ನಿಜಗುಣಯೋಗಿ

*
ಅಂಕಿತ: ನಿಜಗುಣಯೋಗಿ

೧೨೬೪
ಅಗ ಲಿಂಗವೆಂಬನ್ನಕ್ಕ
ಯೋಗಪೂಜೆ ಪುಂಣ್ಯಕ್ಕೆ ಬೀಜ.
ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು.
ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ
ನಿಜಗುಣಯೋಗಿ.

ಈತನ ಸ್ಥಳ-ಚಿಮ್ಮಲಗಿ. ಚಂದಿಮರಸ ಈತನ ಶಿಷ್ಯ. ಕಾಲ ೧೧೬೦ 'ನಿಜಗುಣಯೋಗಿ' ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ಬರೆದಿದ್ದಾನೆ. ಈಗ ದೊರೆತ ೧೬ ವಚನಗಳಲ್ಲಿ ಶಿವಯೋಗದ ಪ್ರತಿಪಾದನೆ ಮುಖ್ಯವಾಗಿದೆ. ಕೆಲವು ಸೂತ್ರಪ್ರಾಯವಾದ ಮಾತುಗಳಲ್ಲಿ ಅನುಭಾವ ಹರಳುಗಟ್ಟಿದೆ. ಈತನ ಘನವ್ಯಕ್ತಿತ್ವವನ್ನು ಅನೇಕ ಶರಣರು ಕೊಂಡಾಡಿದ್ದಾರೆ.

೧೨೭೬
ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು.
ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು.ಇದಲ್ಲದೆ,
ಭಕ್ತನೂ ನಾ (ನಾ ಜಂಗ)ಮವೂ ನಾನೆ ಎಂದಡಾ
ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ,
ಆನಂದ ನಿಜಗುಣಯೋಗಿ.

೧೨೬೬
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ!
ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ
ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ.
ನಿಜಗುಣವೆಂಬ ಆನಂದರತ್ನವ
ನುಂಗಿದ ರುಚಿಯನು ಏನೆಂದು ಉಪಮಿಸುವೆ?


*
Previousಅಕ್ಕನಾಗಮ್ಮ/ನಾಗಲಾಂಬಿಕೆ/ನಾಗಮ್ಮನಿರಾಲಂಬ ಪ್ರಭುದೇವNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.