂಬ ಮಂತ್ರಾಕ್ಷರಗಳೂ ಈ ಮಂತ್ರಾಕ್ಷರಗಳಿಂದ ಪಂಚಕಲೆಗಳೂ ಪಂಚಕಲೆಗಳಿಂದ ಪಂಚಶಕ್ತಿಗಳೂ ಉತ್ಪತ್ತಿಯಾಗುತ್ತವೆ. ಪಂಚಕಲೆಗಳಲ್ಲಿ ಒಂದಾದ ನಿವೃತ್ತಿಯು ಜಗತ್ತಿನ ಏಳಿಗೆಗೆ ಸಹಾಯ ಮಾಡಿದರೆ, ಪ್ರತಿಷ್ಠೆಯು ಆ ಏಳಿಗೆಯನ್ನು ನೆಲೆಗೊಳ್ಳುವಂತೆ ಮಾಡುತ್ತದೆ ; ನಿವೃತ್ತಿಯಲ್ಲಿ ಕ್ರಿಯಾಶಕ್ತಿ, ಪ್ರತಿಷ್ಠೆಯಲ್ಲಿ ಜ್ಞಾನಶಕ್ತಿ ...ಶಾಂತ್ಯಾತೀತೆಯಲ್ಲಿ ಪರಾಶಕ್ತಿ -ಇವುಗಳು ಉದ್ಭವಿಸುತ್ತವೆ (ಶಿವಾಕೋ, ೨೭-೩೦).
೨. ದೇಹದಲ್ಲಿರುವ ಆರು ಚಕ್ರಗಳು, ಮಿದುಳಿನಲ್ಲಿರುವ ಮೂರು ಚಕ್ರಗಳು -ಹೀಗೆ ಒಟ್ಟು ಒಂಬತ್ತು ಚಕ್ರಗಳಿಗೆ ಅನುಕ್ರಮವಾಗಿ ಸಂಬಂಧಿಸಿರುವ ನಿವೃತ್ತಿ, ಪ್ರತಿಷ್ಠೆ, ವಿದ್ಯಾ, ಶಾಂತಿ, ಶಾಂತ್ಯಾತೀತ, ಶಾಂತ್ಯಾತೀತೋತ್ತರ, ಅನಾದಿ, ನಿರ್ಮಾಯ ಮತ್ತು ಅನಿರ್ವಾಚ್ಯ ಎಂಬ ಒಂಬತ್ತು ವಿಧದ ಕಲೆಗಳಲ್ಲಿ ಒಂದು ; ಈ ಚಕ್ರಗಳಿಗೆ ...ಕಲೆಗಳು ಇವೆ. ಅವು ಯಾವುವೆಂದರೆ ನಿವೃತ್ತಿ, ಪ್ರತಿಷ್ಠಾ, ವಿದ್ಯಾ, ಶಾಂತಿ, ಶಾಂತ್ಯಾತೀತ, ಶಾಂತ್ಯಾತೀತೋತ್ತರ ಇವು ಇವೆ. ಕಡೆಯವುಗಳು ಅನುಕ್ರಮವಾಗಿ ಅನಾದಿ, ನಿರ್ಮಾಯ, ಅನಿರ್ವಾಚ್ಯ ಎಂಬವುಗಳಿವೆ (ಶಿವಾಕೋ. ೪೦-೩೮),
೩. ಸ್ಥಾವರಲಿಂಗ ಆಕಾಶದ ಸೂರ್ಯ ಕುಂಭದಲ್ಲಿ ತೋರುವ ತೆಳಿ ಮಲದಡೆ ಪ್ರತಿಷ್ಠೆ ಅಚೆದಡೆ ಸ್ವಯಂಭು (ಮೋಳಿಗೆ, ೧೧-೪೧);
ಅಳೆದಡೆ ತಾ ಮದಡೆ ಜಗವೆಂಬ ಉಭಯವ ಹಟದಾಗವೆ ಪೂಜಕನಲ್ಲ ಪ್ರತಿಷ್ಠೆಯಲ್ಲಿ ಪರಿಣಾಮಿಯಲ್ಲಿ ಸ್ವಯಂಭುವಿನಲ್ಲಿ ಸ್ವಾನುಭಾವಿಯಲ್ಲಿ (ಮೋಳಿಗೆ ಸಮವ. ೮-೫೩೭-೧೫೫೩).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಜಂಗಮಪಾದೋದಕ | ನಾದ |