Previous ಪಂಚಪಾತಕ (ಪಂಚಮಹಾಪಾತಕ) ಪಂಚಾಚಾರ Next

ಪಂಚಭೂತಗಳ ಪರಿಣಾಮಗಳು

ಪಂಚಭೂತಗಳ ಪರಿಣಾಮಗಳು

ಮನುಷ್ಯನ ಶರೀರವೂ, ಅದರಲ್ಲಿ ನಡೆಯುವ ದೈಹಿಕ ಹಾಗೂ ಮಾನಸಿಕ ವ್ಯಾಪಾರಗಳೂ ಪಂಚಭೂತಗಳ ಸೃಷ್ಟಿ, ವಚನಕಾರರ ಪ್ರಕಾರ ಯಾವಾವ ಭೂತ ಯಾವುದಕ್ಕೆ ಕಾರಣ ಎಂಬುದರ ವಿವರ ಹೀಗಿದೆ.

೧. ಆಸ್ತಿ, ಚರ್ಮ, ಮಾಂಸ, ರೋಮ್, ಮಜ್ಜೆ ಇವು ಘನ ಪದಾರ್ಥಗಳಾದುದರಿಂದ ಅವುಗಳಲ್ಲಿ ಪೃಥ್ವಿ ತತ್ವದ ಅಂಶ ಪ್ರಧಾನವಾಗಿರುತ್ತದೆ.

೨. ಶುಕ್ಲ ಶೋಣಿತ, ಶ್ಲೇಷ್ಮ, ಪಿತ್ತ, ರಕ್ತ ಇವು ದ್ರವ ಪದಾರ್ಥಗಳಾದುದರಿಂದ, ಅವುಗಳಲ್ಲಿ, ಜಲತತ್ವದ ಅಂಶ ಪ್ರಧಾನವಾಗಿರುತ್ತದೆ.

೩. ಹಸಿವು, ತೃಷೆ, ಆಲಸ್ಯ, ಸ್ತ್ರೀಸಂಗ, ಇವು ಅಗ್ನಿ ತತ್ವದ ಪರಿಣಾಮಗಳು.

೪. ತೆರಳುವುದು, ಕುಳಿತುಕೊಳ್ಳುವುದು, ಏಳುವುದು, ಮೈಮುರಿಯುವುದು, ನಡೆಯುವುದು ಮುಂತಾದ ಕ್ರಿಯೆಗಳು ವಾಯುವಿನ ಪರಿಣಾಮಗಳು.

೫. ಆನಂದಪಡುವುದು, ದು:ಖಪಡುವುದು, ಪ್ರಕಟಪಡಿಸುವುದು, ಮುಚ್ಚಿಡುವುದು ಮುಂತಾದ ಮಾನಸಿಕ ಕ್ರಿಯೆಗಳೆಲ್ಲ ಆಕಾಶ ತತ್ವದ ಪರಿಣಾಮಗಳು. (೩:೧೪೦೪)

ಪಂಚಮಹಾಭೂತತ್ರಯ : ೧. ಸ್ಥೂಲಪಂಚಮಹಾಭೂತ : ಸ್ಥೂಲದೇಹ. (ಸ್ಥೂಲ ಪಂಚಮಹಾಭೂತಗಳಲ್ಲಿ ಇಷ್ಟಲಿಂಗ ಪ್ರತಿಷ್ಠೆ

೨. ಸೂಕ್ಷ್ಮಪಂಚಮಹಾಭೂತ : ಸೂಕ್ಷ್ಮಶರೀರ. (ಸೂಕ್ಷ್ಮ ಪಂಚಮಹಾಭೂತಗಳಲ್ಲಿ ಪ್ರಾಣಲಿಂಗ ಪ್ರತಿಷ್ಠೆ)

೩. ಕಾರಣ ಪಂಚಮಹಾಭೂತ : ಕಾರಣ ಶರೀರ (ಕಾರಣ ಪಂಚಮಹಾಭೂತಗಳಲ್ಲಿ ತೃಪ್ತಿಲಿಂಗ ಪ್ರತಿಷ್ಠೆ) (೧:೧೪೦೨)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಪಂಚಪಾತಕ (ಪಂಚಮಹಾಪಾತಕ) ಪಂಚಾಚಾರ Next