ಚಾರ್ವಾಕ | ಏಕಾದಶ ಪ್ರಸಾದ |
ಜ್ಞಾನಪಾದೋದಕ |
೧. ಗುರುಪಾದೋದಕ, ಕ್ರಿಯಾಪಾದೋದಕ ಮತ್ತು ಜ್ಞಾನಪಾದೋದಕ ಎಂಬ ತ್ರಿವಿಧಪಾದೋದಕಗಳಲ್ಲಿ ಒಂದು; ತನುತ್ರಯಗಳಲ್ಲಿ ಒಂದಾದ ಕಾರಣದೇಹದ ಶುದ್ಧಿಯನ್ನು ಮಾಡುವ ಪಾದೋದಕ;
ಭಾವಲಿಂಗ- ಸಂಬಂಧವುಳ್ಳ ಈ ಪಾದೋದಕವು ಆಗಾಮಿಕರ್ಮಗಳನ್ನು ನಾಶಮಾಡುವುದು. ಇದನ್ನು ಜಂಗಮಪಾದೋದಕ, ಸಮತೆಜಲ ಎಂಬುದಾಗಿಯೂ ಹೇಳುತ್ತಾರೆ. “ಇದು ಅರ್ಪಣ ಮಾಡುವುದಕ್ಕೆ ಬರುವುದು. ಇದರಿಂದ ಕಾರಣದೇಹಶುದ್ದಿ: ಇದರಲ್ಲಿ ಭಾವಲಿಂಗಸಂಬಂಧ, ಜ್ಞಾನಪಾದೋದಕವೆಂದರೆ, ದಶಾಂಗುಲಿಗಳಲ್ಲಿ ದಶಪ್ರಣವ ಮಂತ್ರದಿಂದ ಭಸ್ಮದಿಂದ ಬರೆದು, ಷೋಡಶೋಪಚಾರದಿಂದ ಪೂಜೆಯ ಮಾಡಿ, ಎರಡಂಗುಲಿ ಮಧ್ಯದಲ್ಲಿ ಮೂರು ಸ್ಥಾನಗಳಲ್ಲಿ ಪಂಚಾಕ್ಷರೀತ್ರಯದಿಂದ ಎರೆಯುವುದು” (ವಚನ, ಸಮವ. ೧೫-೭೮) : ಕರ್ತೃವಾದ ಜಂಗಮವು ಆ ಬಟ್ಟಲಲ್ಲಿದ್ದ ತೀರ್ಥವನ್ನು ತಮ್ಮ ಪಂಚಾಂಗುಲಿಗಳೆ ಪಂಚಪ್ರಾಣವೆಂದು ಭಾವಿಸಿ ...ಬಟ್ಟಲನೆತ್ತಿ ಸಲಿಸಿದಲ್ಲಿ ಜಂಗಮಪಾದೋದಕ- ವೆನಿಸುವುದು ಅದೇ ಜ್ಞಾನಪಾದೋದಕ (ಚೆನ್ನಬ, ಸಮವ. ೩-೪೫೦- ೧೨೭೩); ಗುರುಪಾದೋದಕವೆಂದು ಕ್ರಿಯಾಪಾದೋದಕವೆಂದು ಜ್ಞಾನಪಾದೋದಕವೆಂದು ತೆನುಂಟು ...ಜ್ಞಾನಪಾದೋದಕವೆಂದಡೆ ದಶಾಂಗುಲಿಗಳಲ್ಲಿ ದಶಪ್ರಣವಮಂತ್ರದಿಂದ ಭಸ್ಮದಿಂ ಲಿಖಿಸಿ ಷೋಡಶೋಪಚಾರದಿಂ ಪೂಜೆಯ ಮಾಡಿ ಎರಡಂಗುಲಿ ಮಧ್ಯದಲ್ಲಿ ಮೂಲ ಸ್ಥಾನಂಗಳಲ್ಲಿ ಪಂಚಾಕ್ಷರೀತ್ರಯದಿಂದ ಎಣಿಯುವುದೆ ಜ್ಞಾನಪಾದೋದಕ (ಸಿದ್ಧರಾ. ಸಮವ. ೪-೧೦೮-೩೮೪);
೨. ಏಕೋತ್ತರಜಂಗಮಲಿಂಗಸ್ಥಲದ ನಾಲ್ಕು ವಿಭಾಗಗಳಲ್ಲಿ ಒಂದಾದ ಪಾದೋದಕಲಿಂಗ ತ್ರಿವಿಧಸ್ಥಲಗಳಲ್ಲಿ ಒಂದು : ಪಾದೋದಕಲಿಂಗತ್ರಿವಿಧ ದೀಕ್ಷಾಪಾದೋದಕ ಶಿಕ್ಷಾಪಾದೋದಕ ಜ್ಞಾನಪಾದೋದಕ (ಚೆನ್ನಬ. ಸಮವ. ೩-೨೫೫-೮೪೯); ಪಾದೋದಕಲಿಂಗ ತ್ರಿವಿಧ -ಇದರಲ್ಲಿ ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕ ಎಂದು ಮೂರು ವಿಭಾಗಗಳಿರುತ್ತವೆ ...ಹಿಂದಿನ ಕ್ರಿಯೆಗಳ ಮೂಲಕ ಉಂಟಾಗುವ ಆನಂದೋದಕವು ಜ್ಞಾನಗುರುಮುಖದಿಂದಾದುದು. ಅದು ಜ್ಞಾನಪಾದೋದಕವು
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಚಾರ್ವಾಕ | ಏಕಾದಶ ಪ್ರಸಾದ |