*
ಅಂಕಿತ:
|
ನಾಚಯ್ಯ ಪ್ರಿಯ ಚೆನ್ನರಾಮ
|
ಕಾಯಕ:
|
ಗಾಣಿಗ ವೃತ್ತಿ
|
ಹಸಿವಿಂಗೆ ಲಯವಿಲ್ಲ, ವಿಷಯಕ್ಕೆ ಕುಲವಿಲ್ಲ;
ಮರಣಕ್ಕೆ ಮನ್ನಣೆಯಿಲ್ಲ, ಆಸೆಗೆ ಹವಣಿಲ್ಲ,
ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ.
ಈತನ ಸ್ಥಳ ಮಾರುಡಿಗೆ, 'ಅನಾಮಿಕ' ಎಂಬ ವಿಶೇಷಣ ಈತ ಶೂದ್ರನಿರೆಬೇಕೆಂದು ಸೂಚಿಸುತ್ತದೆ. ಕಾಯಕ-ಗಾಣಿಗ
ವೃತ್ತಿ, 'ನಾಚಯ್ಯ ಪ್ರಿಯ ಚೆನ್ನರಾಮ' ಅಂಕಿತದಲ್ಲಿ ಐದು ವಚನಗಳು ದೊರೆತಿವೆ. ಬೆಡಗಿನ
ಪರಿಭಾಷೆಯ ಅವುಗಳಲ್ಲಿ ತಾತ್ವಿಕ ವಿಷಯದ ಪ್ರತಿಪಾದನೆಯಿದೆ.
ಜಂಬೂದ್ವೀಪ ಕಡವರ ದ್ವೀಪ, ಮಧ್ಯಗಿರಿ, ಪಾತಾಳಕ್ಕೆ ಬೇರುವರಿದು
ಈರೆಂಟು ಲಕ್ಷಯೋಜನ ಪರಿಪ್ರಮಾಣ,
ಮೇಲೇಳಿಗೆಯಲ್ಲಿ ಎಂಬತ್ತುನಾಲ್ಕು ಲಕ್ಷ ಯೋಜನ ಪರಿಪ್ರಮಾಣ,
ನಾಚಯ್ಯಪ್ರಿಯ ಚೆನ್ನರಾಮನಾಥನ ಗಣಂಗಳ ಒಡ್ಡೋಲಗ
ಮೂವತ್ತಾರುಲಕ್ಷ ಯೋಜನ ವಿಸ್ತೀರ್ಣ.
ವರ್ಮವ ನುಡಿ[ವ]ರೆಂದು ಸಮನಿಸಲಾರೆ.
ತಮ್ಮಾ ನಿಮ್ಮನೆತ್ತಿಕೊಂಡು ನೊಂದೆ,
ತಮ್ಮಾ ನಿಮ್ಮನಿಳುಹಲಾರದೆ ನೊಂದೆ.
ತಮ್ಮಾ ಅಗಮ್ಯ ನಾಚಯ್ಯಪ್ರಿಯ ಚೆನ್ನರಾಮೇಶ್ವರನ ನೆಮ್ಮಿ
ತಮ್ಮನನಿಳುಹಿದೆ.
*