Previous ಚಂದಿಮರಸ ಜಗಳಗಂಟ ಕಾಮಣ್ಣ Next

ಜಕ್ಕಣ್ಣಯ್ಯ

*
ಅಂಕಿತ: ಝೇಂಕಾರ ನಿಜಲಿಂಗ ಪ್ರಭುವೆ

೧೨೬೧
ಸಂಗನಬಸವಣ್ಣನೇ ಎನ್ನ ಗುರುವು.
ಚನ್ನಬಸವಣ್ಣನೇ ಎನ್ನ ಲಿಂಗವು.
ಅಲ್ಲಮಪ್ರಭುವೇ ಎನ್ನ ಜಂಗಮವು
ಇದು ಕಾರಣ, ಈ ಗುರುಲಿಂಗಜಂಗಮವನರಿತು ನಾನು ಬದುಕಿದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.

ಅಧಿಕ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದರೂ ಈತನ ಜೀವನದ ಬಗ್ಗೆ ಯಾವ ಸಂಗತಿಗಳೂ ದೊರಿತಿಲ್ಲ. ಕಾಲ ಸು.೧೮೦೦. 'ಝೇಂಕಾರ ನಿಜಲಿಂಗ ಪ್ರಭುವೆ' ಅಂಕಿತದಲ್ಲಿ ೭೭೮ ವಚನಗಳು ದೊರೆತಿವೆ. ಇವುಗಳನ್ನು ೧೮ ಸ್ಥಲಗಳ ಅಡಿಯಲ್ಲಿ ಸಂಕಲಿಸಲಾಗಿದ್ದು, ಈ ಕೃತಿಗೆ 'ನಿರಾಳ ಮಂತ್ರಗೋಪ್ಯ' ಎಂದು ಕರೆಯಲಾಗಿದೆ. ಯೋಗ ರಹಸ್ಯವನ್ನು ಬೆಡಗಿನ ನುಡಿಗಳಲ್ಲಿ ಹೇಳುವುದು ಈ ವಚನಗಳ ಉದ್ದೇಶವಾಗಿದೆ.

೧೨೫೯
ಸಂಗನಬಸವಣ್ಣನೆ ಅಂಗ, ಚನ್ನಬಸವಣ್ಣನೆ ಲಿಂಗ,
ಅಲ್ಲಮಪ್ರಭುದೇವರೇ ಸಂಬಂಧ ನೋಡಾ.
ಇದು ಕಾರಣ ಅಂಗಲಿಂಗಸಂಬಂಧವನರಿತು ಆಚರಿಸಬಲ್ಲಾತನೆ
ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.

ಲಿಂಗಾಯತದ ತಾತ್ತ್ವಿಕ ಸಿದ್ಧಾಂತದ ಕಡೆಗೆ ಹೆಚ್ಚಿನ ಒಲವು. ವಚನಗಳಲ್ಲಿ ಬೆಡಗಿನ ಬಳಕೆ ಹೆಚ್ಚು. ಇವನ ವಚನಗಳಲ್ಲಿ ವಜೀರ, ತಳವಾರ, ಹವಾಲ್ದಾರ, ಚಾವಡಿ, ಠಾಣೆ ಮೊದಲಾದ ಶಬ್ದಗಳು ಕಂಡುಬಂದಿವೆ

೧೪೬೭
ಹೊನ್ನು ಹೆಣ್ಣು ಮಣ್ಣು ಬಿಟ್ಟು
ಸರ್ವಸಂಗವ ಪರಿತ್ಯಾಗವಂ ಮಾಡಿ ನಿಂದ ನಿಃಕಲಂಗೆ
ಪೂರ್ವಾಶ್ರಯ ಉಂಟೇನಯ್ಯ?
ಆ ನಿಃಕಲತ್ವವನಳಿದು,
ಮರಳಿ ಹೊನ್ನ ಹಿಡಿಯಲಾಗದು,
ಮರಳಿ ಹೆಣ್ಣ ಹಿಡಿಯಲಾಗದು,
ಮರಳಿ ಮಣ್ಣ ಹಿಡಿಯಲಾಗದು.
ಇಂತೀ ತ್ರಿವಿಧಗುಣಗಳಿಗೆ ಸಿಲ್ಕಿ,
ಬಯಲಾಶ್ರಯದಲ್ಲಿ ಬಯಲಾಟವ ಹೂಡಿ
ಬಯಲನಿಬ್ಬೆರಗನೈದಿ ಹೋಗುವ ಮಹೇಶ್ವರನ
ಪಾದೋದಕ ಪ್ರಸಾದವ ಭೇದಿಸಿ ಕೊಂಬ ಭಕ್ತನ ದೃಢವೆಂತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.


*
Previous ಚಂದಿಮರಸ ಜಗಳಗಂಟ ಕಾಮಣ್ಣ Next