ಮಹಾಲಿಂಗ ವೀರ ರಾಮೇಶ್ವರ ??

*

ಈ ಅಂಕಿತದ ವಚನದ ಕರ್ತೃ ಅಜ್ಞಾತ. ಕಾಲ ಸು. 1500 ಒಂದೇ ವಚನ ದೊರೆತಿದೆ. ಅದರಲ್ಲಿ ಗುರುವಿನ ಉಪದೇಶದ ಮಹಿಮೆಯನ್ನು ಸುಂದರ ಉಪಮೆಗಳ ಮೂಲಕ ಬಣ್ಣಿಸಲಾಗಿದೆ.

ಬಯಲೊಳೆರಗಿದ ಸಿಡಿಲಿನಂತಾಯಿತ್ತೆನ್ನ ಗುರುವಿನುಪದೇಶ.
ಮಿಂಚಿನ ಪ್ರಭೆಯ ಸಂಚದಂತಾಯಿತ್ತೆನ್ನ ಗುರುವಿನುಪದೇಶ.
ಸ್ಫಟಿಕದ ಘಟದೊಳಗಣ ಜ್ಯೋತಿಯಂತಾಯಿತ್ತೆನ್ನ ಗುರುವಿನುಪದೇಶ
ಮಹಾಲಿಂಗ ವೀರರಾಮೇಶ್ವರನಂತಾಯಿತ್ತೆನ್ನ
ಗುರುವಿನುಪದೇಶವೆನಗಯ್ಯಾ. /೧೩೪೮ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previousಮರ್ಕಟೇಶ್ವರ ??ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ ??Next
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.