Previous ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಲದ್ದೆಯ ಸೋಮಯ್ಯ/ಲದ್ದೆಯ ಸೋಮ Next

ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮ

*
ಅಂಕಿತ: ಶ್ರೀಗುರು ಸಿದ್ಧೇಶ್ವರ
ಕಾಯಕ: ಹೂವಿನ ದಂಡೆ ಕಟ್ಟುವುದು

1205
ಲಿಂಗಬಾಹ್ಯನ, ಆಚಾರಭ್ರಷ್ಟನ, ವ್ರತತಪ್ಪುಕನ,
ಗುರುಲಿಂಗಜಂಗಮವ ಕೊಂದವನ,
ಪಾದೋದಕ ಪ್ರಸಾದ ದೂಷಕನ,
ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ,
ಶಕ್ತಿಯುಳ್ಳಡೆ ಸಂಹಾರವ ಮಾಡುವುದು.
ಶಕ್ತಿಯಿಲ್ಲದಿದ್ದಡೆ ಕಣ್ಣು ಕರ್ಣವ ಮುಚ್ಚಿಕೊಂಡು
ಶಿವಮಂತ್ರ ಜಪಿಸುವುದು.
ಅಷ್ಟೂ ಆಗದಿದ್ದಡೆ, ಆ ಸ್ಥಳವ ಬಿಡುವುದು.
ಅದಲ್ಲದಿದ್ದಡೆ, ಕುಂಬಿಪಾತಕ ನಾಯಕನರಕದಲ್ಲಿಕ್ಕುವ
ಶ್ರೀಗುರುಸಿದ್ಧೇಶ್ವರನು.

ಈಕೆ ಬಸವಣ್ಣನವರ ಸಮಕಾಲೀನರಾದ ರೇವಣಸಿದ್ದಯ್ಯನೆಂಬುವನ ಹೆಂಡತಿ. ಶಿವಲಿಂಗಕ್ಕೆ ಹೂವಿನದಂಡೆ ಕಟ್ಟಿ ಅರ್ಪಿಸುವ ಕಾಯಕದಲ್ಲಿ ತೊಡಗಿದ್ದಳೆಂದು ಪುರಾಣಗಳು ತಿಳಿಸುತ್ತವೆ. ಕಾಲ-೧೧೬೦. 'ಶ್ರೀಗುರು ಸಿದ್ಧೇಶ್ವರ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದ್ದು, ಗಣಾಚಾರ ನಿಷ್ಠೆಯನ್ನು ವ್ಯಕ್ತಪಡಿಸುತ್ತದೆ.


*
Previous ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಲದ್ದೆಯ ಸೋಮಯ್ಯ/ಲದ್ದೆಯ ಸೋಮ Next