Previous ಹೆಂಡದ ಮಾರಯ್ಯ ಸಗರದ ಬೊಮ್ಮಣ್ಣ Next

ಹೊಡೆಹುಲ್ಲ ಬಂಕಣ್ಣ

*
ಅಂಕಿತ: ಜಗನ್ನಾಥ ಸಾಕ್ಷಿಯಾಗಿ ಕುಂಭೇಶ್ವರ ಲಿಂಗ
ಕಾಯಕ: ಹುಲ್ಲು ಮಾರುವುದು

೧೨೧೩
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.

ಹುಲ್ಲು ಮಾರುವ ಕಾಯಕ ಕೈಕೊಂಡಿದ್ದ ಬಂಕಣ್ಣನ ಕಾಲ-೧೧೬೦. 'ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ' ಎಂಬುದು ಈತನ ಅಂಕಿತ. ೧೦ ವಚನಗಳು ದೊರೆತಿವೆ. ಪ್ರಸಾದದ ಮಹತಿ, ಶುದ್ಧಕಾಯಕ, ಶರಣರ ಸ್ತುತಿ ಅವುಗಳಲ್ಲಿದೆ. ಕೆಲವು ಬೆಡಗಿನ ರೂಪದಲ್ಲಿವೆ.

೧೨೧೧
ಭಯಭಕ್ತಿಯಿಂದ ಸಂಗನಬಸವಣ್ಣನ ಶ್ರೀಪಾದವ ಕಂಡೆನು.
ಅನುಮಿಷ ದೃಷ್ಟಿಯಿಂದ ಚೆನ್ನಬಸವಣ್ಣನ ಶ್ರೀಪಾದವ ಕಂಡೆನು.
ಸುಜ್ಞಾನದ ಬೆಳಗಿನಿಂದ ಪ್ರಭುದೇವರ ಶ್ರೀಪಾದವ ಕಂಡೆನು.
ಇಂತೀ ಮೂವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥ ಸಾಕ್ಷಿಯಾಗಿ.

ಹೊಡೆ = ಅದೇ ಆಗ ಹುಟ್ಟಿದ ತೆನೆ

*
Previous ಹೆಂಡದ ಮಾರಯ್ಯ ಸಗರದ ಬೊಮ್ಮಣ್ಣ Next