Previous ಕಲಕೇತಯ್ಯ ಕಾಲಕಣ್ಣಿಯ ಕಾಮಮ್ಮ Next

ಕಾಟಕೂಟಯ್ಯಗಳ ಪುಣ್ಯಸ್ಥ್ರೀ ರೇಚವ್ವೆ

*
ಅಂಕಿತ: ನಿಜಶಾಂತೇಶ್ವರ

೭೪೯
ಬಂಜೆಯಾವಿಂಗೆ ಕ್ಷೀರವುಂಟೆ ?
ವ್ರತಹೀನನ ಬೆರೆಯಲುಂಟೆ ?
ನೀ ಬೆರೆದಡೂ ಬೆರೆ; ನಾನೊಲ್ಲೆ ನಿಜಶಾಂತೇಶ್ವರಾ.
ಬಂಜೆಯಾವಿಂಗೆ ಕ್ಷೀರವುಂಟೆ ?
ವ್ರತಹೀನನ ಬೆರೆಯಲುಂಟೆ ?
ನೀ ಬೆರೆದಡೂ ಬೆರೆದ ನಾನೊಲ್ಲೆ ನಿಜಶಾಂತೇಶ್ವರಾ.

ಕಾಟಕೂಟಯ್ಯ ಈಕೆಯ ಪತಿ. ಶರಣನಾಗುವುದಕ್ಕಿಂತ ಪೂವ೯ದಲ್ಲಿ ವೀರಗೊಲ್ಲಾಳನಿಗೆ 'ಕಾಟಕೂಟಯ್ಯ' ಎ೦ದು ಕರೆಯುತ್ತಿದ್ದರೆಂದು ತಿಳಿದುಬರುತ್ತದ. ಹೀಗಿದ್ದ ಪಕ್ಷದಲ್ಲಿ ಈಕೆ ವೀರಗೊಲ್ಲಾಳನ ಸತಿಯೆಂದು ಹೇಳಬೇಕಾಗುತ್ತದೆ. ಗೊಲ್ಲಾಳನ ಸ್ಥಳ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ. ವೃತ್ತಿಯಿಂದ ಕುರಿಕಾಯುವ ಕುರುಬ. ಇದರಿಂದ ರೇಚವ್ವೆಯೂ ಮೂಲತಃ ಗೋಲಗೇರಿಯವಳಾಗಿದ್ದು ನಂತರ ಕಲ್ಯಾಣಕ್ಕೆ ಬಂದಿರಬೇಕು. ಕಾಲ - ೧೧೬೦. 'ನಿಜಶಾಂತೇಶ್ವರ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ವ್ರತಾಚಾರನಿಷ್ಠೆ ಈ ವಚನದ ಆಶಯವಾಗಿದೆ.


*
Previous ಕಲಕೇತಯ್ಯ ಕಾಲಕಣ್ಣಿಯ ಕಾಮಮ್ಮ Next