*
ಅಂಕಿತ: |
ನಾಸ್ತಿನಾಥ |
ಕಾಯಕ: |
ಭಕ್ತರಿಗೆ ಧೂಪ (ಗಂಧದ ಕಡ್ಡಿ) ಅರ್ಪಿಸುವುದು |
೭೭೬
ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ.
ಕೇರಳದ ಅವಲೂರು ಈಕೆಯ ಸ್ಥಳ. ಕಾಲ ೧೧೬೦. ಧೂಪದ ಕಾಯಕದವಳಾದುದರಿಂದ 'ಧೂಪದ ಗೊಗ್ಗವ್ವೆ' ಎಂದೂ ಪ್ರಸಿದ್ಧಳಾಗಿದ್ದಾಳೆ. ಶಿವ ಮೋಹಿತಳಾದ ಈಕೆ ಲೌಕಿಕ ಮದುವೆಯನ್ನು ನಿರಾಕರಿಸಿ ವಿರಾಗಿಣಿಯಾಗಿ ಕಲ್ಯಾಣಕ್ಕೆ ಬರುತ್ತಾಳೆ. 'ನಾಸ್ತಿನಾಥಾ' ಅಂಕಿತದಲ್ಲಿ ೬ ವಚನಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಲಿಂಗಾಂಗ ಸಾಮರಸ್ಯ, ಸ್ತ್ರೀ ಪುರುಷ ಸಮಾನತೆಯ ಚಿಂತನೆಗೆ ಅದ್ಯತೆ ನೀಡಲಾಗಿದೆ. ಸರಳ ಭಾಷೆ, ವೃತ್ತಿಪರಿಭಾಷೆಯ ಬಳಕೆಯಿಂದ ವಚನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.
೭೭೯
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾಥಾ?
೭೭೭
ಭಕ್ತರು ಜಂಗಮದಲ್ಲಿ ಕಟ್ಟಿ ಹೋರಲೇಕೆ ?
ಧೂಪದ ಹೊಗೆ ಎತ್ತ ಹೋದಡೂ ಸರಿ.
ಇದು ಸತ್ಯವೆಂದೆ ನಾಸ್ತಿನಾಥಾ.
*