Previous ನಿಜಮುಕ್ತಿ ರಾಮೇಶ್ವರ ಹೇಮಗಲ್ಲ ಹಂಪ Next

ನಿರ್ಧನಪ್ರಿಯ ರಾಮೇಶ್ವರ

*

ಸು. 1650ರಲ್ಲಿ ಇದ್ದಿರಬಹುದಾದ ಈ ಅಂಕಿತದ ವಚನದ ಕರ್ತೃವಿನ ಹೆಸರು ದೊರೆತಿಲ್ಲ. ಉಪಲಬ್ಧವಾದ ಒಂದೇ ವಚನ ತೀವ್ರವೈರಾಗ್ಯವನ್ನು ನಿರೂಪಿಸುತ್ತಿದ್ದು, ಮಹಾದೇವಿಯಕ್ಕನ ವಚನವನ್ನು ನೆನಪಿಸುತ್ತದೆ.

ನಡಸು ದೇವಾ ಭಿಕ್ಷಾಯೆಂಬ ಶಬ್ದಕ್ಕೆ.
ಅಲ್ಲಿ ಹೋಗಿ ಭಿಕ್ಷಾ ಭಿಕ್ಷಾಯೆಂದಡೆ
ಆರೂ ನೀಡದಂತೆ ಮಾಡು.
ತಥಾಪಿಸಿ ನೀಡಿದಡೆ,
ಆ ನೀಡುವ ಹಂಚು ಎಡಹಿ ಒಡೆವಂತೆ ಮಾಡು,
ನಿರ್ಧನಪ್ರಿಯ ರಾಮೇಶ್ವರಾ. /೧೩೪೧ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ನಿಜಮುಕ್ತಿ ರಾಮೇಶ್ವರ ಹೇಮಗಲ್ಲ ಹಂಪ Next