*
ಅಂಕಿತ: |
ನಾಚಯ್ಯಪ್ರಿಯ ಮಲ್ಲಿನಾಥಾ |
ಕಾಯಕ: |
ಧರ್ಮ ಪ್ರಸಾರಕ |
೧೦೫೦
ಪೂರ್ವಕರ್ಮವ ಕೆಡಸಿದನೆನ್ನ ಗುರು
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?
೧೧೬೦ರಲ್ಲಿ ಇದ್ದ ಈತನು 'ದಶಗಣ'ರಲ್ಲಿ ಒಬ್ಬನು. ನಾಲ್ಕು ವಚನಗಳು ದೊರೆತಿವೆ. ಅಂಕಿತ 'ನಾಚಯ್ಯಪ್ರಿಯ ಮಲ್ಲಿನಾಥಯ್ಯ' ಬಸವಣ್ಣನವರ ವಚನಗಳ ದಟ್ಟ ಪ್ರಭಾವಕ್ಕೊಳಗಾದ ಈತನ ವಚನಗಳಲ್ಲಿ ಗುರುಭಕ್ತಿ, ಇಷ್ಟಲಿಂಗ ನಿಷ್ಠೆ ಎದ್ದು ತೋರುತ್ತದೆ.
೧೦೫೧
ಮುಂಚಿದೆನಯ್ಯಾ ಪರಬ್ರಹ್ಮವ
ಮುಂಚಿದೆನಯ್ಯಾ ಸಾಲೋಕ್ಯ ಸಾಮೀಪ್ಯ
ಸಾರೂಪ್ಯ ಸಾಯುಜ್ಯ ಪದವಿಯ,
ಮುಂಚಿದೆನಯ್ಯಾ ನಾಚಯ್ಯಪ್ರಿಯ ಮಲ್ಲಿನಾಥಾನಿಮ್ಮಿಂದ.
೧೦೫೨
ಸತಿಸುತ ಮಾತಾಪಿತರಿಗೆಂದು ಹೊನ್ನನ್ನು ಪಡೆಯುವುದು, ಮಾನವರ ಸೇವೆ ಮಾಡುವುದು ಸಲ್ಲದು ಎನ್ನುವ ನಿಲುಮೆ ಆಶ್ಚರ್ಯಕರವಾಗಿದೆ. ಗುರುವಿನಿಂದ ಬದುಕಿದೆನು ನಿಮ್ಮ ಹಂಗೇನು ಎನ್ನುವ ಅವನ ಧೋರಣೆ ಗಮನಾರ್ಹವಾದುದು.
ಸತಿ ಸುತ ಮಾತಾಪಿತರಿಗೆಂದು ಪಡೆದಡೆ ನಿಮ್ಮಾಣೆ ಕಂಡಯ್ಯಾ.
ಮಾನವರ ಸೇವೆಯ ಮಾಡಿದಡೆ ನಿಮ್ಮಾಣೆ ಕಂಡಯ್ಯಾ.
ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯಾ.
ಎನ್ನ ಸತಿಯಲ್ಲದನ್ಯ ಸತಿಗಳುಪಿದಡೆ ನಿಮ್ಮಾಣೆ ಕಂಡಯ್ಯಾ.
ತನು ಮನ ಧನ ವಂಚನೆಯಾದಡೆ
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ, ನಿಮ್ಮಾಣೆ ಕಂಡಯ್ಯಾ.
೧೦೫೩
ಹೆಂಡಿರೆನ್ನದ ಮಕ್ಕಳೆನ್ನದ ತೊತ್ತಿರೆನ್ನದ
ಬಂಟರೆನ್ನದ ಹಗೆಗಳೆನ್ನದ ತಪ್ಪೆನ್ನದಯ್ಯಾ.
ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ತಪ್ಪೆನ್ನದಯ್ಯಾ.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ನೀನಿರ್ದವರ ನೀನೆನ್ನದ ತಪ್ಪೆನ್ನದಯ್ಯಾ.
*