Previous ಅರುವತ್ತು ನಾಲ್ಕು ಶೀಲಗಳು ಅಷ್ಟತನು ನಿವೃತ್ತಿ ಮಾರ್ಗ Next

ಅರವತ್ತು ಮೂರು ಪುರಾತನರು

ಅರವತ್ತು ಮೂರು ಪುರಾತನರು

ಬಸವಾದಿ ಶರಣರಿಗಿಂತ ಹಿಂದೆಯೇ ಇದ್ದು, ಬಸವಾದಿ ಶರಣರಿಗೆ ಆದರ್ಶಪ್ರಾಯರಾದ ಶಿವಭಕ್ತರು. ಇವರೆಲ್ಲರೂ ತಮಿಳುನಾಡಿನಲ್ಲಿ ಪ್ರಚಲಿತವಿರುವ ಶೈವ ಸಿದ್ಧಾಂತಿಗಳಾಗಿದ್ದು, ಇವರಲ್ಲಿ ಕೆಲವರು ತಮ್ಮ ಅತ್ಯುಗ್ರ ಭಕ್ತಿಗೂ ಮತ್ತೆ ಕೆಲವರು ವ್ಯಾವಹಾರಿಕ ಜೀವನ ಮತ್ತು ಆಧ್ಯಾತ್ಮ ಜೀವನಗಳನ್ನು ಸಮನ್ವಯ ಮಾಡಿದುದಕ್ಕೂ ಹೆಸರಾಗಿದ್ದಾರೆ. ವಚನಕಾರರಿಗೆ ಇವರೆಂದರೆ ಬಹಳ ಗೌರವ ಹಾಗೂ ಭಕ್ತಿ. ಅರವತ್ತು ಮೂರು ಪುರಾತನರೆಂದೂ, ಆದ್ಯರೆಂದೂ, ಹೆಸರಾದ ಇವರಲ್ಲಿ ಎಲ್ಲರ ಹೆಸರನ್ನೂ ವಚನಕಾರರು ಹೇಳುವುದಿಲ್ಲ. ಕಾರಿಕಾಲ, ಕಣ್ಣಪ್ಪ, ಸಿರಿಯಾಳ, ನಂದಿ ಸಿಂಧು ಬಲ್ಲಾಳ, ಮೆರೆ ಮಿಂಡದೇವ ಮುಂತಾದ ಕೆಲವರಷ್ಟನ್ನೇ ಅವರು ಸ್ಮರಿಸಿಕೊಳ್ಳುತ್ತಾರೆ. ಈ ಶಿವಭಕ್ತರ (ಅರವತ್ತು ಮೂರು ಪುರಾತನರ) ಹೆಸರುಗಳು ಹೀಗಿವೆ :

೧. ಮುರುಘರು
೨. ಚೊಕ್ಕನರಾಯರು
೩ ಕಾರಿಕಾಲಾಂಬೆ.
೪. ಕಡವೂರಕಾರಿ
೫. ತಿರುನೀಲಕಂಠರು.
೬. ಚಿರುಪುಲಿಯಾಂಡರು.
೭. ಸೋಮಾಸಿಮಾರರು.
೮. ಅಚ್ಯುತರು
೯. ಮೊನೆಯಾಂಡರು:
೧೦. ಮಾನಕಂಜರು:
೧. ಪಗಲ್ಲೋಳರು,
೧೨. ಕಲಿಕಾಮದೇವರು,
೧೩, ತಿರುಮೂಲದೇವರು:
೧೪, ಪಗಲ್ಲೊಣೆಯಾಂಡರು.
೧೫. ಅರಿವಾಳ್ತಾಂಡರು:
೧೬. ನೈಸಭಕ್ತರು;
೧೭. ತಿರುನೀಲಕ್ಕರು:
೧೮.ತಿರುಕುರೂಪಿತೊಂಡರು.
೧೯.ತಿರುನಾಳ್ವರು
೨೦. ಏಣಾದಿನಾಥರು
೨೧. ಸೇದಿರಾಜರು,
೨೨.ರುದ್ರಪಶುಪತಿಯರು
೨೩.ಕಂಗುಲಿಯ ಕಲಿಯಾಂಡರು.
೨೪. ಇರಿಭಕ್ತರು;
೨೫. ಕಳಚೆಂಗುಪೆರುಮಾಳೆರು
೨೬, ನಮಿನಂದಿಯರು:
೨೭. ಅಮರನೀತಿಗಳು
೨೮. ಕಲಿಕಂಭನು
೨೯. ಕಣ್ಣಪ್ಪದೇವರು
೩೦. ನಾಟ್ಯಮಿಗೆ ತಾಂಡಿಯು
೩೧.ಒಲಘಂಡ ಮೂರ್ತಿಗಳು,
೩೨. ಅಪೂತಿಯರು
೩೩. ವಾಗೀಶರು
೩೪. ತಿರುಜ್ಞಾನಸಂಬಂಧಿಗಳು
೩೫ ಕುಲಶ್ಚರಿಯರು,
೩೬. ಸುಂದರಪಾಂಡ್ಯ ಮತ್ತು ಮಂಣಾಯಕ್ಕರಸಿಯರು
೩೭. ಪೇಳ್ಳುತ್ತರು
೩೮. ಸಾಂಖ್ಯಾನಾಯರು:
೩೯. ಕುಲಚ೦ಗರು:
೪೦. ಓಹಿಲರು:
೪೧. ಕಳಚತ್ತಿಯಾಂಡರು:
೪೨. ಚಿರುತೊಣೆಯಾಂಡರು:
೪೩. ಕೊಲ್ಬುಲಿಯಾಂಡರು.
೪೪. ತಂಡೇಶ
೪೫. ಕಲಿಯನಯನಾರು,
೪೬. ಐಡಿಯರು
೪೭. ಭಕ್ತ ಸಿರಿಯಾಳ (ಅಥವಾ ಚಿರುತೊಂಡರು):
೪೮. ಅತಿ ಭಕ್ತನು,
೪೯, ಕಣಂಬುಲ್ಲ ನಂಬಿಯು,
೫೦, ಎಳೆಯಾಂಡ ಗುಡಿಮಾರರು:
೫೧. ಅಡನಘಯ ಪೆರುಮಾಳೆಯರು
೫೨. ಇಹಃಪಗೆಯಾಂಡನು (ಅಥವಾ ಸಿಂಧು ಬಲ್ಲಾಳನು):
೫೩, ಮೆರೆಮಿಂಡದೇವರು,
೫೪. ಚೇರಮನು,
೫೫. ಕುರುಂಬರು:
೫೬. ಜಡೆಯನಯನಾರು,
೫೭. ಸೌಂದರನಂಬಿ,
೫೮. ಪೊಸಲೆಯಾಂಡ:
೫೯. ಕಲಿಗಣನಾಥ:
೬೦. ನರಸಿಂಗ ಮೊನೆಯಾರ್‌:
೬೧. ತಿರುನೀಲಕಂಠರು:
೬೨. ಊರ್ಪ ಶಿಲೆಯಾಂಡರು ಹಾಗೂ
೬೩. ಗಣನಾಥ ಮಾಹೇಶ್ವರ‌ರ್‌,

ಅ.ಕ್ರ ಪೆರಿಯಪುರಾಣದ ಪ್ರಕಾರ ಪೆರಿಯಪುರಾಣದ ಪ್ರಕಾರ
ತಿರುನೀಲಕಂಟ ತಿರುನೀಲಕಂಠ
ಇಯರ್‍ಪಗೈ ಯರ್ ಇಹಪ್ಪಗೆಯಾಂಡ
ಇಳೆಯಾನ್ ಕುಡಿಮಾರ ಇಳೆಯಾಂಡಗುಡಿಮಾರ
ಮೆಯ್‍ಪ್ಪೊರುಳರ್ ಸೇದಿರಾಜ
ವಿರನ್‍ಮಿಂಡರ್ ಮೆರೆಮಿಂಡ
ಅಮರನೀತಿ ಅಮರನೀತಿ
ಎರಿಪತ್ತರ್ ಇರಿಭಕ್ತ
ಏಣಾದಿನಾಥರ್ ಏಣಾಧಿನಾಥ
ಕಣ್ಣಪ್ಪರ್ ಕಣ್ಣಪ್ಪ
೧೦ ಕುಂಗುಲಿಯಕ್ಕಲಿಯರ್ ಕೊಂಗುಲಿಯ ಕಲಿಯರು
೧೧ ಮಾನಕ್ಕಂಜಾರರ್ ಮಾನಕಂಜರ
೧೨ ಅರಿವಾಳ್ತಾಯರ್ ಅರಿವಾಳ್ತಾಂಡ (ಅರಿವಾಟ್ಟಾಯರ್)
೧೩ ಆನಾಯರ್ ಅನಾಯನಾರ
೧೪ ಮೂರ್ತಿನಾಯನಾರ್ ಒಲಘಾಂಡಮೂರ್ತಿ
೧೫ ಮುರುಗರ್ ನಮಶ್ಶಿವಾಯ ಮುರುಘರು
೧೬ ರುದ್ರಪಶುಪತಿ ರುದ್ರಪಶುಪತಿ
೧೭ ತಿರುನಾಳೈಪ್ಪೋವರ್ ತಿರುನಾಳ್ಪೋವರು
೧೮ ತಿರುಕುರುಪ್ಪು ತೊಂಡರ್ ತಿರುಕುರುಂಪೆತೊಂಡ
೧೯ ಚಂಡೇಶ್ವರರ್ ಚಂಡೇಶ
೨೦ ತಿರುನಾವುಕ್ಕರಸರ್ (ಅಪ್ಪಾರ್) ವಾಗೀಶ
೨೧ ಕುಲಚ್ಚಿರೈಯಾರ್ ಕುಲಚೆರೆಯ
೨೨ ಪೆರುಮಿಳಲೈಕ್ಕುರುಂಬರ್ ಪೆರುಮಳಿಲೆಯ ಕುರುಂಬರು
೨೩ ಕಾರೈಕ್ಕಾಲ್ ಅಮ್ಮೆಯರ್ ಕಾರಿಕಾಲಮ್ಮೆ
೨೪ ಅಪ್ಪೊದಿಯಡಿಗಳ್ ಅಃಪೂತಿ ಅಡಿಗಳು
೨೫ ತಿರುನೀಲನಕ್ಕರ್ ತಿರುನೀಲನಕ್ಕರು
೨೬ ನಮಿನಂದಿಯಡಿಗಳ್ ನಮಿನಂದಿಯಡಿಗಳು
೨೭ ತಿರುಜ್ಞಾನಸಂಬಂಧರ್ ತಿರುಜ್ಞಾನಸಂಬಂಧರು
೨೮ ಏಯರ್‍ಕೋನ್-ಕಲಿಕ್ಕಾಮರ್ ಕಲಿಕಾಮ
೨೯ ತಿರುಮೂಲರ್ ತಿರುಮೂಲರು
೩೦ ತಂಡಿಯಡಿಗಳ್ ದಂಡೀಶ
೩೧ ಮೂಕ್ರ್ಕನಾಯನಾರ್ ಅಚ್ಯುತ
೩೨ ಸೋಮಾಸಿಮರರ್ ಸೋಮಾಸಿಮಾರ
೩೩ ಸಾಕ್ಕಿಯನಾಯನಾರ್ ಸಾಂಖ್ಯತೊಂಡ
೩೪ ಶಿರುಪ್ಪುಲಿನಾಯನಾರ್ ಚಿರುಪ್ಪುಲಿಯಾಂಡ
೩೫ ಶಿರುತ್ತೊಂಡರ್ ಚಿರುತೊಂಡ
೩೬ ಸೇರ್‍ಮಾನ್ ಪೆರುಮಾಳ್ ಚೇರಮ
೩೭ ಕಣನಾದರ್ ಗಣನಾಥ
೩೮ ಕುರುವನಾಯನಾರ್ ವೇಳೂತ
೩೯ ಪುಗಳ್‍ಚೋಳರ್ ಪಗಲ್ಚೋಳ
೪೦ ನರಸಿಂಗಮುನೈಯಾರೈಯಾರ್ ನರಸಿಂಗ ಮೊನೆಯರು
೪೧ ಆದಿಬತನಾಯನರ್ ಅತಿಭಕ್ತ
೪೨ ಕಲಿಕ್ಕಂಬರ್ ಕಲಿಕಂಬ
೪೩ ಕಲಿಯನಾಯನಾರ್ ಕಲಿಯನಾಯನಾರ
೪೪ ಸತ್ತಿನಾಯನಾರ್ ಕಲಿಚೆತ್ತಿಯಾಂಡರು
೪೫ ಐಯಡಿಗಳ್ ಕಾಡವರ್‍ಕೋನ್ ಅಯ್ಯಡಿ
೪೬ ಕಣಂಬುಲ್ಲನಾಯನಾರ್ ಕಣಂಬುಲ್ಲನಂಬಿ
೪೭ ಕಾರಿನಾಯನಾರ್ ಕಡವೂರಕಾರಿ
೪೮ ನೆಡುಮಾರನಾಯನಾರ್ ಸೌಂದರಪಾಂಡ್ಯರಾಜ (ಕೂನಪಾಂಡ್ಯ)
೪೯ ವಾಯಿಲಾರ್ ನಾಯನಾರ್ ವಾಹಿಲ್ಯ
೫೦ ಮುನೈಯಡುವರ್ ಮೊನೆಯಿಡುವರು
೫೧ ಕಳರ್ಚಿಂಗರ್ ಕಳಚೆಂಗರು
೫೨ ಇಡಂಗಳಿಯಾರ್ ಎಡಗಳೆಯರು
೫೩ ಸೆರುತುಣೈಯಾರ್ ಚಿರುತ್ತೊಣೆಯಾಂಡ
೫೪ ಪುಗಳ್ ತುಣೈನಾಯನಾರ್ ಪಗಲ್ತೊಣೆಯಾಂಡರು (ಎಡಗೆಳೆಯ)
೫೫ ಕೋಟ್ಟುಲಿನಾಯನಾರ್ ಕೊಲ್ಬುಲಿಯಾಂಡ
೫೬ ಪೂಸಲಾರ್ ಪೂಸಲೆಯಾಂಡ
೫೭ ಮುಂಗೈಯಕ್ರ್ಕರಸಿಯಾರ್ ಪಾಂಡ್ಯ ಮಹಾದೇವಿ
೫೮ ನೇಶನಯನಾರ್ ನೇಶರ್
೫೯ ಕೋಚ್ಚಂಗಣ್‍ಚೋಳರ್ ಕಲಚೆಂಗ ಪೆರುಮಾಳ್
೬೦ ತಿರುನೀಲಕಂಟಯಾಳ್ಪಾಣರ್ ತಿರುನೀಲಕಂಠಪಾಣರು
೬೧ ಶಡೈಯನಾಯನಾರ್ ಜಡೆಯನಾಯನಾರ್
೬೨ ಇಸೈಜ್ಞಾನಿಯಾರ್ ಯಸ್ಯಜ್ಞಾನಿದೇವಿಯರು
೬೩ ಸುಂದರಮೂರ್ತಿ

ಕನ್ನಡದಲ್ಲಿಅರುವತ್ತಮೂರು ಪುರಾತನರು : ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿ ರುವ ಶರಣರು, ಕನ್ನ ಡ ವಚನಕಾರರು ಇವರನ್ನು ಪುರಾತನರು, ಪ್ರಮಥರು ಎಂದೂ ತಮಿಳರು ನಾಯನಾರ್ ಎಂದೂ ಕರೆಯುವರು. ತಮಿಳುನಾಡಿನ ಶಿವದೇವಾಲಯಗಳಲ್ಲೂ ಕರ್ನಾಟಕದಲ್ಲಿ ನಂಜನಗೂಡು, ಚಾಮರಾಜನಗರದ ದೇವಾಲಯಗಳಲ್ಲೂ ಈ ಭಕ್ತರ ವಿಗ್ರಹಗಳಿವೆ. ಇವರಲ್ಲಿ ಮೂವರು ತೇವಾರ ಎಂಬ ತಮಿಳು ವೇದ ಬರೆದು ಪ್ರಸಿದ್ಧರಾಗಿದ್ದಾರೆ. ತಮಿಳು, ಕನ್ನ ಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಇವರನ್ನು ಕುರಿತು ಹಲವಾರು ಮಂದಿ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಹಂಪೆಯ ಹರೀಶ್ವರ, ಸುರಂಗಕವಿ, ವೀರಭದ್ರಕವಿ, ಚತುರ್ಮುಖ ಬೊಮ್ಮರಸ, ನಿಜಗುಣಶಿವಯೋಗಿ, ಬಸವಪ್ಪಶಾಸ್ತ್ರೀ−ಇವರು ಈ ಪುರಾತನರನ್ನುಕುರಿತು ಕಾವ್ಯಗಳನ್ನು ಬರೆದಿದ್ದಾರೆ. ಬಸವಪುರಾಣಾದಿ ಗ್ರಂಥಗಳಲ್ಲೂ ಇವರ ಉಲ್ಲೇಖವಿದೆ. ಇವರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು, 5 ಮಂದಿ ವೈಶ್ಯರು, ಒಬ್ಬ ಪಂಚಮ, 24 ಮಂದಿ ಶೂದ್ರರು ಇಬ್ಬರು ಸ್ತ್ರೀಯರಾದಿಯಾಗಿ ಎಲ್ಲ ಕುಲ ಜಾತಿ ಪಂಥದವರೂ ಇದ್ದಾರಂದೂ ಇವರ ಕಾಲ ಪಸಕ್ತಶಕದ ಆರಂಭದಿಂದ 10ನೆಯ ಶತಮಾನದವರೆಗೆ ಹೋಗುತ್ತದೆಂದೂ ವಿದ್ವಾಂಸರ ಅಭಿಪ್ರಾಯ. ಇವನ್ನು ಕುರಿತು ತಮಿಳಿನಲ್ಲಿ "ಪೆರಿಯಪುರಾಣ"ವನ್ನು ಬರೆದ ಕವಿಯ ಹೆಸರು "ಶೆಕ್ಕಿರಾರ್", ಈ ಗ್ರಂಥವನ್ನು ಚಿದಂಬರಂ ಕ್ಷೇತ್ರದಲ್ಲಿ ಬರೆದಂತೆ ಪ್ರತೀತಿಯಿದೆ.

ಇವರನ್ನು ಕುರಿತ ಧಾರವಾಡದ ಮುರುಘಾಮಠದಲ್ಲಿ 63 ಹೆಸರಿನ ಕೋಣೆಗಳಿವೆ. ಬೆಳಗಾಂವಿ ಜಿಲ್ಲೆಯ ಅಥಣಿಯಲ್ಲಿ ಶ್ರೀ ಮುರುಘೇಂದ್ರ ಶಿವಯೋಗಿಗಳು 63 ಮಂಟಪಗಳ ಸ್ಥಾಪನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಹಳ್ಳಿ ಶ್ರೀ ಶರಣಬಸವೇಶ್ವರರ ದಾಸೊಹ ಮಠದಲ್ಲಿ ಕೂಡ ೬೩ ಮಂದಿ ಪುರಾತನರ ಮಂಟಪಗಳು ಇವೆ

ತಮಿಳುಶೈವರಲ್ಲಿ ಪ್ರಖ್ಯಾತರಾದ ಅರುವತ್ತು ಮೂರು ಮಂದಿ ಭಕ್ತ ಶ್ರೇಷ್ಠರು.

1) ತಿರುನೀಲಕಂಠ,
2) ಇಹಃಪಗೆಯಾಂಡ,
3) ಕೋಲ್ಪುಲಿಯಾಂಡ,
4) ಚಂಡೇಶ,
5) ಚಿರುತೊಂಡ,
6) ಇರಿಭಕ್ತ,
7) ಚಿರುತೊಣೆಯಾಂಡ,
8) ಮಹಾಕಳಚೆಂಗ,
9) ಕಲಿಕಂಬ,
10) ಮಾನಕಂಜರ,
11) ಕಣ್ಣಪ್ಪ,
12) ಪಗಲ್ಲೋಳ,
13) ಇರಿವಾಳ್ತಾಂಡ,
14) ತಿರುಕುರುಪೆತೊಂಡ,
15) ಏಣಾದಿನಾಥ,
16) ಸೇದಿರಾಜ,
17) ಕುಲಶ್ಚರ್ಯ,
18) ನಾಟ್ಯಮಿಗೆ ತಂಡಿ,
19) ಕಲಿಚಿತ್ತಿಯಾಂಡ,
20) ವಾಗೀಶ,
21) ತಿರುಜ್ಞಾನಸಂಬಂಧಿ,
22) ಮಂಗಾಯಕ್ಕರಸಿ,
23) ಸೌಂದರಪಾಂಡ್ಯ,
24) ವೇಳ್ಕೊತ,
25) ಅಮರನೀತಿ,
26) ಪೂಸಲಯಾಂಡ,
27) ತಿರುನಾವ,
28) ಅಯ್ಯಡಿ,
29) ಕಲಿಗಣನಾಥ,
30) ಓಹಿಲ,
31) ಕಳಚಂಗಪೆರುಮಾಳ್,
32) ಸಾಂಖ್ಯ,
33) ತಿರುಮೂಲ,
34) ನೈಸ,
35) ಪಗಲ್ಲೊಣೆಯಾಂಡ,
36) ಅಳಘಂಡಮೂರ್ತಿ,
37) ಕಂಗುಲಿಯ ಕಲಿ,
38) ಕಡವಲನಂಬಿ,
39) ಎಚ್ಚ ಕಲಿಯನಾರ್,
40) ಇಳೆಯಾಂಡಗುಡಿಮಾರ,
41) ಮುರುಘ,
42) ಚೊಕ್ಕನೈನಾರ್,
43) ತಿರುನೀಲಕಂಠಪಾಣ,
44) ಸೋಮಾಸಿಮಾರ,
45) ಕಡವೂರಕಾರಿ,
46) ನಮಿನಂದಿ,
47) ರುದ್ರಪಶುಪತಿ,
48) ನೀಲನಕ್ಕ‌,
49) ಅತಿಭಕ್ತ,
50) ಅಃಪೂತಿಯಡಿ,
51) ಅಚ್ಯುತ,
52) ಚಿರುವುಲಿಯಾಂಡ,
53) ಮೊನೆಯಾಂಡ,
54) ಉಡುಗಣೆಯ ಪೆರುಮಾಳ್,
55) ನರಸಿಂಗಮೊನೆಯಾರು,
56) ನಂಬಿ,
57) ಜಡೆಯನೈನಾ‌,
58) ಯಸ್ಯಜ್ಞಾನದೇವಿ,
59) ಪೆರುಮಳುಕುರುಂಬ,
60) ಕಲಿಕಾಮ,
61) ಮೆರೆಮಿಂಡ,
62) ಚೇರಮ ಮತ್ತು
63) ಕಾರಿಕಾಲಮ್ಮೆ ಎಂಬ ಅರುವತ್ತು ಮೂರು ಮಂದಿ ಭಕ್ತ ಶ್ರೇಷ್ಠರು.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಅರುವತ್ತು ನಾಲ್ಕು ಶೀಲಗಳು ಅಷ್ಟತನು ನಿವೃತ್ತಿ ಮಾರ್ಗ Next