ರಾಯಸದ ಮಂಚಣ್ಣ

*
ಅಂಕಿತ: ಜಾಂಬೇಶ್ವರ
ಕಾಯಕ: ಪತ್ರಗಳನ್ನು ಮುಟ್ಟಿಸುವ ನಿಯೋಗಿ

ತೊಳೆದಡೆ ಮಡಿ, ಮಾಸಿದಡೆ ಮೈಲಿಗೆ.
ಅರಿದಡೆ ತಾನು, ಮರದಡೆ ಜಗದೊಳಗೆಂಬುದನರಿ.
ಹಿಡಿದು ಬಿಟ್ಟೊಡನೆ ಕೈಮೀರಿದಡೆ,
ಮತ್ತೆ ಮರುಗಿದಡಿಲ್ಲ, ಜಾಂಬೇಶ್ವರಾ.

ಈತ ಕಲ್ಯಾಣದಲ್ಲಿ ಬಸವಣ್ಣನವರ ಪತ್ರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಒಬ್ಬ ನಿಯೋಗಿ. ರಾಯಮ್ಮ ಈತನ ಸತಿ. ಕಾಲ-೧೧೬೦. 'ಜಾಂಬೇಶ್ವರ' ಅಂಕಿತದಲ್ಲಿ ೧೦ ವಚನಗಳನ್ನು ರಚಿಸಿದ್ದಾನೆ. ಅವು ತುಂಬ ಸರಳವಾಗಿದ್ದು, ಇಷ್ಟಲಿಂಗ ದ ಮಹತ್ವ, ಮನದ ವಿಕಾರ, ಇಂದ್ರಿಯ ನಿಗ್ರಹ ಅರಿವು, ಆಚಾರವನ್ನು ಕುರಿತು ಹೇಳುತ್ತವೆ. ಬಳಸಿದ ಉಪಮೆ ದೃಷ್ಟಾಂತಗಳು ಅರ್ಥಪೂರ್ಣ.

ಬರೆದು ಮತ್ತೆ ತೊಡೆದಡೆ ಅಲೇಖ ಶುದ್ಧವಲ್ಲ ಎಂದೆ.
ಹಿರಿದು ಮತ್ತೆ ಮರೆದಡೆ ಆ ಅರಿವಿಂಗೆ ಭಂಗವೆಂದೆ.
ಸತ್ತ ಮತ್ತೆ ಸಮುದ್ರವೂ ಸರಿ, ಒಕ್ಕುಡುತೆಯುದಕವೂ ಸರಿ, ಜಾಂಬೇಶ್ವರಾ.

ಇಷ್ಟಲಿಂಗ ವನ್ನು ಮರೆಯಬಾರದು. ಮನ ವಿಕಾರವಾಗುವ ಮೊದಲು ಮಹದಲ್ಲಿ ನಿಂತರೆ ಇಂದ್ರಿಯಗಳು ಏನೂ ಮಾಡಲಾರವು. ಅರಿವನ್ನು ಅರಿತು ಆಚರಿಸಬೇಕು. ಅರಿವು ಮರೆತರೆ ಭವವು ತಪ್ಪದೆ ಮರುಕಳಿಸುತ್ತದೆ. ಆದಕಾರಣ, ಅಂಗದಲ್ಲಿರುವ ಲಿಂಗಯ್ಯನನ್ನು ಅರಿಯಬೇಕು. ಹೆಣ್ಣು ಹೊನ್ನು ಮಣ್ಣೆಂಬ ಬಲೆಗೆ ಸಿಲುಕಿ ಒದ್ದಾಡಬಾರದು.

ಉಂಬಡೆ ಬಂದು ಬಾಯ ಮರದೆನೆಂದು
ಮೊರೆಯಿಡುತಿಪ್ಪ ಅರಿಕೆಹೀನನ ತೆರನಂತಾಯಿತ್ತು.
ಅರಿಕೆಯವರಿ ಎಂದು ಕುರುಹ ಕೊಟ್ಟ,
ಆ ಕುರುಹ ಮರದು ಅರಿದೆನೆಂಬ ಕುರುಬರ ನೋಡಾ, ಜಾಂಬೇಶ್ವರಾ.


*
Previousಮೋಳಿಗೆ ಮಾರಯ್ಯರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.