*
ಅಂಕಿತ:
|
ಹುಲಿಗೆರೆಯ ವರದ ಸೋಮನಾಥ
|
ಕಾಯಕ:
|
ದಿನಾಲು ತುಂಗಭದ್ರೆಯ ನೀರುತಂದು ದೇವರನ್ನು ಪೂಜಿಸುವುದು ಈತನ ವ್ರತ.
|
ವಿಶ್ವವೆಲ್ಲ ಪಶುವು, ಶಿವನೊಬ್ಬನೆ ಪತಿ, ಬೇರೊಬ್ಬ ಪತಿಯಿಲ್ಲ.
ಇದು ಸತ್ಯವಿದು ಸತ್ಯ.
ನಮ್ಮ ಹುಲಿಗೆರೆಯ ವರದ ಸೋಮನಾಥನಲ್ಲದೆ
ಬೇರೊಬ್ಬರುಂಟಾದರೆ ತೋರಿಕೊಡಿ ಭೋ, ನೀವು ಬಲ್ಲಿರೆ
ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ) ಈತನ ಸ್ಮಳ. ಸೋಮೇಶ್ವರ ಅಧಿದೈವ. ದಿನಾಲು ತುಂಗಭದ್ರೆಯ ನೀರುತಂದು
ದೇವರನ್ನು ಪೂಜಿಸುವುದು ಈತನ ವ್ರತ. ಅಬ್ಬಲೂರಿನಲ್ಲಿ ಜರುಗಿದ ಶಿರಸ್ಸು ಪವಾಡ ಪ್ರಸಂಗದಲ್ಲಿ ಏಕಾಂತರಾಮಯ್ಯನ
ರುಂಡವನ್ನು ಹರಿವಾಣದಲಿಟ್ಟು ಮೆರೆಸಿದವನೀತ. ಉತ್ತರಾರ್ಧ ಜೀವನವನ್ನು ಕಲ್ಯಾಣದಲ್ಲಿ ಕಳೆದನು. ಕಲ್ಲೇದೇವೆರ
ಪುರ (೧೯೭೯), ಮರಡಿಪುರ (೧೧೮೦) ಶಾಸನಗಳಲ್ಲಿ ಈತನ ಉಲ್ಲೇಖ ಬರುತ್ತ ದೆ. ಕಾಲ - ೧೧೬೦. 'ಹುಲಿಗೆರೆಯ
ವರದ ಸೋಮನಾಥ' ಅಂಕಿತದಲ್ಲಿ ಬರೆದ ನಾಲ್ಕು ವಚನಗಳು ದೊರೆತಿವೆ. ಶಿವಮಹಿಮೆ, ಏಕದೇವನಿಷ್ಠೆ, ಲಿಂಗಾಂಗ
ಸಾಮರಸ್ಯದ ರೀತಿಯನರಿಯದ ನರರ ಟೀಕೆ ಇವುಗಳಲ್ಲಿ ಅಭಿವ್ಯಕ್ತವಾಗಿವೆ.
ಆದಂತೆ ಆಗಲಿ, ಮಾದಂತೆ ಮಾಣಲಿ ಎನಲಾಗದು,
ನೇಮದಾತಂಗೆ ಛಲ ಬೇಕು, ಛಲ ಬೇಕು.
ಹಿಡಿದುದ ಬಿಡಲಾಗದಯ್ಯಾ.
ಹುಲಿಗೆರೆಯ ವರದ ಸೋಮನಾಥನು
ಮನಮುಟ್ಟಿದ ಧೀರಂಗಲ್ಲದೆ ಸೋಲುವನಲ್ಲ.
*