Previous ಭರಿತಾರ್ಪಣ ಭಾವಪಿಂಡಜ್ಞಾನ ಐಕ್ಯಲೇಪಸ್ಥಲ Next

ಭವಚಕ್ರ ಅಥವಾ ಭವರಾಟಳ.

ಭವಚಕ್ರ ಅಥವಾ ಭವರಾಟಳ.

೧. ನಮ್ಮ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮಗಳಲ್ಲಿ ಸುಖದುಃಖಗಳನ್ನು ಅನುಭವಿಸುತ್ತೇವೆ. ಇದು ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳುವುದು ತಪ್ಪು. ಮೊದಲು ಹುಟ್ಟಿ, ಅನಂತರ ಕರ್ಮ ಮಾಡುತ್ತೇವೆಯೋ, ಅಥವಾ ಕರ್ಮ ಮಾಡಿದುದನ್ನು ತೀರಿಸಲು ಮತ್ತೆ ಹುಟ್ಟುತ್ತೇವೆಯೋ ಎಂದು ಕೇಳುವುದು ತಪ್ಪು.

೨. ಇದು ಅನಾದಿ. ಚಕ್ರವು ದುಂಡಗಿರುವುದರಿಂದ ಅದಕ್ಕೆ ಆದಿಯಿಲ್ಲ.

೩. ಮೊದಲು ಕನಸು ಬಿದ್ದು, ಅನಂತರ ಕನಸಿನ ವಸ್ತುಗಳನ್ನು ಅನುಭವಿಸುತ್ತೇವೆಯೋ ಅಥವಾ ಕನಸಿನ ವಸ್ತುಗಳನ್ನು ನೋಡಿದ ನಂತರ ಕನಸು ಪ್ರಾರಂಭವಾಗುತ್ತದೆಯೋ? ಎರಡೂ ಏಕಕಾಲದಲ್ಲಿ ಪ್ರಾರಂಭವಾಗುತ್ತವೆ. ಅಂದರೆ, ನಾವು ಯಾವಾಗ ನಮ್ಮ ಶಿವತ್ವವನ್ನು ಮರೆತು, ಜೀವತ್ವಕ್ಕೆ ಪ್ರಾಧಾನ್ಯತೆ ಕೊಡುತ್ತೇವೆಯೋ ಆಗಲೆ ನಮ್ಮ ಕರ್ಮ ಪ್ರಾರಂಭವಾಯಿತೆಂದರ್ಥ. ಎಲ್ಲಿಯವರೆಗೆ ಈ ಮರೆವು (ಅವಿದ್ಯೆ) ಅಥವಾ ಅಜ್ಞಾನ ಇರುತ್ತದೆಯೋ ಅಲ್ಲಿಯವರೆಗೂ ಕರ್ಮವೂ, ಅದರ ಫಲಗಳನ್ನು ಅನುಭವಿಸಲು ಭವಾಂತರಗಳೂ ಇರುತ್ತವೆ. ಇದಕ್ಕೆ ಆದಿಯೇ ಇಲ್ಲವಾದುದರಿಂದ, ಮತ್ತು ಇದು ಚಕ್ರದಂತೆ ತಿರುಗುತ್ತಲೇ ಇರುವುದರಿಂದ, ಇದು ಭವಚಕ್ರ ಅಥವಾ ಭವರಾಟಳ. (೧:೧೧೬೦)

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಭರಿತಾರ್ಪಣ ಭಾವಪಿಂಡಜ್ಞಾನ ಐಕ್ಯಲೇಪಸ್ಥಲ Next