ಪ್ರಣವ | ಪ್ರತಿಷ್ಠೆ |
ಜಂಗಮಪಾದೋದಕ |
ಜಂಗಮನ ಪಾದವನ್ನು ತೊಳೆದು ಸಂಗ್ರಹಿಸಿದ ಪವಿತ್ರ ಜಲ.
೧. ಗುರುಪಾದೋದಕ, ಲಿಂಗಪಾದೋದಕ ಮತ್ತು ಜಂಗಮಪಾದೋದಕ ಎಂಬ ತ್ರಿವಿಧ ಪಾದೋದಕಗಳಲ್ಲಿ ಒಂದು; ತನುತ್ರಯಗಳಲ್ಲಿ ಒಂದಾದ ಕಾರಣತನುವನ್ನು ಶುದ್ಧಗೊಳಿಸುವ ಪಾದೋದಕ; ಜಂಗಮಪಾದೋದಕದಿ೦ದ ಭಾವಲಿಂಗಸಂಬಂಧವು ಉಂಟಾಗುವುದು. ಇದು ಆಗಾಮಿ ಕರ್ಮಗಳನ್ನು ನಾಶಮಾಡುವುದು ಈ ಪಾದೋದಕಕ್ಕೆ ಜ್ಞಾನಪಾದೋದಕ, ಸಮತಾಜಲ ಎಂಬ ಹೆಸರುಗಳೂ ಇವೆ : ಸಮತಾಜಲವೆ ಜಂಗಮಪಾದೋದಕ ...ಜಂಗಮಪಾದೋದಕದಿಂದ ಆಗಾಮಿಕರ್ಮ ನಾಸ್ತಿ (ಚೆನ್ನಬ, ಸಮವ. ೩-೩೮೯-೧೧೨೮).
೨. ಗುರುಪಾದೋದಕ, ಲಿಂಗವಾದೋದಕ, ಜಂಗಮಪಾದೋದಕ, ಸ್ಪರ್ಶನೋದಕ, ಅವಧಾನೋದಕ, ಆಪ್ಯಾಯನೋದಕ, ಹಸ್ತೋದಕ, ಪರಿಣಾಮೋದಕ, ನಿರ್ನಾಮೋದಕ ಮತ್ತು ಸತ್ಯೋದಕ ಎಂಬ ದಶವಿಧ ಪಾದೋದಕಗಳಲ್ಲಿ ಒಂದು;
ತಾತ್ವಿಕದೃಷ್ಟಿಯಿಂದ ಕೆಳಗೆ ಹೇಳಿದಂತೆ ಇವುಗಳನ್ನು ವಿವರಿಸಬಹುದಾಗಿದೆ. ಹೇಗೆಂದರೆ, ಸ್ಪರ್ಶನಗುಣದಿಂದ ಬಂದುದು ಗುರುಪಾದೋದಕವು, ಅಂಗದ ಗುಣವಳಿಯಲು ಲಿಂಗ ಪಾದೋದಕವು, : ಮಹಾಗಣಂಗಳ ಅರಿವನ್ನರಿತುದಾಗಿ ಜಂಗಮಪಾದೋದಕವು ....ಕೇವಲ ಕ್ರಿಯಾ- 1 ದೃಷ್ಟಿಯಿಂದಲೂ ಅವು ಹೇಳಲ್ಪಡುವುವು. ಹೇಗೆಂದರೆ- ಪಾದದಲ್ಲಿ ಸಂಬಂಧಿಸಿದ್ದು ಗುರುಪಾದೋದಕವು, ಆ ಪಾದತೀರ್ಥವನ್ನು ಲಿಂಗಕ್ಕೆ ಸಂಬಂಧಿಸಬೇಕೆಂಬ ಇಚ್ಛೆಯುತ್ಪನ್ನವಾದಲ್ಲಿ ಲಿಂಗೋದಕವು. ಹಾಗೆ ಮಜ್ಜನಕ್ಕೆರೆದಲ್ಲಿ ಮಜ್ಜನೋದಕವು” (ಶಿವಾಕೋ. ೧೦೪-೧೪೧) ;
ಆ ಬಟ್ಟಲಲೆತ್ತಿ ಸಲಿಸಿದ ಜಂಗಮಪಾದೋದಕದಿಂದ ಆವ ಪದವಿ ಎಂದಡೆ ಇಹಪರಕ್ಕೆ ಎಡೆಯಾಡುವ ಅವಸ್ಥೆಗಳನ್ನು ಪರತತ್ವವಾದ ಜಂಗಮವನು ಐಕ್ಯಮಾಡಿ ಅಳವಡಿಸಿಕೊಂಡಿಪ್ಪನು (ಚೆನ್ನಬ, ಸಮವ. ೩-೫೧೪-೧೪೩೨);
ಅರ್ಚನಾಕ್ರಿಯೆಗಳ ತೀರ್ಚಿಸಿ- ಕೊಂಡು ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮಪಾದೋದಕವೆನಿಸುವದಯ್ಯ (ಸಿದ್ಧರಾ. ಸಮವ. ೪-೧೬-೫೧).
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ಪ್ರಣವ | ಪ್ರತಿಷ್ಠೆ |