ಪಂಚಬ್ರಹ್ಮ | ಚತುರ್ವಿಧ ಸಂಬಂಧಿ |
ಲಿಂಗಪ್ರಸಾದ |
೧. ಗುರುಪ್ರಸಾದ, ಲಿಂಗಪ್ರಸಾದ ಮತ್ತು ಜಂಗಮ ಪ್ರಸಾದಗಳೆಂಬ ಮೂರು ಬಗೆಯ ಪ್ರಸಾದಗಳಲ್ಲಿ ಒಂದು; ಲಿಂಗಪೂಜಾಕಾಲದಲ್ಲಿ ಲಿಂಗಕ್ಕೆ ಅರ್ಪಿಸಿದನಂತರ ಸ್ವೀಕರಿಸುವ ಪದಾರ್ಥ; ಲಿಂಗಮುಖದಿಂದ ಬಂದ ಪ್ರಸಾದ ; ಲಿಂಗಪ್ರಸಾದವನುಂಡು ಅನ್ಯದೈವಂಗಳ ಕೊಂಡಾಡುವವರ ನಮ್ಮ ಕೂಡಲ- ಸಂಗಮದೇವನು ಆ ಭಂಡರಿಗೆ ಮಾಡಿದ ಹುಳುಗೊಂಡವ (ಬಸವ. ಸಮವ. ೧-೧೫೪-೬೧೬); ಪುರುಷಾಹಾರ[ವ] ಪ್ರಮಾಣಿನಿಂದ ತಹುಮಹಿಲ್ಲದೆ ಭರಿತಬೋನವಾಗಿ ಗಡಣಿಸಿ ತಟ್ಟುವ ಮುಟ್ಟುವ ಮರ್ಮವನತು ಸಂಕಲ್ಪ ವಿಕಲ್ಪವಿಲ್ಲದೆ ಭಾವಶುದ್ಧನಾಗಿ ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋಡಿ ಸೀತಾಳಮಂ ಕೊಟ್ಟು ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲೆ ಪ್ರಸಾದಭೋಗವ ಮಾಡುವುದು ಲಿಂಗಪ್ರಸಾದ (ಚೆನ್ನಬ ಸಮವ. ೩-೪೧೯-೧೨೦೧); ಹುಗಿಸಿದೆನೆ ಮನೆಗಿತರಪಾಕವ ನುಗಿಸಿದೆನೆ ಲಿಂಗಪ್ರಸಾದವನು (ಬಸಪು. ೪೪-೧೯).
೨. ಗುರು, ಲಿಂಗ, ಜಂಗಮ, ಆಪ್ಯಾಯನ, ಸಮಯ, ಪಂಚೇಂದ್ರಿಯ ವಿರಹಿತ, ಅಂತಃಕರಣವಿರಹಿತ, ಪ್ರಸಾದಿ, ಸದ್ಭಾವ, ಸಮತಾ ಮತ್ತು ಜ್ಞಾನಪ್ರಸಾದ ಎಂಬ ಹನ್ನೊಂದು ಬಗೆಯ ಪ್ರಸಾದಗಳಲ್ಲಿ ಒಂದು ; ಲಿಂಗಪ್ರಸಾದ-ಗುರುಪ್ರಸಾದವನ್ನು ಲಿಂಗಕ್ಕೆ ಅರ್ಪಿಸುವುದು ಲಿಂಗಪ್ರಸಾದವು. ಇದು ಸಿದ್ಧಪ್ರಸಾದವೆಂತಲೂ ಹೇಳಬಹುದು (ಶಿವಾ. ೧೧೯-೧೬೨).
೩. ಲಿಂಗಮುಖದಿಂದ ಬಂದ ಪ್ರಸಾದವನ್ನು ಮಂತ್ರವಿಧಾನದಿಂದ ಸೇವಿಸುವ ಕ್ರಮಗಳಲ್ಲಿ ಒಂದು ; ಇಷ್ಟಮಹಾಲಿಂಗಕ್ಕೆ ಮಂತ್ರಸ್ಮರಣೆಯಿಂದ ಮೂಲವೇಳೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ (ಸಿದ್ದರಾ. ಸಮವ. ೪-೧೬-೫೧); ಲಿಂಗಕ್ಕೆ ಮೂರುವೇಳೆ ಅರ್ಪಿತ ಮಾಡುವುದು ಲಿಂಗಪ್ರಸಾದವು (ಶಿವಾಕೋ. ೧೨೧-೧೬೨).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪಂಚಬ್ರಹ್ಮ | ಚತುರ್ವಿಧ ಸಂಬಂಧಿ |