ಆನಂದಯ್ಯ

*
ಅಂಕಿತ: ಆನಂದ ಸಿಂಧು ರಾಮೇಶ್ವರ

ಪಾಷಾಣವ ಹಿಡಿದು ಮಾರಿಯ ಸಂಗವ ಮಾಡುವಿರಿ,
ಘಾಸಿಯಾಗಿ ಜನ್ಮಜನ್ಮಕ್ಕೆ [ಬ]ಹಿರಿ.
ಈಶನ ಕಂಡೆನೆಂಬುದು ಅಳಿಯಾಸೆ.
ಈ ದೋಷಿಗಳಿಗೆ
ಆನಂದಸಿಂಧು ರಾಮೇಶ್ವರ ಹೇಸುವ.

ಕಾಲ-೧೬೫೦. 'ಆನಂದ ಸಿಂಧು ರಾಮೇಶ್ವರ' ಆಂಕಿತದಲ್ಲಿ ಎರಡು ವಚನಗಳು ದೊರೆತಿವೆ. ಇವುಗಳಲ್ಲಿ ವೈರಾಗ್ಯಪರ ಧೋರಣೆ ವ್ಯಕ್ತವಾಗಿದೆ. ಕ್ಷುದ್ರದೇವತಾರಾಧನೆಯನ್ನು ಟೀಕಿಸಿರುವನು. ದೇಹದ ಮೇಲಿನ ಅತ್ಯಾಸಕ್ತಿಯನ್ನು ಬಿಟ್ಟರೆ ಪರಮಾತ್ಮನಲ್ಲಿ ಐಕ್ಯ ಸಾಧ್ಯವಾಗುವುದೆನ್ನುವನು.

ರೇತ ರಕ್ತವು ಕೂಡಿದ ಒಡಲು
ಭೂತವಿಕಾರದಿಂದ ಚಲಿಸುತ್ತಿಹುದು,
ಕೀಳುದೊತ್ತಿನ ಕೈಯಲಳಿವುದು.
ಇದರ ತೂಳವ ಬಿಟ್ಟಡೆ
ಆನಂದಸಿಂಧು ರಾಮೇಶ್ವರಲಿಂಗದ ನಿಜಪದವಪ್ಪುದು ಕಾಣಿರೇ.

ಪರಿವಿಡಿ (index)
*
Previousಆದಯ್ಯಉಗ್ಘಡಿಸುವ ಗಬ್ಬಿದೇವಯ್ಯNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.