Previous ಆನಂದ ಸಿದ್ಧೇಶ್ವರ ಏಕಾಂತವೀರ ಸೊಡ್ಡಳ Next

ಈಶ್ವರೀಯ ವರದ ಚೆನ್ನರಾಮ

*

ಈ ಅಂಕಿತನ ಕರ್ತೃವಿನ ಹೆಸರು ತಿಳಿದಿಲ್ಲ. ಕಾಲ ಸುಮಾರು 1650. ಒಂದು ವಚನ ಮಾತ್ರ ದೊರೆತಿದೆ. ವೈರಾಗ್ಯ ಭೋಧೆ ಅದರ ಗುರಿಯಾಗಿದೆ

ಶರೀರದ ನಶ್ವರತೆಯ ಪ್ರತಿಪಾದನೆ

ರಾಶಿಹೊನ್ನು ಸಾಸಿರಕನ್ಯೆಯೇಸಿಕೆ ರಾಜ್ಯವಾದಡೂ
ಈ ಶರೀರವಳಿವುದೆ ದಿಟ !
ಇದರಾಸೆಯ ನೀಗಾಡಿ,
ಈಶ್ವರೀಯ ವರದ ಚೆನ್ನರಾಮನೆಂಬ ಲಿಂಗವನಾಸೆಗೆಯ್ದಡೆ,
ಮುಂದೆ ಲೇಸಪ್ಪುದು ಕಾಣಿರಣ್ಣಾ. /೧೨೨೧
[1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ಆನಂದ ಸಿದ್ಧೇಶ್ವರ ಏಕಾಂತವೀರ ಸೊಡ್ಡಳ Next