Previous ನಂಜುಂಡ ಶಿವ ನಿರ್ಧನಪ್ರಿಯ ರಾಮೇಶ್ವರ Next

ನಿಜಮುಕ್ತಿ ರಾಮೇಶ್ವರ

*

ಈ ಅಂಕಿತದಲ್ಲಿ ಈಗ ಒಂದು ವಚನ ಮಾತ್ರ ದೊರೆತಿದೆ. ಕರ್ತೃವಿನ ಹೆಸರು ದೊರೆತಿಲ್ಲ. ಸು. 1650ರಲ್ಲಿ ಇದ್ದಿರಬೇಕು. ವೈರಾಗ್ಯಬೋಧೆ ಈ ವಚನದ ಆಶಯವಾಗಿದೆ.

ಸಕಲ ವಿಷಯ ದಾಳಿಗೆ ಸಿಲುಕದುದೆ ಬಾಳು ಎಂಬ ತತ್ವ ಪ್ರತಿಪಾದನೆ

ತನುವಿಕಾರದಿಂದ ಸವೆದು ಸವೆದು,
ಮನವಿಕಾರದಿಂದ ನೊಂದು ಬೆಂದವರೆಲ್ಲ ಬೋಳಾಗಿ,
ದಿನ ಜವ್ವನಂಗಳು ಸವೆದು ಸವೆದು,
ಜಂತ್ರ ಮುರಿದು ಗತಿಗೆಟ್ಟವರೆಲ್ಲ ಬೋಳಾಗಿ,
ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ,
ಹೊನ್ನು ಹೆಣ್ಣು ಮಣ್ಣಿಗೆರಗದುದೆ ಬಾಳು.
ಸಕಲವಿಷಯದ ದಾಳಿಗೆ ಸಿಲುಕದುದೆ ಬಾಳು.
ಇದಲ್ಲದೆ ಗತಿಗೆಟ್ಟು, ಧಾತುಗೆಟ್ಟು, ವೃಥಾ ಬೋಳಾದ ಬಾಳು
ಲೋಕದ ಗೋಳಲ್ಲವೆ ಹೇಳು,
ನಿಜಮುಕ್ತಿ ರಾಮೇಶ್ವರಾ. /೧೩೪೦ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ನಂಜುಂಡ ಶಿವ ನಿರ್ಧನಪ್ರಿಯ ರಾಮೇಶ್ವರ Next