Previous ಜೀವಾತ್ಮ ಚರ Next

ಷೋಡಶೋಪಚಾರ

ಷೋಡಶೋಪಚಾರ

ದೇವರನ್ನು 16 ಬಗೆಯಾಗಿ ಉಪಚರಿಸುವುದು, 1) ಅರ್ಘ್ಯ 2) ಪಾದ್ಯ, 3) ಆಚಮನ, 4) ಪತ್ರಪುಷ್ಪ, 5) ಗಂಧ, 6) ಅಕ್ಷತೆ, 7) ರುದ್ರಾಕ್ಷಮಾಲಾ, 8) ಛತ್ರ, 9) ಚಾಮರ, 10) ವ್ಯಜನ, 11) ಗೀತ, 12) ವಾದ್ಯ, 13) ನರ್ತನ, 14) ಪ್ರದಕ್ಷಿಣ, 15) ನಮಸ್ಕಾರ, 16) ಸ್ತೋತ್ರ

ದೇವರನ್ನು 16 ಬಗೆಯಾಗಿ ಉಪಚರಿಸುವುದು: 1) ಆವಾಹನ, 2) ಆಸನ, 3) ಪಾದ್ಯ, 4) ಅರ್ಘ್ಯ 5) ಸ್ನಾನೋದ್ವರ್ತನೆ, 6) ವಸ್ತ್ರ 7) ಉಪವೀತ, 8) ಗಂಧ, 9) ಪುಷ್ಟ, 10) ಧೂಪ, 11) ದೀಪ, 12) ನೈವೇದ್ಯ, 13) ಆಚಮನ, 14) ಫಲ, 15) ತಾಂಬೂಲ, 16) ಪ್ರದಕ್ಷಿಣ

ದೇವರನ್ನು 16 ಬಗೆಯಾಗಿ ಉಪಚರಿಸುವುದು:

1 ಆವಾಹನೆ - ಅಂದರೆ ಆಹ್ವಾನ; ದೇವರನ್ನು ಆಹ್ವಾನ ಮಾಡುವುದು.
2 ಆಸನ - ಅಂದರೆ ಕುಳಿತುಕೊಳ್ಳುವ ಜಾಗ; ದೇವರ ಪ್ರತಿಮೆಯನ್ನು ಆಸೀನ ಮಾಡಿಸುವುದು.
3 ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4 ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5 ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.
6 ಸ್ನಾನ - ಶುದ್ಧೋದಕ(ನೀರು) ದಿಂದ ಸ್ನಾನ ಮಾಡಿಸುವುದು.
7 ವಸ್ತ್ರ - ಧರಿಸಲು ಉಡುಪು ಕೊಡುವುದು.
8 ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ, ಕುಂಕುಮ, ಶ್ರೀಗಂಧ, ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9 ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10 ಅರ್ಚನೆ. - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11 ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12 ದೀಪ - ದೀಪ ಸಮರ್ಪಣೆ ಮಾಡುವುದು.
13 ನೈವೇದ್ಯ, - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು
14 ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.
15 ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16 ಪ್ರಾರ್ಥನೆ ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು.

ಅರ್ಘ, ಪಾದ್ಯ, ಆಚಮನ, ಪತ್ರಪುಷ್ಪ, ಗಂಧ, ಅಕ್ಷತೆ, ರುದ್ರಾಕ್ಷಿ ಮಾಲೆ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ, ಸ್ತೋತ್ರ ಎಂಬ ಹದಿನಾರಂಗಗಳ ಆರಾಧನೆ.

Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6

ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಪರಿವಿಡಿ (index)
*
Previous ಜೀವಾತ್ಮ ಚರ Next